Advertisement
ನಾವು ಹದಿಹರೆಯದ ಮಕ್ಕಳಿಗೆ ದಂಗೆ ಏಳುವುದು, ಕುಪ್ರಸಿದ್ಧ ಅಪಾಯ ತೆಗೆದುಕೊಳ್ಳುವುದು ಮತ್ತು ಹಲವಾರು ಹೆಸರಿನಲ್ಲಿ ಕರೆಯುತ್ತೇವೆ. ಏನಾದರೂ ಅವರಲ್ಲಿ ಇರುವ ಆತಂಕ, ದ್ವಂದ್ವ ಮನಸ್ಥಿತಿ ಹಾಗೂ ಗೊಂದಲಗಳ ಕಡೆಗೆ ಗಮನಹರಿಸಬೇಕು. ಬೆಳವಣಿಗೆಯ ಈ ಹಂತವು ಮಗುವಿನ ದೇಹದಲ್ಲಿ ಹಾರ್ಮೋನುಗಳ ಏರಿಳಿಕೆ ತರುತ್ತದೆ. ಇದರೊಂದಿಗೆ ವಿವಿಧ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ಸ್ವತಃ ಮಕ್ಕಳೆ ಬದಲಾವಣೆಗಳನ್ನು ಗಮನಿಸಬಹುದು. ಹೆಣ್ಣು ಮಕ್ಕಳಲ್ಲಿ ಋತುಚಕ್ರದ ಆರಂಭ, ದೊಡ್ಡ ಸ್ತನಗಳು ಮತ್ತು ಸೊಂಟ, ಎತ್ತರದಲ್ಲಿ ಹೆಚ್ಚಳ, ಮುಖ ಮತ್ತು ದೇಹದ ಕೂದಲಿನ ಕಾಣಿಸುವಿಕೆ ಹಾಗೂ ಹುಡುಗರಲ್ಲಿ ಲೈಂಗಿಕ ಅಂಗಗಳ ಬೆಳವಣಿಗೆ.
Related Articles
Advertisement
ವಿಕಲಚೇತನ ಹೊಂದಿರುವ ಹದಿಹರೆಯದವರು ತಮ್ಮ ಸ್ವ-ಆರೈಕೆಗಾಗಿ ಇತರರ ಮೇಲೆ ಅವಲಂಬಿತರಾಗಬಹುದು, ಅವರು ಅರೆಕಾಲಿಕ ಕೆಲಸದಿಂದ ತಮ್ಮದೇ ಹಣವನ್ನು ಹೊಂದಿಲ್ಲದಿರಬಹುದು ಮತ್ತು ಸಮುದಾಯ ಚಲನಶೀಲತೆಯಲ್ಲಿ ಸ್ವಾತಂತ್ರ್ಯದ ಕೊರತೆ ಇರಬಹುದು. ಆದ್ದರಿಂದ, ಚಟುವಟಿಕೆಗಳಲ್ಲಿ ಭಾಗವಹಿಸಲು ಅವರ ಅವಕಾಶಗಳು ಸೀಮಿತವಾಗಿವೆ. ಉದಾಹರಣೆಗೆ, ಅಂಗವೈಕಲ್ಯ ಹೊಂದಿರುವ ಹದಿಹರೆಯದ ಮಕ್ಕಳಿಗೆ ಹೊಸ ವಿಚಾರಗಳಾದ ಬಟ್ಟೆ, ಕೇಶವಿನ್ಯಾಸ, ಇತ್ಯಾದಿಗಳಲ್ಲಿ ಪ್ರೋತ್ಸಾಹಿಸುವುದಿಲ್ಲ ಅಥವಾ ಅವಕಾಶಗಳನ್ನು ನೀಡಲಾಗುವುದಿಲ್ಲ. ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುವ ಆಯ್ಕೆ ಹಾಗೆ ಅದರಿಂದ ಸಿಗುವ ಅನುಭವ ಹದಿಹರೆಯದ ಮಕ್ಕಳ ಬೆಳವಣಿಗೆಯಲ್ಲಿ ಪಾತ್ರ ನಿರ್ವಹಿಸುತ್ತದೆ. ಹಾಗೂ ಸ್ವಯಂ ಗುರುತು, ಸ್ವಾಭಿಮಾನ ಮತ್ತು ಆರೋಗ್ಯಕರ ದೇಹದ ಚಿತ್ರಣದಲ್ಲಿ ಪ್ರಭಾವ ಬೀರುತ್ತದೆ. ಆಕ್ಯುಪೇಶನಲ್ ಥೆರಪಿಸ್ಟ್‌ರವರು ಅಂಗವೈಕಲ್ಯ ಹೊಂದಿರುವ ಹದಿಹರೆಯದವರಿಗೆ ಈ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರಲ್ಲಿ ಮತ್ತು ಪೋಷಕರು ಅಂತಹ ಮಕ್ಕಳಿಗೆ ತಮ್ಮ ರೀತಿಯ ಬಟ್ಟೆಗಳನ್ನು ಆಯ್ಕೆ ಮಾಡಲು ಸಾಧ್ಯವಾದಷ್ಟು ಸ್ವಾತಂತ್ರ್ಯವನ್ನು ನೀಡಬಹುದು.
