ನವದೆಹಲಿ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ 750.54 ಕೋಟಿ ರೂ. ವಂಚನೆ ಮಾಡಿದ ಆರೋಪದಲ್ಲಿ ಕಾನ್ಪುರ ಮೂಲದ ರೊಟೊಮ್ಯಾಕ್ ಗ್ಲೋಬಲ್ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
Advertisement
ಪೆನ್ನುಗಳು ಸೇರಿದಂತೆ ಬರವಣಿಗೆ ಉಪಕರಣಗಳನ್ನು ತಯಾರಿಸುವ ರೊಟೊಮ್ಯಾಕ್ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಏಳು ಬ್ಯಾಂಕ್‌ಗಳಿಗೆ 2,919 ಕೋಟಿ ರೂ. ಸಾಲ ಹಿಂತಿರುಗಿಸದ ಆರೋಪವಿದೆ. ಈ ಪೈಕಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ಶೇ.23ರಷ್ಟು ಸಾಲ ಬಾಕಿಯಿದೆ.