Advertisement
ಪ್ಲಾಸ್ಟಿಕ್‌ಮಯ ಸಮಾಜದಲ್ಲಿ, ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಅಸಾಧ್ಯವಾಗಬಹುದಾದರೂ ಅದನ್ನು ಮರುಪೂರಣ ಅಥವಾ ರೀಸೈಕ್ಲಿಂಗ್ ಮಾಡಬಹುದಾದ ತಾಂತ್ರಿಕತೆ ಜಗತ್ತಿನಲ್ಲಿದೆ ಎಂಬುದು ಗಮನಾರ್ಹ ಸಂಗತಿ. ಪ್ಲಾಸ್ಟಿಕ್‌ನ್ನು ರೀಸೈಕ್ಲಿಂಗ್ ಮಾಡಿಕೊಂಡು ಉಪಯುಕ್ತ ಮಾಡಿಕೊಳ್ಳುವ ಹತ್ತಾರು ಯೋಚನೆ, ಯೋಜನೆಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ಪರಿಕಲ್ಪನೆಯೂ ಒಂದು.
ಹಾಲೆಂಡಿನ ರೋಟರ್‌ಡ್ಯಾಂನಲ್ಲಿ ಮಾದರಿಯಾದ ಪ್ಲಾಸ್ಟಿಕ್ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಇದು ಜಗತ್ತಿಗೆ ಮಾದರಿಯಾಗಬಲ್ಲ ಪ್ಲಾಸ್ಟಿಕ್ ಪಾರ್ಕ್ ಆಗಿದೆ. ರೋಟರ್ ಡ್ಯಾಂನ ಸಮುದ್ರದಡದಲ್ಲಿರುವ ಈ ಪಾರ್ಕ್ ಸಮುದ್ರದಲ್ಲಿ ಬಿದ್ದಿರುವ ಕಸ, ತ್ಯಾಜ್ಯವನ್ನೇ ಬಳಸಿಯೇ ಪಾರ್ಕ್ ಮಾಡಲಾಗಿದೆ. ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಕುರ್ಚಿ, ಟೇಬಲ್, ಗುಡಿಸಲು ಹಾಗೂ ಸಸಿಗಳ ಎಲ್ಲವೂ ಕೂಡ ಮರುಪೂರಣವಾದ ಪ್ಲಾಸ್ಟಿಕ್ ತ್ಯಾಜ್ಯಗಳೇ. ಹೀಗಾಗಿ ಈ ಭಾಗದಲ್ಲಿ ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ಈ ಪಾರ್ಕ್ ಕೇವಲ ಪ್ಲಾಸ್ಟಿಕ್ ಮರುಪೂರಣವಾಗಿದ್ದಷ್ಟೇ ಅಲ್ಲ, ಪ್ರವಾಸೋದ್ಯಮಕ್ಕೂ ಕೂಡ ಪೂರಕವಾಗಿದೆ ಎಂದು ಹೇಳಬಹುದು. ನಿರ್ಮಾಣಗೊಂಡ ಈ ಪಾರ್ಕ್‌ಏನೂ ಬಹುವೆಚ್ಚದ್ದೇನೂ ಅಲ್ಲ. ಇದಲ್ಲದೇ ಥೈಲ್ಯಾಂಡ್‌ನಲ್ಲಿ ಪ್ರವಾಸೋದ್ಯಮ ಸಚಿವಾಲಯವೂ ಕೂಡ ಪ್ಲಾಸ್ಟಿಕ್‌ನ್ನು ಮರುಪೂರಣ ಮಾಡುವುದಕ್ಕಾಗಿಯೇ ಸುಮಾರು 154 ಪ್ಲಾಸ್ಟಿಕ್ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಪಾರ್ಕ್ ನಿರ್ಮಾಣದಿಂದಾಗಿ ಪರಿಸರ ಕಾಳಜಿಯ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
Related Articles
Advertisement
ಮಂಗಳೂರಿನಲ್ಲಿ ಬಹುವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಅದು ಕೇವಲ ಕಡತದಲ್ಲಿ ಬಾಕಿ ಉಳಿದಿದೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡುವುದಾದರೆ, ನಗರದ ತ್ಯಾಜ್ಯವನ್ನೇ ಕ್ರೋಡೀಕರಿಸಿ, ಥೈಲ್ಯಾಂಡ್ ಹಾಗೂ ಹಾಲೆಂಡಿನ ರೋಟರ್‌ಡ್ಯಾಂನಲ್ಲಿ ನಿರ್ಮಿಸಿದ ಪ್ಲಾಸ್ಟಿಕ್ ಪಾರ್ಕ್‌ನಂತೆ ನಿರ್ಮಾಣ ಮಾಡಬೇಕಾಗಿರುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ.
ಏನಿದು ಪ್ಲಾಸ್ಟಿಕ್ ಪಾರ್ಕ್ನಗರದಲ್ಲಿ ತ್ಯಾಜ್ಯವಾಗಿ ಉಳಿದಿರುವ ಪ್ಲಾಸ್ಟಿಕ್‌ನ್ನು ಎಸೆಯದೇ ಅದನ್ನು ಮರುಪೂರಣ ಮಾಡಿ, ಅದನ್ನು ಸೌಂದರೀಕರಣಗೊಳಿಸಿ ಪಾರ್ಕ್‌ನ್ನು ನಿರ್ಮಾಣ ಮಾಡಬಹುದಾಗಿದೆ. ಈ ಪಾರ್ಕ್ ನಿರ್ಮಾಣಕ್ಕೆ ಎಸೆಯಲ್ಪಡುವ ಕಸ ಹಾಗೂ ತ್ಯಾಜ್ಯವನ್ನು ತೆಗೆದುಕೊಂಡು ಪ್ರಾಣಿ, ಪಕ್ಷಿಗಳು ಹಾಗೂ ಟೇಬಲ್, ಕುರ್ಚಿ ಮುಂತಾದ ಸಲಕರಣೆಗಳನ್ನು ಮಾಡಿ, ಒಂದು ನಿರ್ದಿಷ್ಟ ವ್ಯಾಪ್ತಿಯ ಪಾರ್ಕ್ ಮಾಡಬಹುದು. ಶಿವ ಸ್ಥಾವರಮಠ