ದೇಹ ಚಿತ್ರಣ, ಒಬ್ಬರ ದೇಹದ ಕ್ರಿಯಾತ್ಮಕ ಗ್ರಹಿಕೆ, ಹದಿಹರೆಯದವರ ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಗಳು ಹಾಗೂ ಸಾರ್ವಜನಿಕ ಮತ್ತು ನಿಕಟ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ, ಕುಟುಂಬ ಮತ್ತು ಸ್ನೇಹಿತರ ಬೆಂಬಲ ಮತ್ತು ಮಾಹಿತಿಯ ಲಭ್ಯತೆಯು ಹದಿಹರೆಯದವರ ದೇಹಕ್ಕೆ ಹೊಂದಾಣಿಕೆಯನ್ನು ಧನಾತ್ಮಕವಾಗಿ ದೈಹಿಕ ಮತ್ತು ಶಾರೀರಿಕ ಬದಲಾವಣೆಗಳ ಮೂಲಕ ಮಕ್ಕಳ ಮೇಲೆ ಪ್ರಭಾವಿಸುತ್ತದೆ.
ವಿವಿಧ ರೀತಿಯ ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳು ಮೂಲಭೂತ ಜೀವನ ಕೌಶಲ್ಯಗಳನ್ನು ಕಲಿಯಲು ಕಷ್ಟಪಡುತ್ತಾರೆ ಮತ್ತು ಅವರು ಕಲಿಯುವ ವಿಧಾನವು ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿರುತ್ತದೆ. ಸ್ವ-ಆರೈಕೆ ಚಟುವಟಿಕೆಗಳಿಗೆ ನಿಜವಾಗಿಯೂ ಉತ್ತಮ ಶಿಕ್ಷಣ ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಉತ್ತಮ ಯೋಜನೆ ಅಗತ್ಯವಿರುತ್ತದೆ ಮತ್ತು ಅದನ್ನು ನಿಯಮಿತವಾಗಿ ಮಾಡಬೇಕು. ಯಾವುದೇ ಪೂರ್ವನಿಯೋಜಿತ ನಿಯೋಜನೆಯನ್ನು ಅದರ ಸಣ್ಣ ತುಣುಕು ಭಾಗಗಳಾಗಿ ವಿಭಜಿಸುವುದು, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವರ ಪ್ರಜ್ಞೆಯನ್ನು ವಿಂಗಡಿಸಲು ಸಹಾಯ ಮಾಡಲು ವಿವಿಧ ರೀತಿಯ ಆಕರ್ಷಕ ದೃಶ್ಯ ಮಾರ್ಗದರ್ಶಿಗಳನ್ನು ಬಳಸುವುದು, ದೃಶ್ಯಗಳು ಫೋಟೋಗಳು, ಕ್ಲಿಪ್-ಆರ್ಟ್ ಶೈಲಿಯ ಚಿತ್ರಗಳು, ಸ್ಮಾರ್ಟ್ ಆರ್ಟ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿಡಿ. ಮೌಖೀಕ ಪ್ರಾಂಪ್ಟ್ ಗಳನ್ನು ಒದಗಿಸುವ ಮೂಲಕ ದೈಹಿಕ ಬೆಂಬಲವನ್ನು ಒಳಗೊಂಡಿರುತ್ತದೆ. ಪ್ರತಿ ಮಗುವೂ ವಿಶಿಷ್ಟವಾಗಿದೆ. ಮತ್ತು ಕೆಲವು