Advertisement

ಕೊಳೆತ ತರಕಾರಿ, ಧಾನ್ಯದ ಮೂಲಕವೂ ಎಥನಾಲ್‌

06:20 AM May 17, 2018 | |

ಹೊಸದಿಲ್ಲಿ: ಕಬ್ಬಿನ ತ್ಯಾಜ್ಯದ ಜತೆಗೆ ಕೊಳೆತ ತರಕಾರಿ ಹಾಗೂ ಧಾನ್ಯದಿಂದಲೂ ಎಥನಾಲ್‌ ಉತ್ಪಾದನೆಗೆ ಅವಕಾಶ ಮಾಡಿ ಕೊಡುವ ಹೊಸ ರಾಷ್ಟ್ರೀಯ ಜೈವಿಕ ಇಂಧನ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಈ ವರ್ಷದಲ್ಲೇ 4 ಸಾವಿರ ಕೋಟಿ ರೂ. ಮೌಲ್ಯದ ಇಂಧನ ಆಮದು ಕಡಿಮೆ ಮಾಡಲು ಸರಕಾರ ಉದ್ದೇಶಿಸಿದೆ. ಸದ್ಯ ಕಬ್ಬಿನ ತ್ಯಾಜ್ಯದಿಂದ ಉತ್ಪಾದಿಸಿದ ಎಥನಾಲನ್ನು ಮಾತ್ರವೇ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲಾಗುತ್ತಿತ್ತು.

Advertisement

ಎಥನಾಲ್‌ ಉತ್ಪಾದನೆಯನ್ನು ವರ್ಗೀಕರಿಸಲಾಗಿದ್ದು, ಕಬ್ಬಿನ ತ್ಯಾಜ್ಯದಿಂದ ಉತ್ಪಾದಿಸುವ ಎಥನಾಲ್‌, ಖಾದ್ಯೆàತರ ಎಣ್ಣೆಬೀಜಗಳಿಂದ ಉತ್ಪಾದಿಸಲಾಗುವ ಬಯೋಡೀಸೆಲನ್ನು 1ಜಿ ಎಂದು ಗುರುತಿಸಲಾಗಿದೆ. ನಗರದ ಘನ ತ್ಯಾಜ್ಯದಿಂದ ಉತ್ಪಾದಿಸಲಾಗುವ ಎಥನಾಲನ್ನು 2ಜಿ, ಜೈವಿಕ ನೈಸರ್ಗಿಕ ಅನಿಲದಂಥ ಇಂಧನವನ್ನು 3ಜಿ ಎಂದು ಗುರುತಿಸಲಾಗಿದೆ.

ಸಕ್ಕರೆ ಹೊಂದಿರುವ ಪದಾರ್ಥಗಳಾದ ಕಬ್ಬು, ಸಿಹಿ ಜೋಳ ಹಾಗೂ ಜೋಳ, ಗೆಣಸು, ಹಾಳಾದ ಧಾನ್ಯಗಳು ಹಾಗೂ ತರಕಾರಿಗಳನ್ನು ಬಳಸಿ ಎಥನಾಲ್‌ ತಯಾರಿಸ ಬಹುದು. 2ಜಿ ಎಥನಾಲ್‌ ತಯಾರಿಕೆ ಮೂಲ ಸೌಕರ್ಯಕ್ಕಾಗಿ ಮುಂದಿನ 6 ವರ್ಷಗಳಲ್ಲಿ 5 ಸಾವಿರ ಕೋಟಿ ರೂ. ಒದಗಿಸಲು ಸರಕಾರ ನಿರ್ಧರಿಸಿದೆ.

