Advertisement

ಸಾಧನೆಗಳ ಒಡೆಯನನ್ನು ನಡೆಸಿಕೊಂಡ ರೀತಿ ಸರಿಯೇ?

09:18 AM Dec 28, 2021 | Team Udayavani |

ಇತ್ತೀಚೆಗಷ್ಟೇ, ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕತ್ವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದ್ದ ವಿರಾಟ್‌ ಕೊಹ್ಲಿಯವರನ್ನು ಏಕದಿನ ತಂಡದ ನಾಯಕತ್ವ ಸ್ಥಾನದಿಂದ ಹಠಾತ್ತಾಗಿ ಕೆಳಗಿಳಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿಗಾಗಿ ತಂಡ ಪ್ರಕಟಿ ಸುವಾಗ ತಂಡದ ಚುಕ್ಕಾಣಿಯನ್ನು ರೋಹಿ ತ್‌ ಶರ್ಮರಿಗೆ ವರ್ಗಾಯಿಸುವ ಮೂಲ ಕ, ಭಾರತೀಯ ಕ್ರಿಕೆಟ್‌ ಅಭಿಮಾನಿ ಗಳಲ್ಲಿ, ವಿಶೇಷವಾಗಿ ಕೊಹ್ಲಿ ಅಭಿಮಾನಿ ಗಳಲ್ಲಿ ಅಚ್ಚರಿ ಹಾಗೂ ಆಘಾತದ ಅಲೆಗಳನ್ನು ಎಬ್ಬಿಸಿದೆ. ಇದೆಲ್ಲವೂ ಪೂರ್ವ ಯೋಜಿತ ಎಂಬುದು ಮಕ್ಕಳಿಗೂ ಮನ ದಟ್ಟಾಗುವಂಥ ವಿಚಾರ. ಭಾರ ತೀಯ ಕ್ರಿಕೆಟ್‌ ತಂಡಕ್ಕೆ ಮೂರು ಆಧಾರ ಸ್ತಂಭ ಗಳೆಂದರೆ ಅದು ಬಿಸಿಸಿಐ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಹಾಗೂ ತಂಡದ ಮುಖ್ಯ ತರಬೇತುದಾರದ ಸ್ಥಾನ. ಈ ಮೂರೂ ಕಡೆ ಕ್ರಮವಾಗಿ ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಹಾಗೂ ರಾಹುಲ್‌ ದ್ರಾವಿಡ್‌ ಬಂದು ಕುಳಿತಿದ್ದಾರೆ. ಈ ಮೂವರಲ್ಲೂ ಇರುವ ಕಾಮನ್‌ ಫ್ಯಾಕ್ಟರ್‌ ಏನೆಂದರೆ, “ಬೆಟ್ಟದಷ್ಟು ಸಹನೆ ಹಾಗೂ ನಿಶ್ಯಬ್ದ ಕಾರ್ಯ ತಂತ್ರ’. ಇವರ ಫೋಕಸ್‌ ಏನಿದ್ದರೂ ಆಟದ ಮೇಲಷ್ಟೇ. ಇವರ ಗಮನ, 2023ರಲ್ಲಿ ಭಾರತ ದಲ್ಲೇ ನಡೆ ಯುವ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಮೇಲಿದೆ.

Advertisement

ಆದರೆ ಸಿಕ್ಕಾಪಟ್ಟೆ ಅಗ್ರೆಸಿವ್‌ ಎನಿಸಿರುವ ವಿರಾಟ್‌ ಕೊಹ್ಲಿ, ಇವರ ವ್ಯಕ್ತಿತ್ವಗಳಿಗೆ ತದ್ವಿರುದ್ಧವಾಗಿರುವಂಥವರು. ಅಲ್ಲದೆ, ಇತ್ತೀಚೆಗೆ ಇವರ ಪ್ರದರ್ಶನ ಮಂಕಾಗಿದೆ, ನಾಯಕತ್ವವೂ ಮೊನಚು ಕಳೆದುಕೊಂಡಿದೆ. ಹಾಗಾಗಿ, 2023ರ ವಿಶ್ವಕಪ್‌ ಹೊತ್ತಿಗೆ ಸದೃಢ ತಂಡವನ್ನು ಕಟ್ಟಬೇಕು ಎಂಬ ಇರಾದೆ ಈ ಮೂವರಲ್ಲೂ ಇದೆ. ಆದರೆ ಕೊಹ್ಲಿ ಯನ್ನು ನಾಯಕತ್ವದಿಂದ ಕೆಳಗಿಳಿಸಲು ಸೂಕ್ತ ಸಮಯಕ್ಕಾಗಿ ಎದುರು ನೋಡುತ್ತಿದ್ದರು ಇವರು. ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಲೀಗ್‌ ಹಂತದಿಂದಲೇ ನಿರ್ಗಮನವಾಯಿತೋ, ಆ ಪಂದ್ಯಾವಳಿ ಶುರುವಾಗುವುದಕ್ಕೂ ಮುನ್ನವೇ ಕೊಹ್ಲಿ, ಕಾರ್ಯಭಾರದ ಕಾರಣ ಹೇಳಿ ಟಿ20 ನಾಯಕತ್ವ ತ್ಯಜಿಸಿದರೋ… ಈ ಮೂವರಿಗೆ ಅಷ್ಟೇ ಸಾಕಾಯಿತು.

