Advertisement

ರಾಯನ್‌ ಇಂಟರ್‌ನ್ಯಾಶನಲ್‌ ತಂಡ ರಾಷ್ಟ್ರೀಯ ಚಾಂಪಿಯನ್‌

11:57 AM Nov 21, 2017 | Team Udayavani |

ಮುಂಬಯಿ: ಸೆಂಟ್ರಲ್‌ ಬೋರ್ಡ್‌ ಸ್ಕೂಲ್‌ ಎಜುಕೇಶನ್‌ ವತಿಯಿಂದ ಆಯೋಜಿಸಲ್ಪಟ್ಟ 17ರ ವಯೋಮಿತಿಯ ಬಾಲಕಿಯರ ವಿಭಾಗದ ರಾಷ್ಟ್ರಮಟ್ಟದ ಫ‌ುಟ್ಬಾಲ್‌ ಪಂದ್ಯವು ನ. 16ರಿಂದ ನ.18ರ ವರೆಗೆ ಭೋಪಾಲ್‌ನಲ್ಲಿ ನಡೆಯಿತು. ಪಂದ್ಯದಲ್ಲಿ ರಾಯನ್‌ಇಂಟರ್‌ನ್ಯಾಷನಲ್‌ ಸಾನ್‌ಪಾಡ  ತಂಡದ ಬಾಲಕಿಯರು ಮೋಡರ್ನ್ ಸ್ಕೂಲ್‌ ಡೆಲ್ಲಿ ತಂಡವನ್ನು 3-1 ಪೆನಾಲ್ಟಿ ಗೋಲುಗಳಿಂದ ಸೋಲಿಸಿ ರಾಷ್ಟ್ರೀಯ ಚಾಂಪಿಯನ್‌ಗಳಾಗಿ ಮೂಡಿ ಬಂದರು.

Advertisement

ಮೊದಲ ಪಂದ್ಯ ನೋಯಿಡಾ ವಿರುದ್ದ ರಾಯನ್‌ 5-1 ಗೋಲಿನಿಂದ ಗೆಲುವು ಸಾಧಿಸಿತು. ಸೆಮಿ ಪೈನಲ್‌ ಪಂದ್ಯದಲ್ಲಿ ಎನ್‌ ಜಿ ಇಂಟರ್‌ನ್ಯಾಶನಲ್‌ ತಂಡದ ವಿರುದ್ಧ ರಾಯನ್‌ ತಂಡ 22-0 ಗೋಲುಗಳಿಂದ ಚರಿತ್ರೆ ನಿರ್ಮಿಸಿತು. ಪಂದ್ಯಾಟದಲ್ಲಿ ರಾಯನ್‌ ಪರ ಭಾಗ್ಯಶ್ರೀ ದಳ್ವಿ 8 ಗೋಲು ದಾಖಲಿಸಿ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಳು. ಮಹಾರಾಷ್ಟ್ರ, ಗೋವಾ, ಕೇರಳ,ಕರ್ನಾಟಕ, ಚೆನ್ನೈ ವಿಭಾಗದ ವಿರುದ್ಧ ಜಯಿಸಿ ರಾಯನ್‌ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು.

ನಮ್ಮ ಶಾಲೆಯ ವತಿಯಿಂದ ಕ್ರೀಡೆಗೆ ಉತ್ತಮ ರೀತಿಯ ಸವಲತ್ತು ನೀಡುತ್ತಿದ್ದೇವೆ. ಅಂತೆಯೇ, ಶಾಲೆಯು ಉತ್ತಮ ರೀತಿಯಲ್ಲಿ ಶಿಸ್ತನ್ನು ಪಾಲಿಸುವುದರಿಂದ ರಾಷ್ಟ್ರೀಯ ಮಟ್ಟಕ್ಕೆ ಬಾಲಕರ ಮತ್ತು ಬಾಲಕಿಯರ ತಂಡ ಆಯ್ಕೆಯಾಗಿದೆ ಎನ್ನಲು ಸಂತೋಷವಾಗುತ್ತಿದೆ ಎಂದು ಶಾಲೆಯ ಪ್ರಾಂಶುಪಾಲೆ ಮ್ಯೂರಿಯಲ್‌ ಫೆರ್ನಾಂಡಿಸ್‌ ತಿಳಿಸಿದರು.

ತಂಡದ ತರಬೇತುದಾರ ಅಮೆjದ್‌ ಖಾನ್‌ ಮತ್ತು ಸಹಾಯಕಿ ಸರಸ್ವತಿ ಅವರ ಶ್ರಮದಿಂದ ನಾವು ರಾಷ್ಟ್ರೀಯ ಚಾಂಪಿಯನ್‌ಗಳಾದೆವು ಎಂದು ತಂಡದ ನಾಯಕಿ ಜಾಹ್ನವಿ ಶೆಟ್ಟಿ ನುಡಿದರು. ಶಾಲ ನಿರ್ದೇಶಕಿ ಗ್ರೇಸ್‌ ಪಿಂಟೋ ಕೂಡ ಮಕ್ಕಳಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next