Advertisement

ಸಾವಿರ ಕೋಟಿ ಕ್ಲಬ್‌ ಸೇರಿದ “ಆರ್‌ಆರ್‌ಆರ್‌’

08:44 PM Apr 07, 2022 | Team Udayavani |

ನವದೆಹಲಿ: “ಆರ್‌ಆರ್‌ಆರ್‌’ ಸಿನಿಮಾ ಈಗ ಸಾವಿರ ಕೋಟಿ ಸರದಾರ! ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಹೊಸ ಚಿತ್ರದ ಗಳಿಕೆ 1 ಸಾವಿರ ಕೋಟಿ ರೂ. ಮೀರಿದೆ.

Advertisement

ಈ ಸಂಭ್ರಮ ಆಚರಿಸಿಕೊಳ್ಳಲು ಸಿನಿತಂಡ ಮುಂಬೈನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿತ್ತು. ಸಿನಿಮಾ ತಂಡದ ಜತೆಗೆ ಬಾಲಿವುಡ್‌ ದಿಗ್ಗಜರಾದ ಆಮೀರ್‌ ಖಾನ್‌, ಕರಣ್‌ ಜೋಹರ್‌, ಹುಮಾ ಖುರೇಷಿ, ಜೀತೇಂದ್ರ ಹಾಗೂ ಜಾವೇದ್‌ ಅಖ್ತರ್‌ ಪಾಲ್ಗೊಂಡಿದ್ದರು.

1920ರ ಕಾಲಘಟ್ಟದ ಕಥೆಯುಳ್ಳ “ಆರ್‌ಆರ್‌ಆರ್‌’ ಚಿತ್ರವು ಇಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಮ್‌ ಭೀಮ್‌ ಅವರ ಜೀವನಗಾಥೆ ಆಧರಿಸಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳ ಅವತರಣಿಕೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next