Advertisement

ನೋಟು ನಿಷೇಧದ ಬಳಿಕ ಬ್ಯಾಂಕಲ್ಲಿ 4ಲಕ್ಷ ಕೋಟಿ ಕಪ್ಪುಹಣ ಡೆಪಾಸಿಟ್ !

04:18 PM Jan 10, 2017 | Sharanya Alva |

ನವದೆಹಲಿ:500, 1000 ರೂಪಾಯಿ ಮುಖಬೆಲೆಯ ನೋಟು ನಿಷೇಧಿಸಿದ ಬಳಿಕ 50 ದಿನದೊಳಗೆ ತೆರಿಗೆಯನ್ನು ವಂಚಿಸಿ ಸುಮಾರು 3ರಿಂದ 4 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಆಗಿದೆ ಎಂಬ ಅಂಶವನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಿದೆ.

Advertisement

ನವೆಂಬರ್ 9ರಿಂದ ಉತ್ತರ ಈಶಾನ್ಯ ರಾಜ್ಯಗಳ ವಿವಿಧ ಖಾತೆಗಳಲ್ಲಿ 10, 700 ಕೋಟಿಗೂ ಅಧಿಕ ನಗದು ಠೇವಣಿ ಇಡಲಾಗಿದೆ. ಅಷ್ಟೇ ಅಲ್ಲ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಠೇವಣಿ ಇಡಲಾಗಿರುವ ಸುಮಾರು 16 ಸಾವಿರ ಕೋಟಿಗೂ ಅಧಿಕ ಹಣದ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಕಣ್ಣಿದೆ ಎಂದು ವರದಿ ತಿಳಿಸಿದೆ.

ಈ ಖಾತೆಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿರುವ ಹಿರಿಯ ಅಧಿಕಾರಿಯೊಬ್ಬರು, ಯಾವ ತೆರಿಗೆಯನ್ನು ವಂಚಿಸಿ 3ರಿಂದ 4ಲಕ್ಷ ಕೋಟಿ ಹಣವನ್ನು ಠೇವಣಿ ಇಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ನೋಟಿಸ್ ನೀಡುವಂತೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆಂದು ವರದಿ ವಿವರಿಸಿದೆ.

ನೋಟು ನಿಷೇಧದ ನಿರ್ಧಾರದ ನಂತರ 60 ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹಣ ಠೇವಣಿ ಇಡಲಾಗಿದೆ ಎಂಬುದು ಅಂಕಿ, ಅಂಶಗಳ ಮಾಹಿತಿಯಿಂದ ತಿಳಿದು ಬಂದಿದ್ದು, ಒಟ್ಟಾರೆ ಈ ಖಾತೆಗಳಲ್ಲಿ 7.34 ಲಕ್ಷ ಕೋಟಿ ರೂಪಾಯಿ ಠೇವಣಿ ಇದ್ದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next