ಕೌಶಲಗಳನ್ನು ಕಲಿಸುವ ವಿಧಾನವು ಮಗುವಿನ ಸಾಮರ್ಥ್ಯಗಳ ವೈಯಕ್ತೀಕರಣದ ಅಗತ್ಯವಿರುತ್ತದೆ. ಮೌಖೀಕ ಸೂಚನೆಗಳ ಮೂಲಕ ಬೋಧನೆ, ಪ್ರದರ್ಶನ, ಸಂಪೂರ್ಣ ಕಾರ್ಯದ ಹಂತ ಹಂತವಾಗಿ ಬೋಧನೆ ಮತ್ತು ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೌಶಲಗಳನ್ನು ನೆನಪಿಟ್ಟುಕೊಂಡು ಪುನರಾವರ್ತಿಸಲು ಸಹಾಯ ಮಾಡುತ್ತದೆ.
ಇದರ ಹೊರತಾಗಿ, ಪ್ರಾಥಮಿಕ ಆರೈಕೆದಾರರು ಹದಿಹರೆಯದವರ ಶಾರೀರಿಕ ಪಕ್ವತೆ ಮತ್ತು ದೈಹಿಕ ಬೆಳವಣಿಗೆಗೆ ಹೊಂದಿಕೊಳ್ಳಬೇಕು. ವಿಶೇಷವಾಗಿ ಪೋಷಕರು ಅಥವಾ ಪಾಲನೆ ಮಾಡುವವರಿಗೆ, ಮಧ್ಯಮದಿಂದ ತೀವ್ರತರವಾದ ದೈಹಿಕ ಅಸಾಮರ್ಥ್ಯಗಳು ಮತ್ತು ಮಾನಸಿಕ ಕುಂಠಿತೆಯನ್ನು ಹೊಂದಿರುವ ಹದಿಹರೆಯದವರು ಮುಂದುವರೆದು ನೋಡಿಕೊಳ್ಳುವುದು ಕೆಲವೊಮ್ಮೆ ಕಷ್ಟ . ಇದು ಅಗತ್ಯವಿರುವ ಆರೈಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೂ ಹದಿಹರೆಯದವರಿಗೆ ದೊಡ್ಡ ಸವಾಲು ಆಗಿರುತ್ತದೆ. ಉದಾಹರಣೆಗೆ, ಚಿಕ್ಕ ಮಕ್ಕಳನ್ನು ವರ್ಗಾವಣೆ ಮಾಡುವುದು ವಾಹನಗಳ ಒಳಗೆ ಮತ್ತು ಹೊರಗೆ, ಸ್ನಾನ ಮಾಡಿಸುವುದು ಮತ್ತು ಅವರಿಗೆ ಬಟ್ಟೆ ಹಾಕಿಸುವುದು ಸುಲಭ. ಅದೇ ಮಗು ಬೆಳೆಯುತ್ತ, ಎತ್ತರ ಹಾಗೂ ತೂಕದ ಹೆಚ್ಚಳದಿಂದಾಗಿ, ಈ ಆರೈಕೆ ಕಾರ್ಯಗಳು ಹೆಚ್ಚು ಕಷ್ಟಕರವಾಗುತ್ತವೆ. ಗಮನಾರ್ಹ ಬದಲಾವಣೆಗಳನ್ನು ಸರಿಹೊಂದಿಸಲು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಬಹುದು. ದಿನನಿತ್ಯದ ಅನುಕೂಲಕ್ಕಾಗಿ ಕಮೋಡ್ ಕುರ್ಚಿಗಳು ಅಥವಾ ವರ್ಗಾವಣೆಗಾಗಿ ಎತ್ತುವಿಕೆಯಂತಹ ಉಪಕರಣಗಳನ್ನು ಬಳಸಬಹುದು. ಇದರಿಂದ ಆರೈಕೆ ಮಾಡುವುದು ಸುಲಭವಾಗುತ್ತದೆ. ಅವರಿಗೆ, ಪ್ರೌಢಾವಸ್ಥೆಯು ಹೆಚ್ಚುವರಿ ಮಾನಸಿಕ ಸಮಸ್ಯೆಗಳನ್ನು ಸಹ ಪ್ರಸ್ತುತಪಡಿಸಬಹುದು.
