Advertisement

ಶಾಂತಿ ಕದಡಿದರೆ ರೌಡಿಗಳ ವಿರುದ್ಧ ಕ್ರಮ

03:03 PM Feb 14, 2017 | Team Udayavani |

ಕಲಬುರಗಿ: ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ಪರೇಡ್‌ನ‌ಲ್ಲಿ ಜಿಲ್ಲೆಯ ವಿವಿಧ ಪೊಲೀಸ ಠಾಣೆಗಳಲ್ಲಿನ ಸುಮಾರು 500 ರೌಡಿಗಳು ಭಾಗವಹಿಸಿದ್ದರು. ಭಾಗವಹಿಸಿದ್ದ ರೌಡಿಗಳಿಗೆ ಅಪರಾಧ ಪ್ರಕರಣದಲ್ಲಿ ತೊಡಗದಂತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ಎಸ್‌ಪಿ ಎನ್‌. ಶಶಿಕುಮಾರ ನೀಡಿದರು. 

Advertisement

ನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ 226 ರೌಡಿಗಳು ಹಾಗೂ ಹೊಸದಾಗಿ ರೌಡಿ ಪಟ್ಟಿಗೆ ಸೇರ್ಪಡೆಯಾದವರನ್ನು ಪರೇಡ್‌ ಮೈದಾನಕ್ಕೆ ಕರೆಸಿ  ಅವರ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡರು. ರೌಡಿಗಳ ಪರೇಡ್‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಶಶಿಕುಮಾರ, 2016ನೇ ಸಾಲಿನಲ್ಲಿ ರೌಡಿಗಳ ಪಟ್ಟಿಗೆ ಹೊಸದಾಗಿ 430 ಜನರನ್ನು ಸೇರ್ಪಡೆಮಾಡಲಾಗಿದೆ.

80 ಕೊಲೆ ಪ್ರಕರಣ, 70 ಅಟ್ರಾಸಿಟಿ ಪ್ರಕರಣ, 60 ಅತ್ಯಾಚಾರ ಪ್ರಕರಣ, 60 ಸುಲಿಗೆ ಪ್ರಕರಣ, 8 ದರೋಡೆ ಪ್ರಕರಣ, 2150 ಹಲ್ಲೆ ಪ್ರಕರಣಗಳು ವರದಿಯಾಗಿವೆ. 1987 ರೌಡಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿದಂತಾಗಿದೆ ಎಂದರು. ರೌಡಿ ಪಟ್ಟಿಯಲ್ಲಿರುವವರು ಸಮಾಜಘಾತುಕ ಕೃತ್ಯಗಳಲ್ಲಿ ಮುಂದುವರಿದರೆ ಅಂಥವರನ್ನು ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು. ಪರೇಡ್‌ ಸಂದರ್ಭದಲ್ಲಿ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ವಿವಿಧ ಠಾಣೆಗಳ ಅಧಿಕಾರಿಗಳು ಇದ್ದರು. 

ಶಹಾಬಾದ: ನಗರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ರೌಡಿಗಳ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಡಿವೈಎಸ್‌ಪಿ ಮಹೇಶ ಮೇಗಣ್ಣನವರ್‌ ನೇತೃತ್ವದಲ್ಲಿ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಚಿತ್ತಾಪುರ,ವಾಡಿ, ಶಹಾಬಾದ, ಮಾಡಬೂಳ, ಕಾಳಗಿ ಸೇರಿದಂತೆ ಇತರ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 65 ರೌಡಿಗಳನ್ನು ಠಾಣೆಗೆ  ಕರೆಯಿಸಿ ಸಿಪಿಐ ಶಂಕರಗೌಡ ಪಾಟೀಲ ರೌಡಿಗಳ ಪರೇಡ್‌ ನಡೆಸಿದ್ದಾರೆ. 

ಈ ವೇಳೆ ಮಾತನಾಡಿದ ಡಿವೈಎಸ್‌ಪಿ ಮಹೇಶ ಮೇಗಣ್ಣನವರ್‌, ರೌಡಿಗಳು ಶಾಂತಿ ಕದಡುವುದು ಅಥವಾ ಪ್ರೇರಣೆ ನೀಡುವುದು ಕಂಡುಬಂದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು.ಕೆಲವರು ಬೇಲ್‌ ಮೇಲೆ ಹೊರಹೋಗಿದ್ದೀರಿ,ಯಾವುದೇ ಕಾರಣಕ್ಕೂ ಬೇಲ್‌ ಷರತ್ತು ಮುರಿಯಬಾರದು ಎಂದು ಹೇಳಿದರು. ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ ಮಾತನಾಡಿ, ಬೇರೆಯವರಿಗಾಗಿ ಪೈರಸಿ  ಮಾಡುವುದನ್ನು ನಿಲ್ಲಿಸಬೇಕು.

Advertisement

ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ, ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಸಿದರು. ಚಿತ್ತಾಪುರ ಪಿಎಸ್‌ಐ ಜಗದೇವಪ್ಪ ಪಾಳಾ, ವಾಡಿ ಪಿಎಸ್‌ಐ ನಟರಾಜ ಲಾಡೆ, ಮಾಡಬೂಳ ಪಿಎಸ್‌ಐ ಹುಸೇನ ಭಾಷಾ, ಎಎಸ್‌ಐ ಕಲ್ಯಾಣರಾವ್‌, ಯಾದವ ರಾಠೊಡ, ಸುಭಾಷ ರಾಠೊಡ, ನಾಗೇಂದ್ರ ತಳವಾರ, ಗುಂಡಪ್ಪ ಕೊಗನೂರ್‌,ಜಮೀಲ್‌, ಎಜಿಕಲ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next