Advertisement

45.69 ಲಕ್ಷ ರೂ. ಮೌಲ್ಯದ ಸ್ವತ್ತು ವಾಪಸ್‌

02:37 PM Jul 20, 2017 | Team Udayavani |

ಬೀದರ: ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜೂನ್‌ ತಿಂಗಳ ಅವಧಿಯಲ್ಲಿ ನಡೆದ 118 ಕಳ್ಳತನ ಪ್ರಕರಣ ಪೈಕಿ 47 ಪ್ರಕರಣ ಪತ್ತೆ
ಹಚ್ಚಿಸಿರುವ ಪೊಲೀಸರು, 45.69 ಲಕ್ಷ ಮೌಲ್ಯದ ಸ್ವತ್ತನ್ನು ಮರಳಿ ಮಾಲೀಕರಿಗೆ ಒಪ್ಪಿಸಿದ್ದಾರೆ.

Advertisement

ನಗರದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾಪರ್ಟಿ ರಿಟರ್ನ್ ಪರೇಡ್‌ನ‌ಲ್ಲಿ ಕಲಬುರಗಿ ವಲಯ
ಐಜಿಪಿ ಅಲೋಕಕುಮಾರ ಸ್ವತ್ತನ್ನು ಮಾಲೀಕರಿಗೆ ಹಸ್ತಾಂತರಿಸಿದರು. ಜನವರಿಯಿಂದ ಜೂನ್‌ ಅವಧಿಯಲ್ಲಿ ಜಿಲ್ಲೆಯ ವಿವಿಧ
ಠಾಣೆಗಳಲ್ಲಿ 118 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹಳೆ ಮತ್ತು ಹೊಸ ಪ್ರಕರಣಗಳು ಸೇರಿ ಒಟ್ಟು 47 ಪ್ರಕರಣಗಳು ಪತ್ತೆ ಹೆಚ್ಚಲಾಗಿದ್ದು, 70.52 ಲಕ್ಷ ಮೌಲ್ಯದ ಸ್ವತ್ತು ದೋಚಲಾಗಿತ್ತು. ತನಿಖೆ ಕೈಗೊಂಡು 45,69,100 ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಚಿನ್ನ, ಬೆಳ್ಳಿ ಆಭರಣ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

ಸುಲೆಗೆ (ಚೈನ್‌ ಪ್ರಕರಣ) 16, ಹಗಲು ಕಳವು 6, ರಾತ್ರಿ ಕಳ್ಳತನ 18, ಲಾರಿ, ಕಾರು ತಲಾ ಒಂದು ಪ್ರಕರಣ, ಮೋಟಾರು ಸೈಕಲ್‌
15, ಮೋಟಾರು ಬಿಡಿ ಭಾಗ ಪ್ರಕರಣ 2 ಎರಡು ಸೇರಿ 47 ಪ್ರಕರಣ ಭೇದಿಸಲಾಗಿದೆ.  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಪ್ರಕಾಶ ನಿಕ್ಕಂ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿ ಕಾರಿ ಶ್ರೀಹರಿಬಾಬು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next