Advertisement

ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂ. ವಿಮೆ

02:20 AM Mar 09, 2019 | |

ನಾಯಕನಹಟ್ಟಿ: ಮಧ್ಯಕರ್ನಾಟಕದ ಅತಿ ಎತ್ತರದ ತಿಪ್ಪೇರುದ್ರಸ್ವಾಮಿ ರಥಕ್ಕೆ 2.5 ಕೋಟಿ ರೂ. ವಿಮೆ ಒದಗಿಸಲಾಗಿದೆ. ಶುಕ್ರವಾರ ದೇವಾಲಯ ಕಚೇರಿಯಲ್ಲಿ ಇದಕ್ಕೆ ಸಂಬಂ ಧಿಸಿದಂತೆ ವಿಮಾ ಚೆಕ್‌ಅನ್ನು ವಿಮಾ ಕಂಪನಿಯ ಅ ಧಿಕಾರಿಗಳಿಗೆ ನೀಡಲಾಯಿತು.

Advertisement

ನ್ಯೂ ಇಂಡಿಯಾ ಅಶ್ಯುರೆನ್ಸ್‌ ಕಂಪನಿಯ ದಾವಣಗೆರೆ ವೃತ್ತದ ಸೀನಿಯರ್‌ ಡಿವಿಜನಲ್‌ ಮ್ಯಾನೇಜರ್‌ ಎಂ.ಆರ್‌.ನಾಗರಾಜ ಅಡಿಗ ಮಾತನಾಡಿ, ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಹಾನಿಗೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. ಬೆಂಕಿ, ಭೂಕಂಪ, ಪ್ರವಾಹ, ಉದ್ದೇಶ ಪೂರ್ವಕ ಕೃತ್ಯ ಸೇರಿದಂತೆ 12 ರೀತಿಯ ನಾನಾ ಅನಾಹುತಗಳ ಸಂಭವಿಸಿದಲ್ಲಿ ರಥಕ್ಕೆ ಆರ್ಥಿಕ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೂ ಈ ವಿಮೆಯಲ್ಲಿ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next