Advertisement
2018-19ನೇ ಸಾಲಿನಲ್ಲಿ ನಗರಸಭೆ ನಿಧಿಯಲ್ಲಿ 484 ಲಕ್ಷ ರೂ., ಆದಾಯ ನಿರೀಕ್ಷಿಸಲಾಗಿದ್ದು, 435 ಲಕ್ಷ ರೂ., ಗಳು ಖರ್ಚಿಗೆ ಅಂದಾಜಿಸಲಾಗಿದೆ. ಸರಕಾರದಿಂದ 1,810 ಲಕ್ಷ ರೂ., ನಿರೀಕ್ಷಿಸಲಾಗಿದ್ದು, 1,810 ಲಕ್ಷ ರೂ., ಖರ್ಚು ಮಾಡಲು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಶೇ.75% ರಷ್ಟು ಗುರಿ ಸಾಧಿಸಲಾಗಿದೆ. ಈ ಆಯವ್ಯಯದಲ್ಲಿ ಜನಸಾಮಾನ್ಯರ ಮತ್ತು ನಗರ ಸಭೆ ಸದಸ್ಯರುಗಳ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಹಿಂದಿನ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಈ ವರ್ಷದ ಹಲವಾರು ಹೊಸ ಕಾರ್ಯಕ್ರಮ ರೂಪಿಸಲು ಯೋಚಿಸಲಾಗಿದೆ ಎಂದರು.
Related Articles
ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಜನಾಂಗದ ಅಭಿವೃದ್ಧಿಗೆ ಮತ್ತು ಅಂಗವಿಕಲರ ಅಭಿವೃದ್ಧಿಗೆ ಹಣ ನಿಗದಿಗೊಳಿಸಿರುವುದು ಈ ಆಯವ್ಯಯದ ಮುಖ್ಯ ಆಶಯಗಳಾಗಿವೆ ಎಂದರು.
Advertisement
ಇದೇ ಸಂದರ್ಭದಲ್ಲಿ ಸರ್ವ ಸದಸ್ಯರು ಉಳಿತಾಯ ಬಜೆಟ್ ಮಂಡನೆಗೆ ಅನುಮೋದನೆ ನೀಡಿದರು. ನಗರದ ಬಹುತೇಕ ವಾರ್ಡ್‌ಗಳಲ್ಲಿ ಕೊಳವೆ ಬಾವಿ, ಸಾರ್ವಜನಿಕ ಶೌಚಾಲಯ ದುರಸ್ತಿ ಹಾಗೂ ಶೌಚಾ ಲಯ ನಿರ್ಮಾಣ ಕಾಮಗಾರಿಗೆಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ನಗರಸಭೆ ಸದಸ್ಯರು ನಗರಸಭೆ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದರೊಳಗೆ ಎಲ್ಲ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಮಾಡಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ವಾರ್ಡ್, ನಂ. 21ರಲ್ಲಿ ಕೊಳವೆ ಬಾವಿ ಮೂಲಕ ಟ್ಯಾಂಕ್‌ಗೆ ನೀರು ಸರಬರಾಜು ಕಾಮಗಾರಿಗೆ 10 ಲಕ್ಷ ರೂ., ಟೆಂಡರ್ ಆಗಿ ಒಂದು ವರ್ಷವಾಗಿದೆ. ಆದರೆ ಕೆಲಸ ಮಾತ್ರ ಆಗಿಲ್ಲ ಎಂದು ಸದಸ್ಯರು ಆರೋಪಿಸಿದಾಗ, ಪೌರಾಯುಕ್ತರು ಮಾತನಾಡಿ, ಕೂಡಲೇ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸುವುದಾಗಿ ಹೇಳಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ ಸೇರಿದಂತೆ ಇದ್ದರು.