Advertisement

ಆರ್‌ಆರ್‌ಆರ್‌ ಪ್ರೀ ರಿಲೀಸ್‌ ಇವೆಂಟ್‌ಗೆ ಸಿದ್ಧತೆ; ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಸಮಾರಂಭ

09:27 AM Mar 14, 2022 | Team Udayavani |

ಜೂ. ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅಭಿನಯದ, ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ “ಆರ್‌ಆರ್‌ಆರ್‌’ ಸಿನಿಮಾ ಇದೇ ಮಾ. 25ರಂದು ಅದ್ದೂರಿಯಾಗಿ ವಿಶ್ವಾದ್ಯಂತ ತೆರೆ ಕಾಣುತ್ತಿದೆ.

Advertisement

ಸದ್ಯ ಭರದಿಂದ “ಆರ್‌ಆರ್‌ಆರ್‌’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಮಾ. 19ರಂದು ಭಾರತದ ಅತೀ ದೊಡ್ಡ ಪ್ರೀ-ರಿಲೀಸ್‌ ಇವೆಂಟ್‌ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ “ಆರ್‌ಆರ್‌ಆರ್‌’ ಸಿನಿಮಾದ ಈ ಅತಿ ದೊಡ್ಡ ಇವೆಂಟ್‌ ನಡೆಯಲಿದ್ದು, “ಆರ್‌ಆರ್‌ಆರ್‌’ ಸಿನಿಮಾದ ಈ ಪ್ರೀ-ರಿಲೀಸ್‌ ಇವೆಂಟ್‌ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಉಳಿದಂತೆ ನಟ ಶಿವರಾಜಕುಮಾರ್‌, ಚಿಕ್ಕಬಳ್ಳಾಪುರ ಶಾಸಕ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಕೂಡ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

ಇದನ್ನೂ ಓದಿ:ನಟ Prithviraj Sukumaran ಸ್ಮಾರ್ಟ್ ಲುಕ್ಸ್

“ಆರ್‌ಆರ್‌ಆರ್‌’ ಚಿತ್ರದ ನಿರ್ದೇಶಕ ರಾಜಮೌಳಿ, ನಟರಾದ ರಾಮ್‌ ಚರಣ್‌, ಜೂ. ಎನ್‌ ಟಿಆರ್‌, ಆಲಿಯಾ ಭಟ್‌, ಅಜಯ್‌ ದೇವಗನ್‌ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು, ತಂತ್ರಜ್ಞರು ಹಾಗೂ ತೆಲುಗು, ಕನ್ನಡ ಚಿತ್ರರಂಗದ ಅನೇಕ ತಾರೆಯರು ಕೂಡ ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next