Advertisement
ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಿಗಿ ದಾಳಿ ನಡೆಸಿದ ಆರ್ ಸಿಬಿ ವನಿತೆಯರು ಘಾತಕವಾಗಿ ಕಾಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 113 ರನ್ ಗಳಿಗೆ ಆಲೌಟ್ ಮಾಡಿದರು.
ಡೆಲ್ಲಿಯ ಆರಂಭಿಕ ಜೋಡಿ ಮೊದಲ 7 ಓವರ್ ಗಳಲ್ಲಿ 64 ಉತ್ತಮ ಜತೆಯಾಟವಾಡಿದರಾದರೂ ತಂಡ ಕುಸಿದು ಹೋಯಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 23, ಶಫಾಲಿ ವರ್ಮ 44 ರನ್ ಗಳಿಸಿದರು. ರಾಧಾ ಯಾದವ್ 12 ಮತ್ತು ಅರುಂಧತಿ ರೆಡ್ಡಿ 10 ರನ್ ಹೊರತು ಪಡಿಸಿ ಉಳಿದ ಆಟಗಾರ್ತಿಯರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು.
Related Articles
Advertisement
ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಬಾರಿಗೆ ನೇರವಾಗಿ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಶುಕ್ರವಾರದ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ರೋಚಕ 5 ರನ್‌ಗಳ ಗೆಲುವನ್ನಾಚರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.