ಕಳೆದುಕೊಂಡಿರುವ 18 ವರ್ಷದೊಳಗಿನ ಮಕ್ಕಳಿಗಾಗಿ ಪ್ರಧಾನ ಮಂತ್ರಿ ಮಕ್ಕಳ ಕಾಳಜಿ ಎಂಬ ಹೊಸ ಯೋಜನೆ(ಪಿಎಂ ಕೇರ್ ಫಾರ್ ಚಿಲ್ಡ್ರನ್ಸ್)ಯನ್ನು ಘೋಷಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.
Advertisement
ಕೋವಿಡ್ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಾಲನೆ ಮತ್ತು ರಕ್ಷಣೆ ಒಳಗೊಂಡಂತೆ ಅವರ ಆರೋಗ್ಯ ವಿಮೆ, ಶಿಕ್ಷಣಮತ್ತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಅನುಕೂಲವಾಗುವಂತೆ ತಕ್ಷಣ ನೆರವು ಒದಗಿಸುವುದರ ಜೊತೆಗೆ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ ತಲಾ ರೂ. 10 ಲಕ್ಷಗಳನ್ನು ನೀಡಲು ಪ್ರಧಾನ ಮಂತ್ರಿಗಳು ಪ್ರಧಾನಮಂತ್ರಿ ಮಕ್ಕಳ
ಕಾಳಜಿ (ಪಿಎಂ ಕೇರ್ ಫಾರ್ ಚಿಲ್ಡ್ರನ್ಸ್) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.
ಮಾಲಪಾಟಿ ಅವರು ಈ ಸೌಲಭ್ಯದ ಬಗ್ಗೆ ಜಾಗೃತಿ ಕೈಗೊಳ್ಳಬೇಕು. ಯೋಜನೆಯ ಸೌಲಭ್ಯದಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಮುಂದಿನ 15 ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ನಿಜಕ್ಕೂ ನಡೆಯುತ್ತಿರುವುದೇನು?
Related Articles
Advertisement
ಮುಖ್ಯಮಂತ್ರಿ ಬಾಲಸೇವಾ ಯೋಜನೆ ಅಡಿ 3 ಮಕ್ಕಳಿಗೆ ತಲಾ 3500 ರೂ. ಸಹಾಯಧನ ನೀಡಿಕೆ-ಕೋವಿಡ್‌ನಿಂದಾಗಿ ಪೋಷಕರಿಬ್ಬರನ್ನು ಕಳೆದುಕೊಂಡ ಕುಟುಂಬದ ಪೋಷಕರ ಆರೈಕೆಯಲ್ಲಿರುವ 18 ವರ್ಷದೊಳಗಿನ ಮಕ್ಕಳ ನೆರವಿಗೆ ರಾಜ್ಯ ಸರಕಾರ ಮುಂದಾಗಿದ್ದು, ಅವರಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಹೆಸರಿನಡಿ ಸಹಾಯಹಸ್ತ ಚಾಚಿದೆ. 2021-22ನೇ ಸಾಲಿನ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಅವಿಭಜಿತ ಬಳ್ಳಾರಿ ಜಿಲ್ಲೆಯ ತಂದೆ-ತಾಯಿ ಕಳೆದುಕೊಂಡು ಸದ್ಯ ವಿಸ್ತೃತ ಕುಟುಂಬದ ಪೋಷಕರ ಆರೈಕೆಯಲ್ಲಿರುವ 3 ಜನ ಮಕ್ಕಳಿಗೆ ಜುಲೈ ತಿಂಗಳಿನಿಂದ ಸಹಾಯಧನ ನೀಡಲಾಗುತ್ತಿದೆ. ಕಂಪ್ಲಿ ಪಟ್ಟಣದ ಒಬ್ಬರು, ಹಗರಿಬೊಮ್ಮನಹಳ್ಳಿ ತಾಲೂಕಿನ ಇಬ್ಬರು ಮಕ್ಕಳು ಸೇರಿದಂತೆ 3 ಜನ ಮಕ್ಕಳಿಗೆ ತಲಾ ರೂ.3500 ಗಳಂತೆ ಮೂರು ಜನರಿಗೆ 10,500ಗಳನ್ನು ಸಹಾಯಧನ ನೀಡಲಾಗಿದೆ.
ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಕಂಪ್ಲಿಯ 17 ವರ್ಷದ ಬಾಲಕಿ ತಂದೆ-ತಾಯಿ ಕಳೆದ ಮೇ 30 ಮತ್ತು 31ರಂದು ಎರಡು ದಿನಗಳಲ್ಲಿ ತಂದೆ ಮತ್ತು ತಾಯಿಯನ್ನು ಕೋವಿಡ್‌ನಿಂದ ಕಳೆದುಕೊಂಡಿದ್ದರು. ಸದ್ಯ ವಿಸ್ತೃತ ಕುಟುಂಬದ ಪೋಷಕರ ಆರೈಕೆಯಲ್ಲಿ ಬಾಲಕಿ ಬೆಳೆಯುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದ 9 ಮತ್ತು 7 ವರ್ಷದ ಎರಡು ಮಕ್ಕಳ ತಾಯಿ ಜೂ. 8ರಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ ಮಕ್ಕಳು ವಿಸ್ತೃತ ಕುಟುಂಬದ ಪೋಷಕರ ಆರೈಕೆಯಲ್ಲಿವೆ. ಈ ಮಕ್ಕಳಿಗೆ ತಿಂಗಳಿಗೆ ರೂ.3500 ಗಳಂತೆ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಾಲಸೇವಾ ಯೋಜನೆಯ ಆರ್ಥಿಕ ಸೌಲಭ್ಯವನ್ನು ಫಲಾನುಭವಿ ಮತ್ತು ಪೋಷಕರ ಜಂಟಿ ಖಾತೆಗೆ ಪ್ರತಿ ಮಾಹೆ ಜಮೆಗೊಳಿಸಲಾಗುತ್ತದೆ.