Advertisement

ಪುರಭವನ, ಸೈರನ್‌ ಕೇಂದ್ರದ ಅಭಿವೃದ್ಧಿಗೆ 56 ಲಕ್ಷ  

04:24 PM Oct 29, 2017 | |

ಪುತ್ತೂರು: ಸುಮಾರು 56 ಲಕ್ಷ ರೂ. ವೆಚ್ಚದಲ್ಲಿ ಪುರಭವನವನ್ನು ಅಭಿವೃದ್ಧಿಪಡಿಸಬೇಕು ಎಂಬ ಯೋಜನೆ ನಗರಸಭೆ ಮುಂದಿದೆ. ಪುರಭವನ, ಸೈರನ್‌ ಕೇಂದ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ ನಗರಸಭೆ ಸದಸ್ಯ ಮಹಮ್ಮದಾಲಿ ಹೇಳಿದರು.

Advertisement

ಪುತ್ತೂರು ಪುರಭವನ, ಸೈರನ್‌ ಕೇಂದ್ರವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರಸಭೆ, ಸಮಾನ ಆಸಕ್ತರ ಸಮಾಲೋಚನ ಸಭೆ ಶನಿವಾರ ಪುರಭವನದಲ್ಲಿ ನಡೆಯಿತು.

ನಗರೋತ್ಥಾ ನ ಯೋಜನೆ ಅನುದಾನ
ಈ ಹಿಂದೆ ಅನುದಾನದ ಕೊರತೆಯಿಂದ ಪುರಭವನವನ್ನು ಪೂರ್ಣ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಖಾಸಗಿ ಬಸ್‌ ನಿಲ್ದಾಣದ ಬಳಿ ಆಧುನಿಕ ರೀತಿಯ ಪುರಭವನ ನಿರ್ಮಾಣದ ಯೋಜನೆ ಇತ್ತು. ಆದರೆ ಅನುದಾನದ ಕೊರತೆಯಿಂದ ಯೋಜನೆ ಕೈಬಿಟ್ಟಿದ್ದೇವೆ. ನಗರೋತ್ಥಾನ ಯೋಜನೆಯ ಅನುದಾನದಲ್ಲಿ ವಾರ್ಡ್‌ ಗಳಿಗೆ ನೀಡುವ
ಅನುದಾನವನ್ನು ಕಡಿತ ಮಾಡಿ 56 ಲಕ್ಷ ರೂ. ಪುರಭವನಕ್ಕಾಗಿ ಇಟ್ಟಿದ್ದೇವೆ.

ಇದರಲ್ಲಿ ಸೈರನ್‌ ಕೇಂದ್ರವೂ ಅಭಿವೃದ್ಧಿಯಾಗಲಿದೆ. ಬಳಿಯಲ್ಲಿರುವ ಯೋಧರ ಸ್ಮಾರಕದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕಾಗಿದೆ ಎಂದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾತನಾಡಿ, ಪುರಭವನದ ನೆಲಕ್ಕೆ ಗ್ರಾನೈಟ್‌ ಹಾಸಲು 6 ಲಕ್ಷ ರೂ., 50 ಲಕ್ಷ ರೂ.ನಲ್ಲಿ ಬಾಗಿಲು, ಕಿಟಕಿ, ಸುಸಜ್ಜಿತ ಶೌಚಾಲಯ, ಅರ್ಧ ಹಾಕಿರುವ ಶೀಟನ್ನು ಪೂರ್ತಿಗೊಳಿಸುವುದು, ಎಲ್‌ಇಡಿ ಬಲ್ಬ್ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

ಪುತ್ತೂರು ಕರ್ನಾಟಕದ ಸಂಘದ ಬಿ. ಪುರಂದರ ಭಟ್‌ ಮಾತನಾಡಿ, ಅಲ್ಪ ಸಂಪಾದನೆ ಉಳ್ಳವರಿಗೆ ಮದುವೆ ಕಾರ್ಯ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸೇವಾ ವರ್ಗಕ್ಕೆ ಮೀಸಲಾಗಿ ಹಣ ಮಾಡುವ ಕಾರ್ಯಕ್ರಮವಾಗದೇ ಪುರಭವನವನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.