ಒಂದು ಲೀಟರ್‌ ಎಥನಾಲ್‌ ಅನ್ನು ಪೆಟ್ರೋಲ್‌ಗೆ ಮಿಶ್ರಣ ಮಾಡಿದರೆ 28 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾ ಗುತ್ತದೆ. ಅಲ್ಲದೆ ತ್ಯಾಜ್ಯವನ್ನು ಎಥನಾಲ್‌ ತಯಾರಿಕೆಗೆ ಬಳಸುವುದರಿಂದ, ಇವುಗಳನ್ನು ಸುಡುವ ಕ್ರಮವೂ ತಪ್ಪುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ರೈತರ ಆದಾಯ ಹೆಚ್ಚುತ್ತದೆ. ಟೊಮ್ಯಾಟೋದಂತಹ ಬೆಳೆಗಳಿಗೆ ಬೆಲೆ ಇಲ್ಲದಿದ್ದಾಗ ಇವುಗಳನ್ನು ಎಥನಾಲ್‌ ತಯಾರಿಕೆಗೆ ಬಳಸಿಕೊಳ್ಳಬಹುದಾಗಿದೆ.

ಹೋಮಿಯೋಪತಿ ಮಂಡಳಿಗೆ ಪುನಶ್ಚೇತನ: ಹೋಮಿಯೋಪತಿ ಮಂಡಳಿಯಲ್ಲಿ ಭ್ರಷ್ಟಾ ಚಾರದ ಆರೋಪ ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಸಂಪೂರ್ಣ ಮಂಡಳಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಅಧ್ಯಾದೇಶವನ್ನು ಹೊರಡಿಸಲು ಸಂಪುಟ ನಿರ್ಧರಿಸಿದೆ.

Advertisement

ಹಲವು ಒಪ್ಪಂದಗಳಿಗೆ ಸಮ್ಮತಿ: ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ರೈಲ್ವೇ, ವೈದ್ಯಕೀಯ ಹಾಗೂ ಕಾನೂನು ಸೇರಿದಂತೆ ಹಲವು ವಲಯ ಗಳಲ್ಲಿ ವಿವಿಧ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಪೈಕಿ ಕೆಲವು ಒಪ್ಪಂದಗಳಿಗೆ ಈಗಾಗಲೇ ಸಹಿ ಹಾಕಲಾಗಿದ್ದು, ಇನ್ನೂ ಕೆಲವು ಒಪ್ಪಂದ ಗಳಿಗೆ ಇನ್ನಷ್ಟೇ ಸರಕಾರ ಸಹಿ ಹಾಕಬೇಕಿದೆ.

ಸೇನೆ ಸಂವಹನಕ್ಕೆ 11 ಸಾವಿರ ಕೋ. ರೂ.
ರಕ್ಷಣಾ ವಲಯದಲ್ಲಿ ಸಂವಹನಕ್ಕಾಗಿ ಕೇಂದ್ರ ಸರಕಾರ ಹೆಚ್ಚುವರಿ 11,330 ಕೋಟಿ ರೂ. ನೀಡಿದ್ದು, ಇದರಿಂದಾಗಿ ಸೇನೆಗೆ ಈ ಉದ್ದೇಶಕ್ಕೆ ಒಟ್ಟು 24,664 ಕೋಟಿ ರೂ. ನೀಡಿದಂತಾಗಿದೆ. ಪರ್ಯಾಯ ಸಂವಹನ ಜಾಲವನ್ನು ಬಿಎಸ್‌ಎನ್‌ಎಲ್‌ ಸ್ಥಾಪಿಸಲಿದ್ದು, 24 ತಿಂಗಳುಗಳೊಳಗೆ ಮುಕ್ತಾಯವಾ ಗಲಿದೆ. ಇದು ಸೇನೆಗಳ ಸಂವ ಹನ ಸಾಮರ್ಥ್ಯ ಹೆಚ್ಚಿಸಲಿದೆ. ಜೊತೆಗೇ ಇತರ ಸಂಬಂಧಿತ ಕ್ಷೇತ್ರಗಳಾದ ಟೆಲಿಕಾಂ ಸೇವೆಗಳು ಮತ್ತು ಟೆಲಿಕಾಂ ಸಲಕರಣೆ ಉತ್ಪಾದನೆ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next