ಲೈಂಗಿಕ ಬಯಕೆಯನ್ನು ಅನುಭವಿಸಿ ಮತ್ತು ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಿಕೊಳ್ಳುವ ಬಗ್ಗೆ, ಅಂಗವೈಕಲ್ಯ ಹೊಂದಿರುವ ಹದಿಹರೆಯದವರ ಲೈಂಗಿಕ ಸಾಮರ್ಥ್ಯದ ಬಗ್ಗೆ ತಪ್ಪು ಗ್ರಹಿಕೆಗಳಿವೆ. ಆದ್ದರಿಂದ, ಈ ತಪ್ಪುಗ್ರಹಿಕೆಗಳನ್ನು ತಡೆಗಟ್ಟಲು, ಸರಿಯಾದ ಲೈಂಗಿಕ ಶಿಕ್ಷಣದಲ್ಲಿ ಗರ್ಭ ನಿರೋಧಕ, ಎಸ್.ಟಿ.ಡಿ. ರೋಗದ ಕುರಿತು ಹಾಗೂ ಅಂಗವೈಕಲ್ಯದಿಂದಾಗಿ ಅವರ ಲೈಂಗಿಕತೆಗೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿ ಹೇಳಬೇಕು.
ಅಜೀವ ಯಶಸ್ಸಿಗೆ ಸಾಮಾಜಿಕ ಮತ್ತು ನಡವಳಿಕೆಯ ಕೌಶಲ್ಯಗಳು ಅವಶ್ಯಕ. ದುರದೃಷ್ಟವಶಾತ್, ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಈ ಕೌಶಲ್ಯಗಳೊಂದಿಗೆ ಹೋರಾಡುತ್ತಾರೆ. ಉದಾಹರಣೆಗೆ ವಿಶೇಷ ಅಗತ್ಯಗಳನ್ನು ಹೊಂದಿರುವ ಕೆಲವು ಮಕ್ಕಳು ಇತರರನ್ನು ಸರಿಯಾಗಿ ಮಾತನಾಡಿಸಲು ಕಷ್ಟಪಡುತ್ತಾರೆ. ಆ ಕೌಶಲದ ಕೊರತೆಯಿಂದ ದೈನಂದಿನ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸವಾಲು ಎದುರಾಗುತ್ತದೆ. ಇತರ ಮಕ್ಕಳು ಮುಖದ ಅಭಿವ್ಯಕ್ತಿಗಳು ಮತ್ತು ಸನ್ನೆಗಳನ್ನು ಅರ್ಥೈಸಲು ಮತ್ತು ಬಳಸುವುದರಲ್ಲಿ ತೊಂದರೆಯನ್ನು ಹೊಂದಿರುತ್ತಾರೆ. ಇದು ಸಂವಹನ ಮಾಡುವಾಗ ತೊಂದರೆಗೆ ಈಡು ಮಾಡುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಸೂಕ್ತವಾದ ಸಾಮಾಜಿಕ ನಡವಳಿಕೆಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ ಮತ್ತು ಮಗುವಿನ ಪ್ರಯತ್ನಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅವರ ತಪ್ಪುಗಳನ್ನು ಸೂಚಿಸುವ ಬದಲು ಅವರನ್ನು ಹೊಗಳಬೇಕು.