ನೀರಿನ ವ್ಯವಸ್ಥೆ ಇಲ್ಲ
ಅಂಬಿಕಾ ವಿದ್ಯಾಲಯದ ಸಂಚಾಲಕ ನಟ್ಟೋಜ ಸುಬ್ರಹ್ಮಣ್ಯ ಭಟ್‌ ಮಾತನಾಡಿ, ಪ್ರಸ್ತುತ ಪುರಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ರಜಾ ದಿನದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗುತ್ತಿದೆ. ತಕ್ಷಣ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಅಲ್ಲದೆ ಈಗಾಗಲೇ ಸಂತೆ ವ್ಯಾಪಾರಿಗಳು ರಾತ್ರಿ ಹೊತ್ತಿನಲ್ಲಿ ಪುರಭವನದ ಬಳಿಯಲ್ಲೇ ಗಲೀಜು ಮಾಡುತ್ತಿದ್ದಾರೆ. ಇವುಗಳ ಕುರಿತು ಗಮನಹರಿಸಬೇಕು ಎಂದರು.

ಧಾರ್ಮಿಕ ಪರಿಷತ್‌ ಸದಸ್ಯ ಜಗನ್ನಿವಾಸ ರಾವ್‌ ಮಾತನಾಡಿ, ಅಭಿವೃದ್ಧಿ ನಿಟ್ಟಿನಲ್ಲಿ ಸಮಿತಿಯ ಅಗತ್ಯವಿಲ್ಲ. ನಗರಸಭೆ ವತಿಯಿಂದ ನಿರ್ಮಾಣಗೊಂಡ ಬಳಿಕ ಸಂಪೂರ್ಣ ಜವಾಬ್ದಾರಿ ನಗರಸಭೆಯದ್ದು. ಅವರೇ ಮುಂದೆ ನಿರ್ವಹಣೆಯನ್ನು ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು , ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ರಾಜೇಶ್‌ ಬನ್ನೂರು, ಮುಖೇಶ್‌ ಕೆಮ್ಮಿಂಜೆ, ಅನ್ವರ್‌ ಖಾಸಿಂ, ಜಯಲಕ್ಷ್ಮೀ ಸುರೇಶ್‌, ಜೆಇ ಶ್ರೀಧರ್‌ ನಾಯ್ಕ, ಹೆಲ್ತ್‌ ಇನ್‌ಸ್ಪೆಕ್ಟರ್‌ ಶ್ವೇತಾ ಕಿರಣ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿದರು. 

ವಿವಿಧ ಬೇಡಿಕೆ
ಹಿಂದಿನ ಪುರಭವನ ಸಮಿತಿಯನ್ನು ಸಲಹಾ ಸಮಿತಿಯಾಗಿಸಬೇಕು. ಈಗಿನ ಟಿಕೆಟ್‌ ಕೌಂಟರ್‌ನ್ನು ಸ್ವಚ್ಛಗೊಳಿಸಬೇಕು. ಅಡುಗೆ ಕೊಠಡಿಯನ್ನು ಸೈರನ್‌ ಪಕ್ಕದ ಸ್ಥಳದಲ್ಲಿ ಮಾಡಬೇಕು, 600 ಸೀಟಿಗೆ ಹೆಚ್ಚಿಸಬೇಕು, ಮರದ ಕುರ್ಚಿಗಳನ್ನೇ ನಿರ್ಮಾಣ ಮಾಡಬೇಕು. ಹೆಚ್ಚುವರಿ 100 ಕುರ್ಚಿಬೇಕು. ಸಿಮೆಂಟ್‌ ಶೀಟನ್ನೇ ಛಾವಣಿಗೆ ಬಳಸ ಬೇಕು, ನೀರಿನ ಶೇಖರಣೆ ವ್ಯವಸ್ಥೆ ಜಾಸ್ತಿ ಬೇಕು, ಗ್ರೀನ್‌ ರೂಂ ಪಾರ್ಟಿಶನ್‌ ಬೇಡ, ವೇದಿಕೆಗೆ ಪೀಠೊಪಕರಣ, ಪುರಭವನಕ್ಕೆ ಸಾಹಿತಿಗಳ ಹೆಸರು ಇಡಬೇಕು, 10 ಸಾವಿರ ರೂ. ಜಾಸ್ತಿ ಸಹಾಯಧನ ನೀಡಿದವರ ಹೆಸರನ್ನು ಪುರಭವನದ ಕೋಣೆಗೆ ಹಾಕಬೇಕು, ಸಾವಿರ ರೂ. ಮೇಲ್ಪಟ್ಟು ಸಹಾಯಧನ ನೀಡಿದವರ ಹೆಸರನ್ನು ನಾಮಫಲಕದಲ್ಲಿ ಬರೆದು ಅಳವಡಿಸ ಬೇಕು ಎಂಬ ಬೇಡಿಕೆ ಯನ್ನು ಸಭೆಗೆ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next