Advertisement
1965ರಲ್ಲಿ ಸುಳ್ಯ ತಾಲೂಕು ರಚನೆಯಾದ ಬಳಿಕ 1966ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಅಲ್ಲಿಂದ ಈಗಿನ ತನಕ ಈ ಕಟ್ಟಡವೇ ತಾ.ಪಂ. ಕಚೇರಿ ಕೇಂದ್ರವಾಗಿತ್ತು. ಹಳೆಯ ಹಂಚಿನ ಛಾವಣಿಯ ಕಟ್ಟಡ ತೆರವುಗೊಳಿಸಿ 2.80 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸುವ ಕಾರಣ ಹಳೆ ಕಟ್ಟಡ ಕೆಡವಲಾಗುತ್ತಿದೆ. ಜಿ.ಪಂ. ಕಚೇರಿ ಕಟ್ಟಡ ಮತ್ತು ನಿರ್ವಹಣಾ ಯೋಜನೆಯಡಿ ಈ ಅನುದಾನ ಬಿಡುಗಡೆಗೊಂಡಿದೆ. ಆಗಸ್ಟ್ ಪ್ರಥಮ ವಾರದಲ್ಲಿ ಗುದ್ದಲಿ ಪೂಜೆ ನೆರವೇರಲಿದೆ.
ಹೊಸ ಕಟ್ಟಡ ಎರಡು ಮಹಡಿಯದ್ದಾಗಿರುತ್ತದೆ. ನೆಲ ಅಂತಸ್ತಿನಲ್ಲಿ ತಾ.ಪಂ. ಸಿಇಒ ಕೈಗಾರಿಕಾ ವಿಸ್ತರಣಾಧಿಕಾರಿ, ಅಕ್ಷರ ದಾಸೋಹ, ಎನ್‌ಆರ್‌ಇಜಿ, ವಸತಿ ಯೋಜನೆ ಕೊಠಡಿಗಳು ಇರಲಿವೆ. ಪ್ರಥಮ ಮಹಡಿಯಲ್ಲಿ ಶಾಸಕರು, ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ತಾ.ಪಂ. ಸರ್ವ ಸದಸ್ಯರಿಗೆ ಒಂದು ಕೊಠಡಿ, 100 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ ನಿರ್ಮಾಣವಾಗಲಿದೆ. ಮಹಡಿಯ ಮೇಲೆ ಶೀಟ್ ಅಳವಡಿಸಿ 250-300 ಮಂದಿ ಕುಳಿತುಕೊಳ್ಳಬಹುದಾದ ವಿಶಾಲ ಸಭಾಭವನ ರಚಿಸಲು ನಕಾಶೆ ಸಿದ್ಧಪಡಿಸಲಾಗಿದೆ. ಸಾಮ್ಯರ್ಥ ಸೌಧಕ್ಕೆ ಕಚೇರಿ ಸ್ಥಳಾಂತರ
ಹಳೆ ಕಟ್ಟಡ ಕೆಡೆಹಿದ ಕಾರಣ, ತಾ.ಪಂ. ಕಚೇರಿಯು ಅಲ್ಲೇ ಸನಿಹದಲ್ಲಿರುವ ಸಾಮರ್ಥ್ಯ ಸೌಧಕ್ಕೆ ಸ್ಥಳಾಂತರಗೊಂಡಿದೆ. ಹೊಸ ಕಟ್ಟಡ ಪೂರ್ಣಗೊಳ್ಳುವ ತನಕ ತಾ.ಪಂ. ಕಚೇರಿಯು ಸಾಮರ್ಥ್ಯಸೌಧದಲ್ಲಿಯೇ ಕಾರ್ಯಾಚರಿಸಲಿದೆ.