Advertisement

ಜಿಯೋಗೆ ಷರತ್ತು ಅನ್ವಯ

12:40 PM Jul 11, 2018 | Harsha Rao |

ಹೊಸದಿಲ್ಲಿ: ಇನ್ನೂ ಸ್ಥಾಪನೆಯೇ ಆಗಿರದಂಥ ಜಿಯೋ ಇನ್‌ಸ್ಟಿಟ್ಯೂಟ್‌ಗೆ “ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಸ್ಥಾನ ಮಾನ ನೀಡಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟನೆ ನೀಡಿದೆ. ಜಿಯೋ ಸಂಸ್ಥೆಗೆ ಈಗ “ಉತ್ಕೃಷ್ಟ ಶಿಕ್ಷಣ ಸಂಸ್ಥೆ’ ಎಂಬ ಟ್ಯಾಗ್‌ ನೀಡುವುದಿಲ್ಲ. 3 ವರ್ಷದೊಳಗಾಗಿ ಆ ಸಂಸ್ಥೆಯು ತಜ್ಞರ ಸಮಿತಿಯ ನಿರೀಕ್ಷೆಗಳನ್ನು ತಲುಪಿದರೆ, ಆಗ ಅವರಿಗೆ ಈ ಸ್ಥಾನಮಾನ ನೀಡಲಾಗುತ್ತದೆ. ಅಲ್ಲಿಯವರೆಗೆ ಈ ಷರತ್ತು ಅನ್ವಯವಾಗಿರುತ್ತದೆ ಎಂದು ಸಚಿವಾಲಯದ ಕಾರ್ಯದರ್ಶಿ ಆರ್‌. ಸುಬ್ರಮಣಿಯಮ್‌ ಹೇಳಿದ್ದಾರೆ. ಸೋಮವಾರವಷ್ಟೇ ಕೇಂದ್ರ ಸರಕಾರವು ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಸೇರಿದಂತೆ 6 ಸಂಸ್ಥೆಗಳಿಗೆ ಉತ್ಕೃಷ್ಟ ಸಂಸ್ಥೆ ಸ್ಥಾನಮಾನ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next