Advertisement

ಮಳೆ ಹಾನಿ ನಿರ್ವಹಣೆಗೆ 1664 ರೂ. ಕೋರಿದ ಪಾಲಿಕೆ

11:28 AM Sep 26, 2017 | Team Udayavani |

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ದಾಖಲೆ ಮಳೆಯಿಂದಾಗಿ ಉಂಟಾಗಿರುವ ಹಾನಿ ಸರಿಪಡಿಸಲು 1664 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

Advertisement

ಆಗಸ್ಟ್‌ 15ರಿಂದ ಸೆಪ್ಟಂಬರ್‌ 3ರವರೆಗೆ ನಗರದಲ್ಲಿ ಸುರಿದ ಭಾರಿ ಮಳೆಗೆ ಬಹುತೇಕ ಪ್ರದೇಶಗಳು ಮುಳುಗಡೆಯಾಗಿ ರಸ್ತೆಗಳ ಡಾಂಬರು ಕಿತ್ತು ಬಂದು, ಸಾವಿರಾರು ಗುಂಡಿ ಬಿದ್ದಿವೆ. ಜತೆಗೆ ಕೆಲವೆಡೆ ಮನೆಗಳು ಕುಸಿದಿವೆ. ಹೀಗಾಗಿ ರಸ್ತೆ, ಕಾಲುವೆ, ಕೆರೆ ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸಲು ವಿಶೇಷ ಅನುದಾನ ನೀಡಬೇಕು ಎಂದು ಕೋರಿದೆ. 

ಮಳೆ ಹಾನಿ ಸರಿಪಡಿಸಲು ಪಾಲಿಕೆಗೆ 1664 ಕೋಟಿ ರೂ. ಅಗತ್ಯವಿದೆ. ಯಾವ ವಲಯದಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಮತ್ತು ಎಷ್ಟು ಹಣ ಬೇಕಿದೆ ಎಂಬ ಕುರಿತ ವಿವರವನ್ನು ಈಗಾಗಲೇ ನೀಡಲಾಗಿದೆ. ಅದರಂತೆ ರಸ್ತೆ ದುರಸ್ತಿ, ಮಳೆ ನೀರುಗಾಲುವೆ ಕಾಮಗಾರಿ, ಕೆರೆ ಕೋಡಿ ಅಭಿವೃದ್ಧಿ, ಒಳಚರಂಡಿ, ಪಾದಚಾರಿ ಮಾರ್ಗ ಅಭಿವೃದ್ಧಿಗೆ ಅನುದಾನ ಕೋರಲಾಗಿದೆ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next