Advertisement

ಜ್ಯುವೆಂಟಸ್ ಗೆ ಪ್ರಶಸ್ತಿ ತಂದಿಟ್ಟ ಕ್ರಿಸ್ಟಿಯಾನೋ ರೊನಾಲ್ಡೊ

06:38 AM Jan 17, 2019 | |

ಜೆಡ್ಡಾ: ಚಾಂಪಿಯನ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸಾಹಸದಿಂದ ಜ್ಯುವೆಂಟಸ್ ತಂಡ ಇಟಾಲಿಯನ್ ಸೂಪರ್ ಕಪ್ ಗೆದ್ದು ಬೀಗಿದೆ. ಬುಧವಾರ ರಾತ್ರಿ ಎ.ಸಿ.ಮಿಲನ್ ವಿರುದ್ಧ ನಡೆದ ಫೈನಲ್ ಪಂದ್ಯಾಟದಲ್ಲಿ ಜ್ಯುವೆಂಟಸ್ 1-0 ಗೊಲುಗಳ ಅಂತರದಿಂದ ಗೆದ್ದು ಚಾಂಪಿಯನ್ ಆಗಿದೆ.
 
ಸೌದಿ ಅರೇಬಿಯಾದಲ್ಲಿ ನಡೆದ ಈ ವರ್ಷದ ಮೊದಲ ಲೀಗ್ ನ ಫೈನಲ್ ಪಂದ್ಯದ 61 ನೇ ನಿಮಿಷದಲ್ಲಿ ರೊನಾಲ್ಡೊ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಹಿಂದೆ ರಿಯಲ್ ಮಾಡ್ರಿಡ್ ತಂಡದ ಪರವಾಗಿ ಆಡುತ್ತಿದ್ದ ರೊನಾಲ್ಡೊ ಕಳೆದ ವರ್ಷದಿಂದ ಜ್ಯುವೆಂಟಸ್ ಪರವಾಗಿ ಆಡುತ್ತಿದ್ದಾರೆ. 

Advertisement

ಪಂದ್ಯದ ನಂತರ ಮಾತನಾಡಿದ ಪೋರ್ಚುಗಲ್ ಮೂಲದ ಆಟಗಾರ, ನನಗೆ ನಿಜವಾಗಿಯೂ ಇದರ ಅಗತ್ಯವಿತ್ತು. 2019ಕ್ಕೆ ಉತ್ತಮ ಆರಂಭ ಸಿಕ್ಕಿದೆ, ಇದು ಕೇವಲ ಆರಂಭ. ನಮ್ಮ ಮುಂದಿನ ಟ್ರೋಫಿ ಗೆಲ್ಲುವುದೇ ನಮ್ಮ ಮುಂದಿನ ಗುರಿ ಎಂದಿದ್ದಾರೆ. 


ಜ್ಯುಂವೆಂಟಸ್ ಪರವಾಗಿ ಮೊದಲ ಟ್ರೋಫಿ ಗೆದ್ದ ರೊನಾಲ್ಡೊ ಒಟ್ಟು ಇಂತಹ 28 ಟ್ರೋಫಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next