Advertisement

ಮಹಿಳಾ ಸುರಕ್ಷತೆಗಾಗಿ ಬೆಂಗಳೂರಿಗೆ 667 ಕೋಟಿ

11:27 AM Aug 04, 2018 | Team Udayavani |

ನವದೆಹಲಿ: ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಟ್ಟು 2,919 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಲೋಕಸಭೆಗೆ ಸರ್ಕಾರ ಮಾಹಿತಿ ನೀಡಿದೆ. ಈ ಪೈಕಿ, ಬೆಂಗಳೂರಿಗಾಗಿ 667 ಕೋಟಿ ರೂ.ಗಳನ್ನು ಒದಗಿಸಲು ಒಪ್ಪಿಗೆ ನೀಡಲಾಗಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ವ್ಯವಸ್ಥೆ, ಕ್ಷಿಪ್ರ ಕಾರ್ಯಪಡೆಗೆ ವಾಹನಗಳು, ಪೊಲೀಸ್‌ ಠಾಣೆಗಳಲ್ಲಿನ ಮಹಿಳಾ ಸಹಾಯವಾಣಿಗಳಲ್ಲಿ ಎನ್‌ಜಿಒಗಳ ಪ್ರತಿನಿಧಿಗಳ ನೇಮಕ, ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಸೇವಾ ಘಟಕಗಳ ಸ್ಥಾಪನೆ, ಮಹಿಳೆಯರು ಮತ್ತು ಮಕ್ಕಳ ನೆರವಿಗಾಗಿ ಸಮಗ್ರ ಬೆಂಬಲ ಕೇಂದ್ರ ಸ್ಥಾಪನೆ, ಶಾಲೆಗಳು, ಕಾಲೇಜುಗಳು ಹಾಗೂ ಬಸ್‌ ನಿಲ್ದಾಣಗಳ ಸಮೀಪ ಪೊಲೀಸ್‌ ಹೊರಠಾಣೆ ಸ್ಥಾಪನೆ ಮತ್ತಿತರ ಕ್ರಮಗಳು ಇದರಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next