Advertisement

ಇಂಜಿನಿಯರಿಂಗ್‌ ಕಾಲೇಜಲ್ಲಿ ವರ್ಷಕ್ಕೆ 2,500 ರೂ.ಶುಲ್ಕ

06:00 AM Jul 13, 2018 | Team Udayavani |

ಹೊಸದಿಲ್ಲಿ: ವರ್ಷಕ್ಕೆ 2,500 ರೂ. ಶುಲ್ಕ, ಉಚಿತ ಲ್ಯಾಪ್‌ಟಾಪ್‌, ದ್ವಿಚಕ್ರ ವಾಹನ ಕೊಡುವ ಆಫ‌ರ್‌… ಇದು ಯಾವುದೇ ವಾಣಿಜ್ಯ ಮಳಿಗೆಯ ಕೊಡುಗೆ ಅಲ್ಲ. ಗುಜರಾತ್‌ ನಲ್ಲಿರುವ ಇಂಜಿನಿಯರಿಂಗ್‌ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಾಡಿರುವ ಯೋಜನೆ.

Advertisement

ಈ ಕಾಲೇಜುಗಳು ಸ್ಕಾಲರ್‌ಶಿಪ್‌ ನೀಡುವ ನೆಪದಲ್ಲಿ ಶಿಕ್ಷಣ ಶುಲ್ಕದಲ್ಲಿ ಕಡಿತ, ಕಾಲೇಜ್‌ ಬಸ್‌, ಹಾಸ್ಟೆಲ್‌ ಶುಲ್ಕಗಳಲ್ಲಿ ಶೇ.50 ಮಾತ್ರ ಪಾವತಿ ಮಾಡಿದ್ರೆ ಸಾಕಂತೆ. ಏಕಗಂಟಿನಲ್ಲಿ ಶುಲ್ಕ ಪಾವತಿಸಿದರೆ ಶಿಕ್ಷಣ ಮುಗಿಯುವ ವರ್ಷ ದಲ್ಲಿ ದ್ವಿಚಕ್ರ ವಾಹನ ನೀಡುವ ವಾಗ್ಧಾನ ನೀಡಿದೆ. ವಿದ್ಯಾರ್ಥಿ ಗಳನ್ನು ಕಾಲೇಜಿಗೆ ದಾಖಲಿಸುವ ಏಜೆಂಟ್‌ಗಳಿಗೆ ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂ. ನೀಡಿದ ಉದಾಹರಣೆಗಳೂ ಇವೆ.

ಕರ್ನಾಟಕದಲ್ಲಿ: ಕರ್ನಾಟಕದಲ್ಲಿ 2017- 18ರ‌ಲ್ಲಿ 219 ಇಂಜಿನಿಯರಿಂಗ್‌ ಕಾಲೇಜು ಗಳ 75 ಸಾವಿರ ಸೀಟುಗಳ ಪೈಕಿ 29 ಸಾವಿರ ಸೀಟುಗಳು ಭರ್ತಿಯಾಗದೇ ಉಳಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next