Advertisement

12 ಕೋಟಿ ಜನಕ್ಕೆ 6ಲಕ್ಷ ಕೋ.ರೂ. ಸಾಲ

10:23 AM May 30, 2018 | Harsha Rao |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ “ಮುದ್ರಾ ಬ್ಯಾಂಕ್‌’ನ ಲಾಭವನ್ನು ದೇಶದ 12 ಕೋಟಿ ಯುವ ಜನರು ಪಡೆದಿದ್ದು, ಈವರೆಗೆ ಸುಮಾರು 6 ಲಕ್ಷ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

Advertisement

ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಯ್ದ ಫ‌ಲಾನುಭವಿಗಳ ಜತೆಗೆ ಮಂಗಳವಾರ, ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಮೋದಿ, ಮುದ್ರಾ ಯೋಜನೆಯ ಯಶಸ್ಸನ್ನು ಮನಸಾರೆ ಹಾಡಿ ಹೊಗಳಿದರು. ಕಳೆದ ಮೂರು ವರ್ಷಗಳಲ್ಲಿ 5.73 ಲಕ್ಷ ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ. ಕಳೆದ ಆರ್ಥಿಕ ವರ್ಷವೊಂದರಲ್ಲೇ, 2.53 ಲಕ್ಷ ಕೋಟಿ ರೂ. ನೀಡಿದ್ದೇವೆ. ಇವರಲ್ಲಿ ಶೇ. 74ರಷ್ಟು ಅಥವಾ 9 ಕೋಟಿಯಷ್ಟು ಮಂದಿ ಮಹಿಳೆಯರಾಗಿದ್ದು, ಒಟ್ಟಾರೆ ಫ‌ಲಾನುಭವಿಗಳಲ್ಲಿ ಶೇ. 55ರಷ್ಟು ಜನರು ಎಸ್ಸಿ, ಎಸ್ಟಿ ಹಾಗೂ ಒಬಿಸಿಗೆ ಸೇರಿದರು ಎಂದರು. 

ವಿಪಕ್ಷಗಳ ವಿರುದ್ಧ ಟೀಕಾಸ್ತ್ರ: ಇದೇ ವೇಳೆ, ಹಿಂದಿನ ಸರ್ಕಾರಗಳ ಸಾಲ ನೀತಿಯನ್ನು ಟೀಕಿಸಿದ ಮೋದಿ, “”ಹಿಂದೆಲ್ಲಾ ರಾಜಕೀಯ ವ್ಯಕ್ತಿಗಳಿಗೆ ಹತ್ತಿರವಾಗಿರುವವರು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಿದ್ದರು. ಆದರೆ, ಆ ಸಾಲಗಳು ಮರುಪಾವತಿಯಾಗುತ್ತಿರಲಿಲ್ಲ. ಆದರೆ, ಈಗ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಬ್ಯಾಂಕುಗಳಿಂದ ನೇರವಾಗಿ ಫ‌ಲಾನುಭವಿಗಳಿಗೆ ಸಾಲ ಸಿಗುತ್ತಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next