Advertisement

ಶ್ವಾನಗಳಿಗೆ ಎ.ಸಿ. ಫ್ಲ್ಯಾಟ್‌ ನೀಡಿದ್ದ ಸಚಿವ ಪಾರ್ಥ ಚಟರ್ಜಿ

12:19 AM Jul 26, 2022 | Team Udayavani |

ಕೋಲ್ಕತಾ/ಭುವನೇಶ್ವರ: ಶ್ವಾನಗಳಿಗೂ ಹವಾನಿ ಯಂತ್ರಿತ ಫ್ಲ್ಯಾಟ್‌- ಇದು ಅಚ್ಚರಿಯಾದರೂ, ಹುಬ್ಬೇರಿಸುವ ಸಮಾಚಾರವಂತೂ ಹೌದು. ಶಿಕ್ಷಕರ ನೇಮಕ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಲದ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶ ನಾಲಯ ತನಿಖೆಗೆ ಒಳಪಡಿಸಿದಾಗ ಬಹಿರಂಗ ಗೊಂಡಿರುವ ಸತ್ಯವಿದು.

Advertisement

ಕೋಲ್ಕತಾದ ಹಲವು ಪ್ರದೇಶಗಳಲ್ಲಿ ಅವರು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಈ ಪೈಕಿ ಡೈಮಂಡ್‌ ಡಿಸ್ಟ್ರಿಕ್ಟ್ ಎಂಬಲ್ಲಿ ಹೊಂದಿರುವ ಒಂದು ಫ್ಲ್ಯಾಟ್‌ನಲ್ಲಿ ಶ್ವಾನಗಳಿ ಗಾಗಿಯೇ ಸಂಪೂರ್ಣವಾಗಿ ಹವಾನಿಯಂತ್ರಣ ವ್ಯವಸ್ಥೆ ಇರುವ ಅದ್ದೂರಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ. ಅವರು ಶ್ವಾನ ಪ್ರಿಯರಾಗಿ ಇರುವುದರಿಂದ ಇಂಥ ಹವ್ಯಾಸ ಹೊಂದಿದ್ದರು ಎಂದು ತನಿಖಾಧಿಕಾರಿಗಳು ಕಂಡು ಕೊಂಡಿದ್ದರು. ಇಷ್ಟು ಮಾತ್ರ ವಲ್ಲದೆ, ಮತ್ತೊಂದು ಅಪಾರ್ಟ್‌ಮೆಂಟ್‌ ನಟಿ ಅರ್ಪಿತಾ ಮುಖರ್ಜಿ ಮತ್ತು ಸಚಿವ ಪಾರ್ಥ ಅವರ ಜಂಟಿ ಮಾಲಕತ್ವದಲ್ಲಿ ಇದೆ ಎಂಬ ಅಂಶವೂ ಗೊತ್ತಾಗಿದೆ. ಈ ಅಂಶಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

4 ಬಾರಿ ಸಿಎಂಗೆ ಫೋನ್‌: ಬಂಧನವಾದ ಬಳಿಕ ಸಚಿವ ಪಾರ್ಥ ಚಟರ್ಜಿ ಅವರು ಸಿಎಂ ಬ್ಯಾನರ್ಜಿ ಅವರಿಗೆ ನಾಲ್ಕು ಬಾರಿ ಫೋನ್‌ ಮಾಡಿದ್ದಾರೆ. ಶನಿವಾರ ಬೆಳಗ್ಗೆ 2.32, 2.33, 3.37 ಮತ್ತು 9.35ಕ್ಕೆ ಫೋನ್‌ ಮಾಡಿ ದ್ದಾರೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ ಎಂದು ಇ.ಡಿ.ಯ ಟಿಪ್ಪಣಿಯಲ್ಲಿ ಉಲ್ಲೇಖೀಸಲಾಗಿದೆ. ಈ ಅಂಶ ವನ್ನು ಪಾರ್ಥ ಚಟರ್ಜಿ ಕೂಡ ಖಚಿತಪಡಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಬೆಂಬಲ ಇಲ್ಲ
“ನಾವು ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದಿಲ್ಲ. ಯಾರೇ ಆಗಲಿ ತಪ್ಪು ಎಸಗಿದ್ದು ಸಾಬೀತಾದರೆ, ಅವರಿಗೆ ಶಿಕ್ಷೆ ಆಗಲೇಬೇಕು’ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಶಿಕ್ಷಕರ ನೇಮಕ ಪ್ರಕರಣದಲ್ಲಿ ಕೈಗಾರಿಕ ಸಚಿವ ಪಾರ್ಥ ಚಟರ್ಜಿ ಬಂಧನವಾಗಿ 2 ದಿನಗಳ ಬಳಿಕ ಒಟ್ಟಾರೆ ಬೆಳವಣಿಗೆ ಬಗ್ಗೆ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿ ತೃಣಮೂಲ ಕಾಂಗ್ರೆಸ್‌ ಅನ್ನು ಒಡೆಯಬಹುದು ಎಂದು ಬಿಜೆಪಿ ಯೋಚಿಸುತ್ತಿದ್ದರೆ ಅದು ಸಾಧ್ಯವಿಲ್ಲದ ಮಾತು. ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡ ಲಾಗುತ್ತಿದೆ ಎಂದು ದೂರಿದ್ದಾರೆ.

ಪಾರ್ಥ ಚಟರ್ಜಿ ಅವರಿಗೆ ಅನಾರೋಗ್ಯ ಸಮಸ್ಯೆ ಇರುವುದು ನಿಜ. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾದ ಅಗತ್ಯ ಇಲ್ಲ .
-ಅಶುತೋಷ್‌ ಬಿಸ್ವಾಸ್‌, ಭುವನೇಶ್ವರ ಏಮ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next