Advertisement

ಕಾಂತಿಯುತ ಚರ್ಮಕ್ಕಾಗಿ ಮಾತ್ರವಲ್ಲ ರೋಸ್‌ ವಾಟರ್‌

11:02 AM Jan 21, 2021 | Team Udayavani |

ಸುಗಂಧ ದ್ರವ್ಯ, ಮೇಕಪ್‌ ಕಿಟ್‌ ಗಳಲ್ಲಿ ಬಳಸುವ ರೋಸ್‌ ವಾಟರ್‌ ನಿಂದ ಹಲವಾರು ಲಾಭಗಳಿವೆ. ಮುಖ್ಯವಾಗಿ ಹೊಳೆಯುವ ಚರ್ಮಕ್ಕೆ ಇದು ಮೊದಲ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದ ಔಷಧ. ಇಷ್ಟು ಮಾತ್ರವಲ್ಲ ನೈಸರ್ಗಿಕವಾಗಿ ಲಭ್ಯವಾಗುವಂಥ ಗುಲಾಬಿ ದಳಗಳಿಂದ ತಯಾರಿಸುವ ರೋಸ್‌ ವಾಟರ್‌ ಸಾಕಷ್ಟು ಲಾಭಗಳಿವೆ.

Advertisement

*ರೋಸ್‌ ವಾಟರ್‌ ಚರ್ಮದ ಕಿರಿಕಿರಿಯನ್ನು ಹೋಗಲಾಡಿಸುತ್ತದೆ. ಇದು ಎಸ್ಜಿಮಾ, ರೊಸಾಸಿಯಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸಿ, ಚರ್ಮದ ಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

* ಮೊಡವೆ, ಚರ್ಮದ ಕೆಂಪು, ಪನೆಸ್‌ ಅನ್ನು ಕಡಿಮೆ ಮಾಡುವಲ್ಲಿ ರೋಸ್‌ ವಾಟರ್‌ ಸಹಾಯ ಮಾಡುತ್ತದೆ. ಇದರಿಂದ ಮುಖದಲ್ಲಿ ನೆರಿಗೆ, ಸುಕ್ಕು ಉಂಟಾಗುವುದು ಕಡಿಮೆಯಾಗುತ್ತದೆ.

*ಊರಿಯೂತವನ್ನು ಕಡಿಮೆ ಮಾಡುವ ರೋಸ್‌ ವಾಟರ್‌ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸಿ ನೋವು ನಿವಾರಿಸುವಲ್ಲಿಯೂ ಪರಿಣಾಮಕಾರಿಯಾಗಿದೆ.

*ನಂಜುನಿರೋಧಕ ಗುಣವಿರುವ ರೋಸ್‌ ವಾಟರ್‌ ಸೋಂಕುಗಳನ್ನು ನಿವಾರಿಸಲು ಪ್ರಮುಖ ಔಷಧವಾಗಿದೆ. ಕಣ್ಣಿನಲ್ಲಿ ಉಂಟಾಗುವ ಅಲರ್ಜಿಯನ್ನು ನಿವಾರಿಸುತ್ತದೆ.

Advertisement

*ಕಡಿತ, ಸುಟ್ಟ ಗಾಯಗಳಿಗೆ ರೋಸ್‌ ವಾಟರ್‌ ಅತ್ಯುತ್ತಮ ಔಷಧವಾಗಿದೆ. ಇದು ಬಹುಬೇಗನೆ ಗಾಯವನ್ನು ಗುಣಪಡಿಸಿ ಹೊಸ ಚರ್ಮ ಬೆಳೆಯಲು ಸಹಕಾರಿಯಾಗುತ್ತದೆ.

*ಮಾನಸಿಕ ಖನ್ನತೆ ನಿವಾರಿಸುವ ರೋಸ್‌ ವಾಟರ್‌ ನರಮಂಡಲವನ್ನು ಸಡಿಲಗೊಳಿಸಿ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಖನ್ನತೆ, ದುಃಖ, ಒತ್ತಡ, ಉದ್ವೇಗವನ್ನು ನಿಯಂತ್ರಿಸಬಹುದು.

* ತಲೆನೋವು, ಮೈಗ್ರೇನ್‌ ಸಮಸ್ಯೆಯುಳ್ಳವರು ರೋಸ್‌ ವಾಟರ್‌ ನಲ್ಲಿ ಅದ್ದಿದ ಬಟ್ಟೆಯನ್ನು ಹಣೆಯ ಮೇಲೆ ಇಟ್ಟುಕೊಂಡರೆ ತಲೆನೋವು ನಿವಾರಣೆಯಾಗುವುದು.

*ಗುಲಾಬಿ ನೀರನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next