ಬೆಂಗಳೂರು: ಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಬಂಧನಕ್ಕೊಳಗಾಗಿ ರುವ ಶಾಸಕ ಮುನಿರತ್ನ ವಿಕಾಸಸೌಧ ಸೇರಿ ವಿವಿಧೆಡೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆಯು ಗಂಭೀರ ಆರೋಪ ಮಾಡಿದ್ದಾರೆ.
ಈ ಹೇಳಿಕೆಯು ಮುನಿರತ್ನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ಮತ್ತೂಂದೆಡೆ ಮುನಿರತ್ನಗೆ ಎಸ್‌ಐಟಿ ಗ್ರಿಲ್ ಮುಂದುವರಿದಿದೆ.
ಕಗ್ಗಲೀಪುರ ಪೊಲೀಸರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಿರುವ ಸಂತ್ರಸ್ತೆ ಇದೇ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರಡಿ ಯಲ್ಲೂ ಪುನರುತ್ಛರಿಸಿದ್ದಾರೆ ಎಂದು ತಿಳಿದು ಬಂದಿದೆ. 2020 ರಿಂದ 2023 ರವರೆಗೂ ಮುನಿರತ್ನ ನನ್ನ ಮೇಲೆ ಆಗಾಗ ಅತ್ಯಾಚಾರ ಎಸಗಿದ್ದಾರೆ. ವಿಕಾಸ ಸೌಧ ದಲ್ಲಿದ್ದ ಮುನಿರತ್ನ ಕೊಠಡಿ (ಚೇಂಬರ್), ಸರ್ಕಾರದವರು ಅವರಿಗೆ ನೀಡಿದ್ದ ಕಾರಿನಲ್ಲಿ ಹಾಗೂ ಅವರ ಗೋದಾಮಿನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಈ ಹೇಳಿಕೆಯು ಶಾಸಕ ಮುನಿರತ್ನಗೆ ಮುಳುವಾಗುವ ಸಾಧ್ಯತೆಗಳಿವೆ. ಇಷ್ಟೇ ಅಲ್ಲದೇ, ಸಂತ್ರಸ್ತೆಯು ಮುನಿರತ್ನ ವಿರುದ್ಧ ಇನ್ನಷ್ಟು ಆರೋಪ ಮಾಡಿದ್ದು, ಮಾಜಿ ಶಾಸಕರೊಬ್ಬ ರೊಂದಿಗೆ ಅಶ್ಲೀಲವಾಗಿ ಮಾತನಾಡುವಂತೆ ಹೇಳಿ ಅವರ ಅಶ್ಲೀಲ ಚಿತ್ರಗಳನ್ನು ನನ್ನ ಕಡೆಯಿಂದ ಮುನಿರತ್ನ ಪಡೆದುಕೊಂಡಿದ್ದರು. ಮುನಿರತ್ನ ಹಲವಾರು ಜನರ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅವರ ಕಡೆಯಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆಸ್ಪತ್ರೆಯೊಂದರ ವೈದ್ಯರೊಬ್ಬರ ಅಶ್ಲೀಲ ವಿಡಿಯೋ ಬೇಕು ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಆದರೆ, ಇದನ್ನು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ನನ್ನ ವಿಡಿಯೋವನ್ನು ನನ್ನ ಪತಿ ಹಾಗೂ ಮಕ್ಕಳಿಗೆ ಕಳುಹಿಸಿದ್ದಾರೆ. ಜೊತೆಗೆ ನನಗೆ ಮುನಿರತ್ನ ಜೀವ ಬೆದರಿಕೆ ಹಾಕಿದ್ದಾರೆ. ಮುನಿರತ್ನ ಹೇಳಿದಂತೆ ಕೇಳದಿದ್ದರೆ ನಿನ್ನ ಮಗನನ್ನು ಅಪಹರಿಸುವುದಾಗಿ ಅವರ ಗನ್‌ಮ್ಯಾನ್ ಹೆದರಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎಂದು ಗೊತ್ತಾಗಿದೆ.