ಶಿಕ್ಷಕರ ಮತ್ತು ಪೋಷಕರು ಮಗುವಿಗೆ ಏನನ್ನಾದರೂ ಮಾಡಲು ಕೇಳುವಾಗ ಸರಳ ಮತ್ತು ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು ಮತ್ತು ನಂತರ ಕ್ರಮೇಣ, ಇತರರ ವಸ್ತುಗಳನ್ನು ಬಳಸುವ ಮೊದಲು ಅನುಮತಿ ಕೇಳಲು ನೆನಪಿಸುವಂತಹ ಸರಿಯಾದ ಸಾಮಾಜಿಕ ನಡವಳಿಕೆಗಳಿಗೆ ಸಂಬಂಧಿಸಿದ ಆಜ್ಞೆಗಳನ್ನು ನೀಡಲು ಪ್ರಾರಂಭಿಸಬೇಕು. ಬೇರೆಯವರ ವಸ್ತುಗಳನ್ನು ಬಳಸುವ ಮುನ್ನ ಅಥವಾ ಸ್ವಂತ ವಸ್ತುಗಳನ್ನುಹಂಚಿಕೊಳ್ಳಬೇಕಾದರೆ ನಿಯಮಗಳನ್ನು ಅನುಸರಿಸಬೇಕು. ಅದನ್ನು ಅನುಸರಿಸಿ, ಮಗು ಬೆಳೆದಂತೆ, ವಿರುದ್ಧ ಲಿಂಗದೊಂದಿಗೆ ಸೂಕ್ತವಾಗಿ ವರ್ತಿಸುವಂತೆ ತರಬೇತಿ ನೀಡುವುದು ಮುಖ್ಯ. ವಿರುದ್ಧ ಲಿಂಗದಿಂದ ಅವರನ್ನು ದೂರವಿಡುವ ಬದಲು, ಮೇಲ್ವಿಚಾರಣೆಯಲ್ಲಿ ಅಂತಹ ಸನ್ನಿವೇಶಗಳಿಗೆ ಅವರನ್ನು ಒಡ್ಡಿಕೊಳ್ಳಿ. ಇದರಿಂದ ಅವರ ಸ್ವೀಕಾರಾರ್ಹ ನಡವಳಿಕೆಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ದೈಹಿಕ ಅಂತರವನ್ನು ಪಾಲಿಸುವ ಅಗತ್ಯತೆಯನ್ನು ವಿವರಿಸಿ ತಿಳಿಸಬೇಕು.
ನಾವು ಬಾಲ್ಯದಿಂದ ಹದಿಹರೆಯಕ್ಕೆ ಪರಿವರ್ತನೆಯ ಸಮಯದ ಉದ್ದಕ್ಕೂ ವಿಶೇಷ ಅಗತ್ಯವುಳ್ಳ ಮಗು ಎದುರಿಸುವ ಸಮಸ್ಯೆಗಳ ಬಗ್ಗೆ ಮತ್ತು ಈ ಬದಲಾವಣೆಗಳನ್ನು ನಿಭಾಯಿಸಲು ವಿಶೇಷ ಅಗತ್ಯವಿರುವ ಮಗುವಿಗೆ ಆಕ್ಯುಪೇಶನಲ್ ಥೆರಪಿಸ್ಟ್ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ನಾವು ತಿಳಿಸಿದ್ದೇವೆ. ಸಾಮಾಜಿಕ ಕಳಂಕ, ಸಾಮಾಜಿಕ ನಿಯಮಗಳ ಮತ್ತು ಅದರ ಬಗ್ಗೆ ಮಾತನಾಡಲು ಹಿಂಜರಿಕೆ ಇದ್ದರೂ ಸಹ. ಈ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ದೈನಂದಿನ ಜೀವನದಲ್ಲಿ ಈ ತಂತ್ರಗಳನ್ನು ಅನ್ವಯಿಸುವುದು ಅವರ ಆರೋಗ್ಯಕರ ಬೆಳವಣಗೆಯ ಮೇಲೆ ಪ್ರಭಾವ ಬೀರುತ್ತದೆ.
ಸೌಜನ್ಯಾ ನಾಯಕ್, ಸುಶ್ಮಿತಾ, ವಿದ್ಯಾರ್ಥಿನಿಯರು
ಆಶಿಶ್ ದಾಸ್ ಅಸಿಸ್ಟೆಂಟ್ ಪ್ರೊಫೆಸರ್, ಆಕ್ಯುಪೇಶನಲ್ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