Advertisement

ರೂಟ್‌ ಶತಕ; ಇಂಗ್ಲೆಂಡ್‌ ಚೇತರಿಕೆ

06:10 AM Nov 17, 2018 | Team Udayavani |

ಕ್ಯಾಂಡಿ: ನಾಯಕ ಜೋ ರೂಟ್‌ ಬಾರಿಸಿದ 15ನೇ ಶತಕದ ನೆರವಿನಿಂದ ಕ್ಯಾಂಡಿ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ಚೇತರಿಕೆ ಕಂಡಿದೆ. 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟಿಗೆ 324 ರನ್‌ ಗಳಿಸಿದ್ದು, ಒಟ್ಟು 278 ರನ್ನುಗಳ ಮುನ್ನಡೆಯಲ್ಲಿದೆ.

Advertisement

ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದು, ಸ್ಪಷ್ಟ ಫ‌ಲಿತಾಂಶ ಖಚಿತಗೊಂಡಿದೆ. ಆದರೆ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಈ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಸರಣಿ ಉಳಿಸಿಕೊಳ್ಳಲು ಭಾರೀ ಸಾಹಸ ಮಾಡಬೇಕಾಗುವುದರಲ್ಲಿ ಅನುಮಾನವಿಲ್ಲ.

ಬೌಲರ್‌ಗಳ ಮೇಲಾಟದ ನಡುವೆಯೂ ಜೋ ರೂಟ್‌ ಶತಕ ಬಾರಿಸಿ ಅಸಾಮಾನ್ಯ ಸಾಹಸವೊಂದಕ್ಕೆ ಸಾಕ್ಷಿಯಾದರು. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಇಂಗ್ಲೆಂಡ್‌ ಕಪ್ತಾನ, 146 ಎಸೆತಗಳಿಂದ 124 ರನ್‌ ಹೊಡೆದರು. ಸಿಡಿಸಿದ್ದು 10 ಬೌಂಡರಿ ಮತ್ತು 2 ಸಿಕ್ಸರ್‌. ಕೀಪರ್‌ ಬೆನ್‌ ಫೋಕ್ಸ್‌ 51 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.ಶ್ರೀಲಂಕಾದ ಆಫ್ಸ್ಪಿನ್ನರ್‌ ಅಖೀಲ ಧನಂಜಯ 106 ರನ್ನಿಗೆ 6 ವಿಕೆಟ್‌ ಕಿತ್ತು ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-290 ಮತ್ತು 9 ವಿಕೆಟಿಗೆ 324 (ರೂಟ್‌ 124, ಬರ್ನ್ಸ್ 59, ಫೋಕ್ಸ್‌ ಬ್ಯಾಟಿಂಗ್‌ 51, ಧನಂಜಯ 106ಕ್ಕೆ 6, ಪೆರೆರ 87ಕ್ಕೆ 2). ಶ್ರೀಲಂಕಾ-336.

Advertisement

Udayavani is now on Telegram. Click here to join our channel and stay updated with the latest news.

Next