Advertisement
ಈ ಕುರಿತು ಮಂಗಳವಾರವೇ ಅರ್ಜಿ ವಿಚಾರಣೆ ನಡೆಸುವಂತೆ ಅರ್ಜಿದಾರರ ಪರ ವಕೀಲರು ಹಂಗಾಮಿ ನ್ಯಾಯಮೂರ್ತಿ ಎಚ್ .ಜಿ ರಮೇಶ್ ಹಾಗೂ ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಜ್ಞಾಪನಾ ಪತ್ರ ಸಲ್ಲಿಸಿದ್ದರು. ಆದರೆ, ವಿಚಾರಣೆಗೆ ಬರಲಿಲ್ಲ. ಹೀಗಾಗಿ ಬಹುತೇಕ ಬುಧವಾರ ವಿಚಾರಣೆ ನಡೆಯುವ ಸಾಧ್ಯತೆಯಿದೆ. ರಾಜ್ಯದ ಜನರ ತೆರಿಗೆ ಹಣವಾದ 10 ಕೋಟಿ ರೂ.ಗಳನ್ನು ವಜ್ರಮಹೋತ್ಸವಕ್ಕೆ ವ್ಯಯಿಸಲಾಗುತ್ತಿದೆ. ಈ ಮೊತ್ತ ಭಾರೀ ದುಬಾರಿಯಾಗಲಿದ್ದು, ಸರಳವಾಗಿ ಆಚರಿಸಬಹುದಿತ್ತು. ಹೀಗಾಗಿ ದುಬಾರಿ ಮೊತ್ತವನ್ನು ವ್ಯಯಿಸದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭಾಧ್ಯಕ್ಷರು ಹಾಗೂ ಆಡಳಿತ ವಿಭಾಗಕ್ಕೆ ನಿರ್ದೇಶನ ನೀಡುವಂತೆ ವಕೀಲರಾದ ಎಸ್.ಎನ್ ಅರವಿಂದ ಎಂಬುವರು ಅರ್ಜಿಯಲ್ಲಿ ಕೋರಿದ್ದಾರೆ. Advertisement
10 ಕೋಟಿ ರೂ. ಖರ್ಚಿಗೆ ಆಕ್ಷೇಪ
09:46 AM Oct 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.