Advertisement
ಇದನ್ನು ಕೇಸರಿ ಮೈನಾ ಅಂತಲೂ ಕರೆಯುತ್ತಾರೆ. ಗೊರವಂಕ ಅಥವಾ ಮೈನಾದಷ್ಟು ದೊಡ್ಡ ದೇಹದ ಹಕ್ಕಿ ಇದು. ROSY STARLING (Sturnus roseus( Linnaeus) ) M-Myna + ಬೆನ್ನು, ಹೊಟ್ಟೆ ದೇಹದ ಪಾರ್ಶ್ವ ತಿಳಿ ಗುಲಾಬಿ ಬಣ್ಣ ಇದಿಂದ ಕೂಡಿರುತ್ತದೆ. ಗುಲಾಬಿ ಮೈನಾ 23 ಸೆಂ.ಮೀ ಗಾತ್ರವಿದೆ. ಎದೆ. ತಲೆ, ಬಾಲದ ಪುಕ್ಕವು ತಿಳಿ ಗುಲಾಬಿ ಬಣ್ಣ ಹೊಂದಿದೆ. ಕುಳಿತಾಗ ಮತ್ತು ಹಾರುವಾಗಲೂ ಈ ಬಣ್ಣ ಎದ್ದು ಕಾಣುತ್ತದೆ. ಇದರಿಂದಾಗಿಯೇ ಗುಲಾಬಿ ಮೈನಾ ಹಕ್ಕಿಯನ್ನು ಸುಲಭವಾಗಿ ಗುರುತಿಸ ಬಹುದು. ಗಂಡು ಹಕಿಯ ಭಾರ 59 ಗ್ರಾಂ ನಿಂದ 90 ಗ್ರಾಂ. ನಷ್ಟಿದೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಹೆಣ್ಣು ಸ್ವಲ್ಪ ಚಿಕ್ಕದಾಗಿದೆ ಅನ್ನೋದು ತಿಳಿಯುತ್ತದೆ. ದಟ್ಟ ಗುಲಾಬಿ ಇಲ್ಲವೇ ತಿಳಿ ಹಳದಿಬಣ್ಣದ ಕಾಲು, ಚುಂಚನ್ನು ಹೊಂದಿದೆ. ಇದರ ರೆಕ್ಕೆ ದೃಢವಾಗಿದೆ. ಇದರಿಂದ ಬಹುದೂರ ವಲಸೆ ಹೋಗಲು ಅನುಕೂಲವಾಗಿದೆ.
Related Articles
Advertisement
ಹವಾಮಾನ,ಮಿಡತೆ ಹುಳಗಳ ಲಭ್ಯತೆಯನ್ನು ಆಧರಿಸಿ, ಇವು ಆಯಾ ಪ್ರದೇಶದಲ್ಲಿ ಬೀಡು ಬಿಡುತ್ತವೆ. ವಿಶೇಷ ಎಂದರೆ ವಲಸೆ ಪ್ರಾರಂಭಿಸುವ ಮುನ್ನ ಆ ಮಾರ್ಗ ಮಧ್ಯದಲ್ಲಿ ಆಹಾರ ದೊರೆಯದಿದ್ದಾಗ, ಆ ಬಗ್ಗೆ ಯಾವ ಮುನ್ನೆಚ್ಚರಿಕೆ ಕ್ರಮ ಏನು ಕೈಗೊಳ್ಳುತ್ತವೆ, ವಾತಾವರಣದಲ್ಲಿ ಏರು ಪೇರಾಗುವುದನ್ನು ಮೊದಲೇ ತಿಳಿದು- ಅವಗಡಗಳಿಂದ ಹೇಗೆ ಪಾರಾಗುತ್ತವೆ ಎನ್ನುವುದೆಲ್ಲಾ ಆಸಕ್ತಿದಾಯಕ ವಿಷಯವಾದರೂ, ಯಾರೂ ಈ ಬಗ್ಗೆ ಸಂಶೋಧನೆ ನಡೆಸಿಲ್ಲ.
ಗುಲಾಬಿ- ಮೈನಾ, ಮರಿ ಮಾಡುವ ಸಮಯ ಅತಿ ಕಡಿಮೆ. ಇದು ಚಿಕ್ಕ ಗುಂಪಿನಲ್ಲಿ ಇಲ್ಲವೇ ಈ ಜಾತಿಯ ಇತರ ಹಕ್ಕಿಗಳಾದ ಮೈನಾಗಳ ಗುಂಪಿನಲ್ಲೂ ಹುಲ್ಲುಗಾವಲಲ್ಲಿ, ಹಾರುವ ಮಿಡತೆಗಳನ್ನು ಕಬಳಿಸಲು ದನಗಳನ್ನು ಹಿಂಬಾಲಿಸಿ ಹೋಗುತ್ತಿರುತ್ತದೆ. ಇದು ಇತರೆ ಮೈನಾ ಹಕ್ಕಿಗಳಂತೆ ಜನರ ಬಳಿ ಸುಳಿಯುವುದು ಕಡಿಮೆ. ಮೆಲುದನಿಯಲ್ಲಿ ಸಿಳ್ಳೆ ಹೊಡೆಯುತ್ತದೆ. ಕೆಲವೊಮ್ಮೆ ಕುರ್ರೂ, ಕುರ್ರೂ ಎಂದು ಕೂಗುವುದಿದೆ. ಇದರ ದನಿ ವ್ಯತ್ಯಾಸ ಮತ್ತು ವಿಶೇಷತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ.