Advertisement

ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್‌ ಬೆಂಬಲಿಸಿ

11:52 AM Oct 27, 2020 | Suhan S |

ಕೆಂಗೇರಿ: ರಾಜರಾಜೇಶ್ವರಿನಗರ ವಿಧಾನಸಭಾ  ಕ್ಷೇತ್ರವನ್ನು ಕಳಂಕರಹಿತ, ಭ್ರಷ್ಟಾಚಾರರಹಿತ, ಪ್ರಗತಿಯತ್ತ ಕೊಂಡೊಯ್ಯಲು ನಿಮ್ಮ ಸೇವಕಿ, ಮನೆ ಮಗಳು, ವಿದ್ಯಾವಂತ ಹೆಣ್ಣು ಮಗಳಿಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ. ಎಚ್‌ ಮತದಾರರಲ್ಲಿ ಮನವಿ ಮಾಡಿದರು.

Advertisement

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚನ್ನಸಂದ್ರ, ಬೆಮಲ್‌ ಬಡಾವಣೆ, ಹಲಗೇವಡೇರಹಳ್ಳಿಯಲ್ಲಿ ಸೋಮವಾರ ಮತಯಾಚನೆ ಮಾಡಿದ ಅವರು, ನಿಮ್ಮ ಮಗಳಿಗೆ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಕಾಂಗ್ರೆಸ್‌ಗೆ ಮತ ನೀಡಿದರೆ ದಿನದ 24 ಗಂಟೆ ನಿರಂತರ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾಅಮರನಾಥ್‌ ಮಾತನಾಡಿ,ಕ್ಷೇತ್ರದಲ್ಲಿ ಮಹಿಳಾ ಕಾರ್ಪೊರೇಟರ್‌ಗಳಿಗೆ ಅಭಿವೃದ್ಧಿ ಮಾಡಲು ಬಿಡದೆ ಅವರ ಹಿಂಬಾಲಕರ ಮೂಲಕ ಹಲವಾರು ಕೇಸ್‌ಗಳನ್ನು ಮುನಿರತ್ನ ದಾಖಲು ಮಾಡಿದ್ದಾರೆ. ಬಿಬಿಎಂಪಿ ಹೊರಗೆ- ಒಳಗೆ ಹೋರಾಟ ಮಾಡಿದ ಬಿಜೆಪಿಯ ಮಮತಾ ವಾಸುದೇವ್‌, ಕಾಂಗ್ರೆಸ್‌ನಲ್ಲಿದ್ದ ಆಶಾ ಸುರೇಶ್‌, ಜೆಡಿಎಸ್‌ನಲ್ಲಿದ್ದ ಮಂಜುಳಾ ನಾರಾಯಣಸ್ವಾಮಿ ಬಿಜೆಪಿ ನಾಯಕರಿಗೆ ಹೆದರಿಕೊಂಡು ಮುನಿರತ್ನ ಅವರ ಜತೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.ನೋವನ್ನು ಮರೆಯಲಾಗದೆ, ಒಳಗಡೆ ವಿಷವಿಟ್ಟುಕೊಂಡು ದುಗುಡ, ದುಮ್ಮಾನದಲ್ಲಿ ಬಿಜೆಪಿ ಪರವಾಗಿ ನಿಂತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ರಾಜ್‌ಕುಮಾರ್‌ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೂರಾರು ಕೋಟಿ ರೂ. ಅನುದಾನ ನೀಡಿದ್ದರಿಂದ ರಾಜರಾಜೇಶ್ವರಿನಗರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ. ಎಚ್‌ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚನ್ನಸಂದ್ರ, ಬೆಮಲ್‌ ಬಡಾವಣೆ, ಹಲಗೇವಡೇರಹಳ್ಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ರಾಜ್‌ಕುಮಾರ್‌ ಮತಯಾಚನೆ ಮಾಡಿದರು.

ಜನರ ಪ್ರೀತಿ ವಿಶ್ವಾಸ ಹಣಕ್ಕೆ ಮಾರಿಕೊಳ್ಳುವುದಿಲ್ಲ: ಕುಸುಮಾ :

Advertisement

ಬೆಂಗಳೂರು: ನಾನು ಜನರ ಸೇವೆ ಮಾಡಲು ಬಯಸಿದ್ದು, ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದಿಗೂ ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಜತೆ ಪ್ರಚಾರ ನಡೆಸಿದ ಕುಸುಮಾ ಕ್ಷೇತ್ರದ

ಜನರಿಗೆ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಹಾಗೂ ರಾಜರಾಜೇಶ್ವರಿ ತಾಯಿ ಆಶೀರ್ವದಿಸಿ ಆಯುಷ್‌ ಆರೋಗ್ಯ, ಐಶ್ವರ್ಯ ಕರುಣಿಸಲಿ ಎಂದರು. ನಾನು ಯಾವುದೇ ದುರಾಲೋಚನೆ ಇಟ್ಟುಕೊಂಡು ಈ ಚುನಾವಣೆಗೆ ಬಂದಿಲ್ಲ. ನಿಮ್ಮ ಸೇವೆಗೆ ನಾನು ಬಂದಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ಪಡುತ್ತೇನೆ. ನೀವು ಕೊಡುವ ಮತವನ್ನು ಮಾರಿಕೊಳ್ಳುವುದಿಲ್ಲ. ನಿಮ್ಮ ನೋವು, ದುಃಖದಲ್ಲಿ ನಿಮ್ಮ ಮನೆ ಮಗಳಂತೆ ಜೊತೆಗಿರುತ್ತೇನೆ. ನಿಮ್ಮ ಮಗಳಿಗೆ ನೀಡುವ ಪ್ರೋತ್ಸಾಹವನ್ನೇ ನನಗೂ ನೀಡಿ, ನವೆಂಬರ್‌ 3 ರಂದು ನಡೆವ ಮತದಾನದಲ್ಲಿ ಹಸ್ತದ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next