ಮುನಿರತ್ನಗೆ ಮುಂದುವರಿದ ಎಸ್‌ಐಟಿ ಗ್ರಿಲ್: ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ವಿಭಾಗದಲ್ಲಿ ತನಿಖಾಧಿಕಾರಿಗಳು ಮುನಿರತ್ನ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ತನಿಖಾಧಿ ಕಾರಿಗಳಾದ ಸೌಮ್ಯಲತಾ ಹಾಗೂ ಎ.ಸಿ.ಸೈಮನ್ ಪ್ರಕರಣದ ಪ್ರಾಥಮಿಕ ಹಂತದ ಮಾಹಿತಿಯನ್ನು ಮುನಿರತ್ನರಿಂದ ಕಲೆ ಹಾಕಿದ್ದಾರೆ. ಇದೀಗ ಎಸ್‌ಐಟಿಗೆ ಸಿಕ್ಕಿರುವ ಸಾಕ್ಷ್ಯ ಮುಂದಿಟ್ಟು ವಿಚಾರಣೆ ನಡೆಯುತ್ತಿದೆ. ಆದರೆ, ಮುನಿರತ್ನ ಮಾತ್ರ ಸಂತ್ರಸ್ತೆ ಆರೋಪಗಳ ಬಗ್ಗೆ ಗೊಂದಲದ ಹೇಳಿಕೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಮುನಿರತ್ನರನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸುವ ಪ್ರಕ್ರಿಯೆ, ಮುನಿರತ್ನ ಪುರುಷತ್ವ ಪರೀಕ್ಷೆಯು ಶೀಘ್ರದಲ್ಲೇ ನಡೆಯುವ ಸಾಧ್ಯತೆಗಳಿವೆ. ಮುನಿರತ್ನ ಬಳಸುತ್ತಿದ್ದ ಮೊಬೈಲ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಕೋಲಾರದ ಬಳಿ ಮೊಬೈಲ್ ನಾಪತ್ತೆಯಾಗಿದೆ ಎಂದು ಮುನಿರತ್ನ ಹೇಳುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಎಸ್‌ಐಟಿ ತನಿಖಾಧಿಕಾರಿಗಳು ಮುನಿರತ್ನ ಮೊಬೈಲ್‌ನ ಐಎಂಇಐ ನಂಬರ್ ಪಡೆದು ಮೊಬೈಲ್‌ಗಾಗಿ ತಡಕಾಡುತ್ತಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷ್ಯಗಳು ಈ ಮೊಬೈಲ್‌ನಲ್ಲಿ ಅಡಕವಾಗಿದೆ ಎಂದು ತಿಳಿದು ಬಂದಿದೆ. ಸಂತ್ರಸ್ತೆ ಜೊತೆಗೆ ಇದೇ ಮೊಬೈಲ್‌ನಲ್ಲಿ ಮಾತನಾಡಿದ್ದರು ಎನ್ನಲಾಗುತ್ತಿದೆ.
“ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್’: ಮುನಿರತ್ನ ಯಾವಾಗಲೂ ವಾಟ್ಸಾಪ್ ಆಡಿಯೋ ಮತ್ತು ವಿಡಿಯೋ ಕರೆ ಮಾಡುತ್ತಿದ್ದರು. 2020ರಲ್ಲಿ ಗೋದಾಮಿಗೆ ಕರೆಸಿ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದರು. ಮುನಿರತ್ನಗೆ ಗೊತ್ತಿರುವ ವ್ಯಕ್ತಿಯೊಬ್ಬರು ಬೇರೆ ಮಹಿಳೆಯರ ಜೊತೆಗಿರುವ ಅಶ್ಲೀಲ ವಿಡಿಯೋ ಮಾಡಿ ಕೊಡಬೇಕೆಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಈ ವಿಡಿಯೋ ಮಾಡಲು ಎಚ್‌ಐವಿ ಪೀಡಿತೆಯೊಬ್ಬರನ್ನು ಆ ವ್ಯಕ್ತಿ ಜೊತೆ ಮಲಗಲು ಕಳುಹಿಸಿಕೊಟ್ಟಿದ್ದರು. ಆ ವ್ಯಕ್ತಿಯು ಈ ಮಹಿಳೆಯೊಂದಿಗೆ ಕಳೆದ ಖಾಸಗಿ ದೃಶ್ಯ ಚಿತ್ರಿಸಲು ಮೊಬೈಲ್ ಕ್ಯಾಮೆರಾವನ್ನು ನನ್ನ ಕಡೆಯಿಂದ ಫಿಕ್ಸ್ ಮಾಡಿದ್ದರು. ಆ ವಿಡಿಯೋ ಸರಿಯಿಲ್ಲವೆಂದು ಮತ್ತೂಂದು ಬಾರಿ ಮೂರು ಜನ ಮಹಿಳೆಯರನ್ನು ಕಳಿಸಿ ಅದೇ ವ್ಯಕ್ತಿಯೊಂದಿಗಿನ ಖಾಸಗಿ ವಿಡಿಯೋ ಸೆರೆ ಹಿಡಿಯಲು ತಮ್ಮ ಆಪ್ತರ ಮೂಲಕ ಕ್ಯಾಮರಾ ಫಿಕ್ಸ್ ಮಾಡಿಸಿದ್ದರು. ಇದಾದ ನಂತರವೂ ಮತ್ತೋರ್ವ ವ್ಯಕ್ತಿಯ ಜೊತೆಗಿನ ಖಾಸಗಿ ದೃಶ್ಯ ಸೆರೆಹಿಡಿಯಲು ಸೂಚಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎನ್ನಲಾಗಿದೆ. ಇದಲ್ಲದೇ ತಮ್ಮ ಆಪ್ತರೊಬ್ಬರಿಗೆ ಮಹಿಳೆಯೊಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿ ಆ ಮಹಿಳೆಯನ್ನು ರೆಸಾರ್ಟ್ ವೊಂದಕ್ಕೆ ಕರೆದೊಯ್ದು ಖಾಸಗಿ ದೃಶ್ಯ ಸೆರೆಹಿಡಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.