Advertisement

ರಾಜ್ಯದ ಜನತೆ ಬಿಜೆಪಿಯ ಹಗರಣಗಳಿಂದ ರೋಸಿ ಹೋಗಿದ್ದಾರೆ : ರೋಝಿ ಜಾನ್‌

12:45 AM Dec 20, 2022 | Team Udayavani |

ಉಡುಪಿ : ಪಕ್ಷದ ಮೂಲದಿಂದ ಈಗಾಗಲೇ ಹಲವು ಬಾರಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯದ ಮತದಾರರು ಬಿಜೆಪಿಯ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ರೋಸಿ ಹೋಗಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಅಖೀಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ರೋಝಿ ಜಾನ್‌ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರವಾರು ಪಕ್ಷ ಸಂಘಟನ ಸಭೆಯಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಧ್ರುವನಾರಾಯಣ ಮಾತನಾಡಿ, ರಾಜ್ಯದಲ್ಲಿ 30 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದ್ದು, ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದರಿಂದ ಬಿಜೆಪಿ ಸರಕಾರದ ಷಡ್ಯಂತ್ರ ಬಯಲುಗೊಂಡಿದೆ ಎಂದರು.

ಡಬಲ್‌ ಎಂಜಿನ್‌ ವೈಫ‌ಲ್ಯ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಯುಪಿಎ ಸರಕಾರದ ಅವಧಿಯಲ್ಲಿ ಅತ್ಯಲ್ಪ ಬೆಲೆ ಏರಿಕೆಯಾದಾಗ ಬಿಜೆಪಿ ರಸ್ತೆಗಿಳಿದು ಪ್ರತಿಭಟಿಸುತ್ತಿತ್ತು. ಈಗ ಬೆಲೆ ಗಗನಕ್ಕೇರಿದರೂ ಅದು ಅಭಿವೃದ್ಧಿಗಾಗಿ ಎನ್ನುವ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರಕಾರವಿದ್ದರೂ ರಾಜ್ಯ ಸರಕಾರ ಕೇಂದ್ರದಿಂದ ಅನುದಾನವನ್ನು ತರುವಲ್ಲಿ ವಿಫ‌ಲವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫ‌ೂರ್‌, ಮಿಥುನ್‌ ರೈ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಪಕ್ಷದ ಮುಖಂಡರಾದ ಶಂಕರ್‌ ಕುಂದರ್‌, ದೀಪಕ್‌ ಕೋಟ್ಯಾನ್‌, ಸೌರಭ ಬಲ್ಲಾಳ್‌, ರೋಶನ್‌ ಶೆಟ್ಟಿ, ಅಣ್ಣಯ್ಯ ಶೇರಿಗಾರ್‌, ಪ್ರಸಾದ್‌ ಕಾಂಚನ್‌, ದಿನೇಶ್‌ ಪುತ್ರನ್‌, ಬಿ. ನರಸಿಂಹ ಮೂರ್ತಿ, ಹರೀಶ್‌ ಕಿಣಿ, ಹಬೀಬ್‌ ಆಲಿ, ಮುರಳಿ ಶೆಟ್ಟಿ, ಕುಶಲ ಶೆಟ್ಟಿ, ಸಂತೋಷ್‌ ಕುಲಾಲ…, ಪ್ರಖ್ಯಾತ ಶೆಟ್ಟಿ, ಶಬ್ಬಿರ್‌ ಅಹ್ಮದ್‌, ಅಮೃತ್‌ ಶೆಣೈ, ಕೀರ್ತಿ ಶೆಟ್ಟಿ, ಮಾರ್ಮಡಿ ಸುಧಾಕರ ಶೆಟ್ಟಿ, ದಿವಾಕರ ಕುಂದರ್‌, ಕಿಶನ್‌ ಹೆಗ್ಡೆ ಕೊಳ್ಕೆಬೈಲ…, ಜ್ಯೋತಿ ಹೆಬ್ಟಾರ್‌, ಮಮತಾ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಹಮೀದ್‌, ಯತೀಶ್‌ ಕರ್ಕೇರ, ವಿಜಯ ಪೂಜಾರಿ, ಶ್ರೀನಿವಾಸ ಹೆಬ್ಟಾರ್‌, ಉದ್ಯಾವರ ನಾಗೇಶ್‌ ಕುಮಾರ್‌, ಸಂಜಯ ಆಚಾರ್ಯ, ಸುರೇಶ್‌ ಶೆಟ್ಟಿ ಬನ್ನಂಜೆ, ಉಪೇಂದ್ರ, ಗಣೇಶ್‌ ದೇವಾಡಿಗ ಉಪಸ್ಥಿತರಿದ್ದರು. ಬ್ರಹ್ಮಾವರ ಬ್ಲಾಕ್‌ ಅಧ್ಯಕ್ಷ ದಿನಕರ ಹೇರೂರು ಸ್ವಾಗತಿಸಿ, ಉಡುಪಿ ಬ್ಲಾಕ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್‌ ಕಿದಿಯೂರು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next