Advertisement

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

09:13 PM Oct 26, 2024 | Team Udayavani |

ನವದೆಹಲಿ: “ಜಿಯೋಹಾಟ್‌ಸ್ಟಾರ್‌’ ಡೊಮೈನ್‌ ವಿಷಯಕ್ಕೆ ಈಗ ಮತ್ತೂಂದು ಟ್ವಿಸ್ಟ್‌ ಸಿಕ್ಕಿದೆ. ಡೊಮೈನ್‌ ನನ್ನದು ಎಂದು ಭಾರತದ ಟೆಕಿಯೊಬ್ಬರು ಹೇಳಿಕೊಂಡ ಬೆನ್ನಲ್ಲೇ ಈಗ ಅದರ ಒಡೆತನ ನಮ್ಮದು ಎಂದು ದುಬೈನ ಮಕ್ಕಳಿಬ್ಬರು ಹೇಳಿಕೊಂಡಿದ್ದಾರೆ!

Advertisement

ಇದನ್ನು ನಾವು ದೆಹಲಿ ಮೂಲದ ವ್ಯಕ್ತಿಯೊಬ್ಬರಿಂದ ಖರೀದಿಸಿದ್ದು, ಇದನ್ನು ಮಾರಾಟಕ್ಕಿಟ್ಟಿದ್ದೇವೆ ಎಂದೂ ಹೇಳಿದ್ದಾರೆ. ಬಾಲ್ಯದಿಂದಲೂ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ಈ ಮಕ್ಕಳು, ಭಾರತದ ಬಗ್ಗೆಯೂ ವಿಡಿಯೋಗಳನ್ನು ಮಾಡಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ತಂತ್ರಜ್ಞಾನ ಕಲಿಯುವುದರಲ್ಲಿ ಆಸಕ್ತಿ ಹೊಂದಿರುವ ನಾವು, ಜಿಯೋಹಾಟ್‌ಸ್ಟಾರ್‌ ಡೊಮೈನ್‌ ಖರೀದಿಸಿದ್ದೇವೆ. ನಮಗೆ ಇದನ್ನು ಮಾರುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ. ನ್ಯಾಯಯುತವಾಗಿ ಮಾರುತ್ತೇವೆ ಎಂದಿದ್ದಾರೆ. ಇದಕ್ಕೂ ಮೊದಲು ಭಾರತದ ಟೆಕಿಯೊಬ್ಬರು ಈ ಡೊಮೈನ್‌ ಬೇಕಿದ್ದರೆ 1 ಕೋಟಿ ರೂ. ನೀಡುವಂತೆ ಹೇಳಿದ್ದರು. ಜಿಯೋ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅವರು ಸುಮ್ಮನಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next