ಇದಕ್ಕೆ ಸೌರವ್‌ರವರ ಇತ್ತೀಚಿನ ಹೇಳಿಕೆಯೇ ಸಾಕ್ಷಿ. ನಾವು ಟಿ20 ನಾಯಕತ್ವ ಬಿಡಬಾರದೆಂದು ಕೊಹ್ಲಿಗೆ ಮನವರಿಕೆ ಮಾಡಿದ್ದೆವು. ಆದರೆ ಅವರು ನಮ್ಮ ಸೂಚನೆ ಯನ್ನು ನಿರ್ಲಕ್ಷಿಸಿದರು ಎಂಬರ್ಥದಲ್ಲಿ ಅವರು ಮಾತ ನಾಡಿದ್ದಾರೆ. ಏಕದಿನ ನಾಯಕತ್ವದಿಂದ ಕೆಳಗಿಳಿಸುವುದರ ಹಿಂದೆ ಇದೇ ಮುನಿಸು ಕಾರಣವಿರಬಹುದೇ ಎಂಬ ಅನುಮಾನಗಳು ಏಳುತ್ತವೆ. ಆದರೆ ಹಾಗೆ ಮುನಿಸಿ ಕೊಳ್ಳುವುದಕ್ಕೆ ಮುಂಚೆ ಕೊಹ್ಲಿಯವರ ಸಾಧನೆಗೆ ಬಿಸಿಸಿಐ ಗೌರವ ಕೊಡಬೇಕಿತ್ತು ಎಂದೆನ್ನಿಸುವುದು ಸಹಜ.

ಕೊಹ್ಲಿಯದ್ದು ಟೀಕೆಗಳನ್ನು ಮೀರಿದ ಸಾಧನೆ!: ವಿಷಯ ಏನೇ ಇರಲಿ. ಟ್ರಾಕ್‌ ರೆಕಾರ್ಡ್‌ ಉತ್ತಮ ವಾಗಿರುವ, ನಾಯಕನಾಗಿ ಭಾರತಕ್ಕೆ ಬಹುತೇಕ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ, ವೈಯಕ್ತಿಕ ಸಾಧನೆಗಳಿಂದ ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ವಿಶ್ವ ಮಾನ್ಯತೆ ತಂದುಕೊಟ್ಟಿರುವ ಕೊಹ್ಲಿಯವರನ್ನು ಬಿಸಿಸಿಐ ಹೀಗೆ ನಡೆಸಿಕೊಳ್ಳಬಾರದಿತ್ತು ಎಂದೆನಿಸದಿರದು. ತಮ್ಮ ನಾಯಕತ್ವದಲ್ಲಿ ಕೊಹ್ಲಿ ಐಸಿಸಿ ಸೀಮಿತ ಓವರ್‌ ಮಾದರಿಯ ಪಂದ್ಯಾವಳಿಗಳಲ್ಲಿ ಒಂದಾದರೂ ಟ್ರೋಫಿ ಗೆಲ್ಲಲಿಲ್ಲ ಎಂಬುದು ಅವರ ಮೇಲಿರುವ ದೊಡ್ಡ ಆರೋಪ. ಆದರೆ ಅದನ್ನೂ ಮೀರಿದ ಹೆಗ್ಗಳಿಕೆಗಳು ಅವರ ಕ್ರಿಕೆಟ್‌ ಕೆರಿಯರ್‌ಗೆ ಇದೆ.

