ವಿಟ್ಲ : ಅಯನ ಎಂದರೆ ನಡೆಯುವುದು; ನಡವಳಿಕೆ ಎಂದರ್ಥ. ಸೂರ್ಯನಿಗೆ ಎರಡು ಅಯನಗಳಿವೆ. ಒಂದು ಉತ್ತರಾಯಣ ಇನ್ನೊಂದು ದಕ್ಷಿಣಾಯಣ. ಜೀವನ ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ ಧರ್ಮದ ಸೂತ್ರ ಬೇಕು. ಸಂಸ್ಕೃತಿ ಉಳಿಯಬೇಕು. ಭಾಷೆಯ ಹಿಂದೆ ಸಂಸ್ಕೃತಿಯೂ ಇದೆ. ತುಳು ಭಾಷೆಯ ಬೇರು ಮೂಲ ಸಂಸ್ಕೃತಿ. ಇದು ಜಲ ಸಂಸ್ಕೃತಿಯೂ ಹೌದು. ಮೂಲ ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತುಳುನಾಡು ಉಳಿಯಬೇಕಾದರೆ ನಮ್ಮ ಭಾಷೆ, ನೆಲ, ಜಲ ಉಳಿಸುವ ಕಾರ್ಯ ಆಗಬೇಕು. ಕಾಡವರ, ಕಡಲವರ, ನಾಡವರಿಂದ ಕೂಡಿದ ತುಳುನಾಡು ತುಳು ರಾಜ್ಯವಾಗಲಿ. ನಿರಂತರ ಪರಿಶ್ರಮದಿಂದ ಅತೀ ಶೀಘ್ರ ಫಲ ಲಭಿಸುವಂತಾಗಲಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಒಡಿಯೂರª ತುಳುಕೂಟ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠ ಜಂಟಿಯಾಗಿ ಆಯೋಜಿಸಿದ್ದ “ಆಟಿದ ಆಯನೊ’ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ “ಜೋಕ್ಲೆನ ತುಳುಕೂಟ’ ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಕಳಸೆಗೆ ಭತ್ತ ತುಂಬುವುದರೊಂದಿಗೆ ಚಾಲನೆಯಿತ್ತು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದ.ಕ.ಜಿ.ಪಂ.ನ ಯೋಜನ ನಿರ್ದೇಶಕ ಟಿ.ಎಸ್. ಲೋಕೇಶ್ ಶುಭಹಾರೈಸಿ ಶ್ರೀ ಸಂಸ್ಥಾನದ ಎಲ್ಲ ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಎಚ್.ಕೆ. ಪುರುಷೋತ್ತಮ, ಒಡಿಯೂರು ಗುರುದೇವ ಸೇವಾ ಬಳಗ ಮಂಗಳೂರು ವಲಯದ ಅಧ್ಯಕ್ಷ ಜಯಂತ ಜೆ. ಕೋಟ್ಯಾನ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಎ. ಜಯಪ್ರಕಾಶ್ ಶೆಟ್ಟಿ, ಒಡಿಯೂರು ಶಾಲಾ ಜೋಕ್ಲೆನ ತುಳುಕೂಟದ ಅಧ್ಯಕ್ಷ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರª ತುಳುಕೂಟದ ಅಧ್ಯಕ್ಷ ಮಲಾರ್ ಜಯರಾಮ ರೈ ಸ್ವಾಗತಿಸಿದರು. ಒಡಿಯೂರು ಗ್ರಾಮಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೇಶ್
ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸುಬ್ರಹ್ಮಣ್ಯ ಒಡಿಯೂರು ವಂದಿಸಿದರು.
ಒಡಿಯೂರª ತುಳುಕೂಟದ ಸದಸ್ಯರಿಂದ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಆಟಿ ತಿಂಗಳ ತಿಂಡಿ-ತಿನಿಸುಗಳ ಸ್ಪರ್ಧೆಯಲ್ಲಿ ಸುಮಾರು 81 ಬಗೆಯ ವೈವಿಧ್ಯಮಯ ಖಾದ್ಯಗಳು ಪ್ರದರ್ಶನಗೊಂಡವು.