Advertisement

ರೇವ್‌ ಪಾರ್ಟಿ: ಮಾಲಿಕನ ಮೇಲಿನ ಕೇಸ್‌ ರದ್ದು

03:13 PM Sep 06, 2024 | Team Udayavani |

ಬೆಂಗಳೂರು: ನಗರದ ಹೊರವಲಯದ ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದ ಜಿ.ಆರ್‌.ಫಾರ್ಮ್ ಹೌಸ್‌ನಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ರೇವ್‌ ಪಾರ್ಟಿ ಪ್ರಕರಣದ ಸಂಬಂಧ ಫಾರ್ಮ್ ಹೌಸ್‌ ಬಾಡಿಗೆ ನೀಡಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಪ್ರಕರಣ ರದ್ದು ಕೋರಿ ಸಿಂಗೇನ ಅಗ್ರಹಾರದ 68 ವರ್ಷದ ಆರ್‌.ಗೋಪಾಲ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ಜಾಗವನ್ನು ಬಾಡಿಗೆಗೆ ನೀಡಿದ್ದಾರೆಂದ ಮಾತ್ರಕ್ಕೆ ಅವರಿಗೆ ಬಾಡಿಗೆ ಜಾಗದಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಸೇವನೆ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಅರಿವಿದೆ ಎಂದರ್ಥವಲ್ಲ, ಅದಕ್ಕಾಗಿ ಅವರನ್ನು ಮಾದಕ ದ್ರವ್ಯ ನಿಗ್ರಹ ಕಾಯ್ದೆ (ಎನ್‌ ಡಿಪಿಎಸ್‌) ಅಡಿ ಹೊಣೆಗಾರರನ್ನಾಗಿ ಮಾಡಲಾಗದು. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದ ಪಾರ್ಟಿಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿ ರುವುದು ಅರ್ಜಿದಾರರಿಗೆ ತಿಳಿದಿದೆ ಎಂಬುದನ್ನು ಸಾಬೀತುಪಡಿಸಲು ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಗಳಿಲ್ಲ. ಹಾಗಾಗಿ, ಕೃತ್ಯದಲ್ಲಿ ಕೃತ್ಯಕ್ಕೆ ಅವರ ಪಾತ್ರವಿದೆ ಎಂದು ಹೇಳಲಾಗದು ಎಂದು ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಆ ಜಾಗವನ್ನು ಬಾಡಿಗೆ ನೀಡಿ ಬೇರೆಡೆ ನೆಲೆಸಿದ್ದಾರೆ. ಅವರಿಗೆ ಆ ಜಾಗದಲ್ಲಿ ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಬಗ್ಗೆ ಅರಿವಿಲ್ಲ. ಜಾಗವನ್ನು ನೋಡಿಕೊಳ್ಳಲು ಮಾನ್ಯೆàಜರ್‌ ಇದ್ದು, ಅವರೇ ಅದರ ನಿರ್ವಹಣೆ ಉಸ್ತುವಾರಿ ಹೊತ್ತಿದ್ದಾರೆ. 68 ವರ್ಷದ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಏನಿದು ಪ್ರಕರಣ? 2024ರ ಮೇ 19ರಂದು ಖಚಿತ ಮಾಹಿತಿ ಆಧರಿಸಿ ಪೊಲೀಸರು ಹೆಬ್ಬಗೋಡಿ ಸಮೀಪದ ಸಿಂಗೇನ ಅಗ್ರಹಾರದಲ್ಲಿನ ಜಿ.ಆರ್‌. ಫಾರ್ಮ್ ಮೇಲೆ ದಾಳಿ ಮಾಡಿದ್ದಾಗ ಅಲ್ಲಿ ಬರ್ತ್‌ಡೇ ಪಾರ್ಟಿಗಳ ಹೆಸರಿನಲ್ಲಿ ಮದ್ಯ, ಡ್ರಗ್ಸ್‌Â ಸೇವಿಸುವ ರೇವ್‌ ಪಾರ್ಟಿಗಳು ನಡೆಯುತ್ತಿರುವುದು ಕಂಡು ಬಂದಿತ್ತು. ಅಲ್ಲಿ ಪಾರ್ಟಿಯಲ್ಲಿದ್ದವರನ್ನು ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಿದ್ದಾಗ ಅವರು ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢ ಪಟ್ಟಿತ್ತು. ಫಾರ್ಮ್ಹೌಸ್‌ ಬಾಡಿಗೆ ನೀಡಿದ್ದ ಆರ್‌. ಗೋಪಾಲ ರೆಡ್ಡಿಯನ್ನು ಆರನೇ ಆರೋಪಿಯ ನ್ನಾಗಿ ಮಾಡಲಾಗಿತ್ತು. ಅರ್ಜಿದಾರರು ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.