Advertisement

ರೈಲುಗಳಲ್ಲಿ ಕಳ್ಳಸಾಗಣೆ : 669 ಮಕ್ಕಳನ್ನು ರಕ್ಷಿಸಿದ ಆರ್‌ಪಿಎಫ್

06:37 AM Jan 12, 2019 | Team Udayavani |

ಗುವಾಹಟಿ : ರೈಲ್ವೇ ರಕ್ಷಣಾ ದಳ (ಆರ್‌ಪಿಎಫ್) ಕಳೆದ 2018ರಲ್ಲಿ ಈಶಾನ್ಯ ಫ್ರಾಂಟಿಯರ್‌ ರೈಲ್ವೇ ವ್ಯಾಪ್ತಿಗೆ ಒಳಪಡುವ ರೈಲು ನಿಲ್ದಾಣಗಳಿಂದ ಮತ್ತು ರೈಲುಗಳಿಂದ 669 ಅಪ್ರಾಪ್ತ ವಯಸ್ಸಿನ ಹುಡುಗರು ಮತ್ತು ಹುಡುಗಿಯರನ್ನು ರಕ್ಷಿಸಿದ್ದಾರೆ ಎಂದು ಇಂದು ಶನಿವಾರ ವಕ್ತಾರ ತಿಳಿಸಿದ್ದಾರೆ.

Advertisement

ರಕ್ಷಿಸಲ್ಪಟ್ಟ ಹೆಚ್ಚಿನ ಮಕ್ಕಳು ಕಳ್ಳಸಾಗಾಟಕ್ಕೆ ಗುರಿಯಾದವರು; ಇವರಲ್ಲಿ ಹುಡುಗಿಯರನ್ನು ಹೊರ ರಾಜ್ಯಗಳಿಗೆ ಒಯ್ಯುವ ಯತ್ನದಲ್ಲಿದ್ದ  ಕಳ್ಳಸಾಗಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

ನಾಗಾಲ್ಯಾಂಡ್‌ನ‌ ದೀಮಾಪುರದ ರಂಗಪಹಾಡ್‌ ಪ್ರದೇಶದಿಂದ ಐವರು ಹುಡುಗರು ತಮ್ಮ ಮನೆಯಿಂದ ಓಡಿ ಹೋಗಿದ್ದರು. ಇವರಲ್ಲಿ ಮೂವರನ್ನು  ಬ್ರಹ್ಮಪುತ್ರಾ ಮೇಲ್‌ ಟ್ರೆನ್‌ನಿಂದ ಪಾರುಗೊಳಿಸಲಾಗಿದೆ. ಇಬ್ಬರನ್ನು ಲುಮ್‌ಡಿಂಗ್‌ನಲ್ಲಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ ನಿಂದ  ಪಾರುಗೊಳಿಸಲಾಗಿದೆ ಎಂದು ವಕ್ತಾರ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next