ಬೆಂಗಳೂರು: ಕಳೆದ ಮೂರು ತಿಂಗಳ ಅವಧಿಯಲ್ಲಿ ಕೊಲೆಯತ್ನ, ದರೋಡೆ, ಸುಲಿಗೆ, ಮಾದಕ ವಸ್ತು ಮಾರಾಟ, ಕ್ರಿಕೆಟ್ ಫಿಕ್ಸಿಂಗ್, ವಂಚನೆ ಸೇರಿದಂತೆ ವಿವಿಧ ಮಾದರಿಯ 105 ಪ್ರಕರಣಗಳನ್ನು ಬೇಧಿಸಿರುವ ಕೇಂದ್ರ ಅಪರಾಧ ವಿಭಾಗ ಪೊಲೀಸರು 568 ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ 4.50 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಬುಧವಾರ ಪತ್ರಿಕಾಗೋಷ್ಠಿ ಮಾತನಾಡಿ, ಮಹಿಳೆ ಮತ್ತು ಮಾದಕ ದ್ರವ್ಯ ವಿಭಾಗದ ವತಿಯಿಂದ 1.32 ರೂ. ನಗದು ಹಾಗೂ 85,00,00 ರೂ. ಮೌಲಗ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ ಮಾದಕ ವಸ್ತು ಮಾರಾಟ ತಡ ಸಂಬಂಧ 13 ಮಂದಿ ಆರೋಪಿಗಳನ್ನು ಬಂಧಿಸಿ 95 ಕೆ.ಜಿ. ಗಾಂಜಾ ಹಾಗೂ ಇನ್ನಿತರೆ ಮಾದಕ ವಸ್ತು ಜಪ್ತಿ ಮಾಡಲಾಗಿದೆ.
ನಗರದಲ್ಲಿ ಅಕ್ರಮವಾಗಿ ಪರವಾನಿಗೆ ನಿಯಮ ಉಲ್ಲಂಘನೆ ಮಾಡಿ ನಡೆಸುತ್ತಿದ್ದ ಡ್ಯಾನ್ಸ್‌ಬಾರ್ ಹಾಗೂ ಡಿಸ್ಕೋಥೆಕ್ ನಡೆಸುತ್ತಿದ್ದ ಸಂಬಂಧ 11 ಕ್ರಿಮಿನಲ್ ಪ್ರಕರಣ ದಾಖಲಿಸಿ 65 ಮಂದಿಯನ್ನು ಬಂಧಿಸಲಾಗಿದೆ. ಮಾನವ ಕಳ್ಳಸಾಗಾಣಿಕೆ ಜಾಲವನ್ನು ಬೇಧಿಸಿ 9 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಸಿಸಿಬಿ ವಿಭಾಗದ ನರಹತ್ಯೆ ಮತ್ತು ಕನ್ನಕಳವು ವಿಭಾಗದ ನಡೆಸಿದ ಕಾರ್ಯಾಚರಣೆಯಲ್ಲಿ 4 ಮಂದಿ ಹಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 35 ಲಕ್ಷ ರೂ. ಬೆಲೆ ಬಾಳುವ 1 ಕೆ.ಜಿ. 250 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 14 ಕನ್ನ ಕಳವು ಸೇರಿ 16 ಪ್ರಕರಣ ಪತ್ತೆಯಾಗಿದೆ.
ವಿಶೇಷ ವಿಚಾರಣೆ (ಎಸ್‌ಇ)ದಳವು ಅಗಸ್ಟ್ ತಿಂಗಳಿನಿಂದ ಈಚೆಗೆ 23 ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ 78 ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಂಡಿದೆ. ನಗರದ ಐದು ಸ್ಥಳಗಳಲ್ಲಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ರಿಫಿಲ್ಲಿಂಗ್ ಮಾಡುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿ 900 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಂಚನೆ ಮತ್ತು ದುರುಪಯೋಗ ವಿಭಾಗವು ಕಾಫಿರೈಟ್ ಕಾಯಿದೆ ಉಲ್ಲಂಘನೆ ಮಾಡಿದ್ದ 39 ಜನ ಆರೋಪಿಗಳನ್ನು ಬಂಧಿಸಿ 16 ಪ್ರಕರಣಗಳನ್ನು ದಾಖಲಿಸಿದೆ. ಅಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ವಸ್ತುಗಳು, ಕಾಫಿರೈಟ್ ಉಲ್ಲಂಘನೆಯ ಬಟ್ಟೆಗಳು ಸೇರಿದಂತೆ ರೂ 1,03, ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.