Advertisement
ಮುಂಬಯಿ : ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಎಲಿಫೆಂಟಾದ ಗುಹೆಗಳಿಗೆ ರೋಪ್ ವೇ ಮೂಲಕ ಸಂಪರ್ಕ ಕಲ್ಪಿಸುವ ಯೋಜನೆಯು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ.
Related Articles
Advertisement
ಇದೀಗ ಸರಕಾರವು ಬಂದರಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಮನಸ್ಸು ಮಾಡಿದೆ. ಒಂದು ವೇಳೆ ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ದೇಶೀ ಪ್ರವಾಸಿಗರು 500 ರೂ. ಮತ್ತು ವಿದೇಶಿ ಪ್ರವಾಸಿಗರು 1,000 ರೂ. ತನಕ ಟಿಕೆಟ್ ದರವನ್ನು ಪಾವತಿಸಿ ರೋಪ್‌ವೇಯ ವಿಹಂಗಮ ನೋಟದ ಆನಂದವನ್ನು ಸವಿಯುತ್ತಾ ಎಲಿಫೆಂಟಾಕ್ಕೆ ಹೋಗಿ ಬರಬಹುದಾಗಿದೆ.
ಎಲಿಫೆಂಟಾ ಗುಹೆಗಳಿಗೆ ಭೇಟಿ ನೀಡುವ ಪ್ರವಾಸಿಗರು ಹೋಗುವಾಗ ಸಾರಿಗೆ ಹಾಗೂ ಅಲ್ಲಿ ತಲುಪಿದ ಅನಂತರ ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಾರೆ. ಈ ವಿಷಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಮಹಾ ವಿತರಣ್ ಸಮು ದ್ರದ ಅಡಿಯಲ್ಲಿ ವಿದ್ಯುತ್ ಕೇಬಲ್ ಹಾಕುವ ಮೂಲಕ ಎಲಿಫೆಂಟಾ ಗುಹೆಗಳು ಹಾಗೂ ಅದರ ಸುತ್ತ ಮುತ್ತಲ ಪ್ರದೇಶಗಳಿಗೆ ಇದೀಗ ದಿನದ 24 ತಾಸು ವಿದ್ಯುತ್ ಪೂರೈಕೆ ಮಾಡುತ್ತಿದೆ.
ಮುಂಬಯಿ ಪೋರ್ಟ್ ಟ್ರಸ್ಟ್ ಅಧಿಕಾರಿಗಳ ಪ್ರಕಾರ, ರೋಪ್‌ವೇ ಪ್ರವಾಸಿಗರಿಗೆ ಒಂದು ಆಕರ್ಷಣೀಯ ಕೇಂದ್ರವಾಗಿ ಸಾಬೀತಾಗಲಿದೆ. ದೈನಂದಿನ ಸುಮಾರು 20,000 ಪ್ರವಾಸಿಗರು ಇದರಲ್ಲಿ ಪ್ರಯಾಣ ಮಾಡುವ ನಿರೀಕ್ಷೆಯಿದೆ. ಇದರ ನಿರ್ಮಾಣಕ್ಕೆ ಸುಮಾರು 700 ಕೋ.ರೂ. ಖರ್ಚಾಗಲಿದೆ. ರೋಪ್‌ವೇ ನಿರ್ಮಾಣಕ್ಕಾಗಿ ಈವರೆಗೆಸುಮಾರು 150ಕ್ಕೂ ಹೆಚ್ಚು ಕಂಪೆನಿಗಳು ವಿಚಾರಣೆ ನಡೆಸಿವೆ. ಆದರೆ ಹೆಲಿಕಾಪ್ಟರ್‌ನಿಂದ ಕೆಲಸ ಕಾರ್ಯ ವೀಕ್ಷಿಸಲು ಹೆಲಿಪ್ಯಾಡ್ ಇಲ್ಲದಿರುವುದು ಅವರ ಪ್ರಶ್ನೆಯಾಗಿತ್ತು. ಇದೀಗ ರೋಪ್‌ವೇ ನಿರ್ಮಾಣಕ್ಕಾಗಿ ಸರಕಾರವು ಬಂದರ್‌ನಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ ನಡೆಸಿದೆ. ಪ್ರಸ್ತಾವಿತ ರೋಪ್‌ವೇ ಸುಮಾರು 8 ಕಿ.ಮೀ. ಉದ್ದವಿರಲಿದೆ ಮತ್ತು ಪ್ರಯಾಣದ ಅವಧಿಯು 15ರಿಂದ 20 ನಿಮಿಷ ಆಗಿರಬಹುದು. ಶಿವಿxಯ ಕೋಟೆಯಿಂದ ಎಲಿಫೆಂಟಾ ಗುಹೆ ವರೆಗೆ ಈ ರೋಪ್‌ವೇ ನಿರ್ಮಾಣವಾಗಲಿದೆ. ಒಂದೊಮ್ಮೆ ಯಾವುದೇ ಅಡಚಣೆಯಾಗದಿದ್ದಲ್ಲಿ ಶೀಘ್ರದಲ್ಲೇ ಮುಂಬಯಿಗೆ ಮೊದಲ ರೋಪ್ ವೇ ದೊರೆಯುವ ಸಾಧ್ಯತೆಯಿದೆ.