Advertisement
ಕೇಂದ್ರ ಸರ್ಕಾರಕ್ಕೆ ತನ್ನ ಕೋವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ ನನ್ನು 150 ರೂಪಾಯಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಗೆ ನೀಡುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.
Related Articles
Advertisement
ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ಹಾಗೂ ಕ್ಲೀನಿಕಲ್ ಪ್ರಯೋಗಗಳಿಗಾಗಿ ಸಂಸ್ಥೆ ಸ್ವತಃ 500 ಕೋಟಿ ವೆಚ್ಚವನ್ನು ಭರಿಸಿದೆ. ಉತ್ಪನ್ನದ ಅಭಿವೃದ್ಧಿಗೆ ಸಂಸ್ಥೆಯೇ ಪೂರ್ಣವಾಗಿ ಸಂಪನ್ಮೂಲಗಳ ಖರ್ಚು ವೆಚ್ಚಗಳನ್ನು ನೋಡಿಕೊಂಡಿದೆ. ಹಾಗಾಗಿ, ಇಷ್ಟು ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಲಸಿಕೆಯನ್ನು ನೀಡಲು ಕಾರ್ಯ ಸಾಧ್ಯವಾಗುತ್ತಿಲ್ಲ. ಖಾಸಗಿ ವಲಯಗಳಿಗೆ ಆ ಕಾರಣದಿಂದಲೇ ಹೆಚ್ಚಿನ ಬೆಲೆಯಲ್ಲಿ ನೀಡಲಾಗುತ್ತಿದೆ ಎಂದು ಹೇಳಿದೆ.
ಸರಕುಗಳು ಮತ್ತು ಕಚ್ಚಾ ವಸ್ತುಗಳ ಬೆಲೆ, ಉತ್ಪನ್ನಗಳ ವೈಫಲ್ಯಗಳು, ಉತ್ಪನ್ನ ಅಭಿವೃದ್ಧಿ ವಿನಿಯೋಗಗಳು, ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸಂಪೂರ್ಣ ಬಂಡವಾಳ ವೆಚ್ಚಗಳು, ಮಾರಾಟ ಮತ್ತು ವಿತರಣಾ ವೆಚ್ಚಗಳು, ಖರೀದಿ ಸಂಪುಟಗಳು ಮತ್ತು ಇತರ ನಿಯಮಿತ ವ್ಯವಹಾರ ವೆಚ್ಚಗಳ ಜೊತೆಗೆ ಬದ್ಧತೆಗಳ ಇರುವ ಕಾರಣದಿಂದಾಗಿ ಲಸಿಕೆಯ ಬೆಲೆಯಲ್ಲಿ ಸ್ವಲ್ಪ ಜಾಸ್ತಿ ಮಾಡಬೇಕಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಇನ್ನು, ತನ್ನ ಉತ್ಪನ್ನದ ಶೇಕಡಾ 10 ಕ್ಕಿಂತ ಕಡಿಮೆ ಪ್ರಮಾಣದ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಉಳಿದ ಪ್ರಮಾಣದ ಲಸಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ 150 ರೂ, ನಂತೆ ತನ್ನ ಲಸಿಕೆಯನ್ನು ನೀಡಲು ಸಾಧ್ಯವಾಗುವುದಿಲ್ಲಿ ಎಂದು ಸಂಸ್ಥೆ ಹೇಳಿರುವುದಾಗಿ ವರದಿ ತಿಳಿಸಿದೆ.
ಇತರೆ ರಾಷ್ಟ್ರಗಳ ಉತ್ಪಾದನಾ ಗುತ್ತಿಗೆಯೂ ಕೂಡ ಕಡಿಮೆಯಿದೆ. ಹಾಗಾಗಿ ಲಸಿಕೆಯನ್ನು ಅಷ್ಟು ಕಡಿಮೆ ಬೆಲೆಯಲ್ಲಿ ಪೂರೈಸಲು ಕಾರ್ಯಸಾಧ್ಯವಾಗುವುದಿಲ್ಲವೆಂದು ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಸಿಎಂ ಮುಂದುವರಿಯುವುದು ಬಿಡುವುದು ಆ ಕುಸ್ತಿಯ ಮೇಲೆ ಅವಲಂಬಿತ: ಸತೀಶ್ ಜಾರಕಿಹೊಳಿ