ಅವರು ಭಾರತೀಯ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನಾಯಕತ್ವದಲ್ಲಿ ಭಾರತ ತಂಡ 66 ಪಂದ್ಯಗಳನ್ನಾಡಿದ್ದು, ಅವುಗಳಲ್ಲಿ 39 ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿ ಕೊಹ್ಲಿಯ ಸಕ್ಸಸ್‌ ರೇಟ್‌ ಶೇ. 59.09ರಷ್ಟಿದೆ. ಏಕದಿನ ಸರಣಿಯಲ್ಲಿ ಒಟ್ಟು 95 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲಿ 65ರಲ್ಲಿ ಗೆಲುವು ಸಾಧಿಸಿದ್ದರೆ, 27 ಪಂದ್ಯಗಳಲ್ಲಿ ಸೋಲು ಕಂಡಿದೆ. ಇಲ್ಲಿ ಅವರ ಸಕ್ಸಸ್‌ ರೇಟ್‌ ಶೇ. 70.43 ರಷ್ಟಿದ್ದು, ಈ ಮೂಲಕ, ಅವರು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಧೋನಿ (110 ಪಂದ್ಯ ಗಳಲ್ಲಿ ಗೆಲುವು), ಅಜರುದ್ದೀನ್‌ (90) ಹಾಗೂ ಸೌರವ್‌ ಗಂಗೂಲಿ ಇದ್ದಾರೆ.

Advertisement

ಬ್ಯಾಟಿಂಗ್‌ನಲ್ಲೂ ಮಿಂಚು: ನಾಯಕನ ಜವಾ ಬ್ದಾರಿಯ ಭಾರ ಹೊರಲಾಗದೇ ಬ್ಯಾಟಿಂಗ್‌ ವೈಫ‌ಲ್ಯ ವಾದರೆಂಬ ಟೀಕೆ ಅವರ ಮೇಲಿಲ್ಲ. ಹಲವಾರು ಏಕದಿನ ಪಂದ್ಯಗಳಲ್ಲಿ ಅವರು ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ನಾಯಕರಾಗಿ ಅವರು ಸರಾಸರಿ ಶೇ. 72.65ರ ಆಧಾರದಲ್ಲಿ ಒಟ್ಟು 5,449 ರನ್‌ಗಳನ್ನು ಕಲೆಹಾಕಿದ್ದಾರೆ. ಇದು ಏಕದಿನ ಪಂದ್ಯಗಳಲ್ಲಿ ತಮ್ಮ ತಂಡಗಳನ್ನು ಮುನ್ನಡೆಸಿದ ವಿಶ್ವಮಟ್ಟದ ಕ್ರಿಕೆಟಿಗರ ಪೈಕಿ ಅತ್ಯುತ್ತಮ ಪ್ರದರ್ಶನ ಎಂದೆನಿಸಿದೆ.

ಇನ್ನು ನಾಯಕನ ಜವಾಬ್ದಾರಿಯ ಹೊರೆ ತಮ್ಮ ಆಟದ ಮೇಲೆ ಬೀಳದಂತೆ ನೋಡಿಕೊಂಡು ಬ್ಯಾಲೆನ್ಸ್‌ ಮಾಡಿಕೊಂಡು ಆಡುವುದರಲ್ಲಿ ಕೊಹ್ಲಿ ನಿಷ್ಣಾತರು. ಏಕದಿನ ನಾಯಕರಾಗಿದ್ದಾಗ ಅವರಿಂದ 21 ಶತಕಗಳು ಬಂದಿವೆ. ಇದು 50 ಓವರ್‌ ಮಾದರಿಯ ಪಂದ್ಯಗಳಲ್ಲೇ ನಾಯಕನೊಬ್ಬ ಸಿಡಿಸಿದ ಶತಕಗಳಲ್ಲಿ 2ನೇ ಅಗ್ರ ಸಾಧನೆ.

ಇನ್ನು, ವೈಯಕ್ತಿಕ ಮಟ್ಟದಲ್ಲೂ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳುವ ಮೂಲಕ ಅವರು ಭಾರತೀಯ ಕ್ರಿಕೆಟ್‌ಗೆ ಹೆಮ್ಮೆ ತಂದಿದ್ದಾರೆ. ಇದರೊಂದಿಗೆ, ಶೇ. 72.65ರ ಸರಾಸರಿಯಲ್ಲಿ ರನ್‌ ದಾಖಲಿಸಿರುವ ಅವರು, ಏಕದಿನ ಪಂದ್ಯಗಳಲ್ಲೇ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಹೆಗ್ಗಳಿಕೆ ಪಡೆದಿದ್ದಾರೆ. ಇಂಥ ಒಬ್ಬ ನಾಯಕನನ್ನು ನಡೆಸಿಕೊಂಡ ರೀತಿ ಸಮಂಜಸವಲ್ಲ ಎಂದೆನಿಸುತ್ತದೆ.

– ಚೇತನ್‌ ಒ. ಆರ್‌.

Advertisement

Udayavani is now on Telegram. Click here to join our channel and stay updated with the latest news.

Next