Advertisement

ಒಂದೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಬಂತು 11.41 ಕೋಟಿ ರೂ. ಕರೆಂಟ್‌ ಬಿಲ್.!

10:32 AM Feb 14, 2023 | Team Udayavani |

ಹೈದರಾಬಾದ್: ಸಾಮಾನ್ಯವಾಗಿ ಒಂದು ಮನೆಗಳಿಗೆ ಎಷ್ಟು ಕರೆಂಟ್ ಬಿಲ್‌ ಬರಬಹುದು. 1 ಸಾವಿರ ಹೆಚ್ಚೆಂದೆರೆ ಒಂದು 500 ರೂ. ಹೆಚ್ಚು. ಅದಕ್ಕಿಂತ ಹೆಚ್ಚು ಕರೆಂಟ್‌ ಬಿಲ್‌ ಬರುವುದು ಕಡಿಮೆ. ಆದರೆ ತೆಲಂಗಾಣದ ಗ್ರಾಮ ಪಂಚಾಯತ್‌ ವೊಂದಕ್ಕೆ ಬಂದಿರುವ ಒಂದು ತಿಂಗಳ ಕರೆಂಟ್‌ ಬಿಲ್‌ ನ ಮೊತ್ತ ಕೇಳಿದರೆ ಒಮ್ಮೆ ಬೆಚ್ಚಿ ಬೀಳುವುದು ಗ್ಯಾರೆಂಟಿ.

Advertisement

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಕೊತ್ತಪಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಕಳೆದ ತಿಂಗಳ ಅಂದರೆ ಜನವರಿ ತಿಂಗಳ ಕರೆಂಟ್‌ ಬಿಲ್‌ ನ ಮೊತ್ತ ನೋಡಿ ಇಡೀ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಒಂದು ತಿಂಗಳ ಕರೆಂಟ್‌ ಬಿಲ್‌ ಒಂದೆರೆಡು ಸಾವಿರ ರೂ.ವಲ್ಲ ಬರೋಬ್ಬರಿ 11.41 ಕೋಟಿ ರೂ.

ಇದನ್ನೂ ಓದಿ: ಕಾರು ತಡೆಯಲು ಯತ್ನಿಸಿದ ಟ್ರಾಫಿಕ್‌ ಪೇದೆಯನ್ನೇ ಎಳೆದೊಯ್ದ ಚಾಲಕ: ವಿಡಿಯೋ ವೈರಲ್

ಇಷ್ಟು ದೊಡ್ಡ ಪ್ರಮಾಣದ ಕರೆಂಟ್‌ ಬಿಲ್‌ ಮೊತ್ತ ನೋಡಿ ಗ್ರಾ.ಪಂ ಸದಸ್ಯರು ಅಚ್ಚರಿಗೊಂಡಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಪರಿಶೀಲಿಸಿದಾಗ ಇದು ತಾಂತ್ರಿಕ ದೋಷದಿಂದ ಉಂಟಾದ ಎಡವಟ್ಟು ಕ್ಷಮಿಸಿ ಎಂದಿದ್ದಾರೆ.

ಈ ವಿಚಾರ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next