Advertisement
ಹಲವು ರೀತಿಯ ಒತ್ತಡಗಳಿಗೆ ಸಿಲುಕಿ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ನೇರವಾಗಿ ಯಾರೂ ಕಾರಣರಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಜಕೀಯ ಕಾರಣಕ್ಕಾಗಿ ರೋಹಿತ್ ಅಧ್ಯಯನದಲ್ಲಿ ಹಿಂದೆ ಬಿದ್ದಿದ್ದ. ಅಲ್ಲದೆ ಆತನ ತಾಯಿ ಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಸಿದ್ಧಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲ 2016ರ ಜ.17ರಂದು ತನ್ನ ಹಾಸ್ಟೆಲ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ ಮಾರನೇ ದಿನ ಕ್ಯಾಂಪಸ್‌ನಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಜಾತಿ ತಾರತಮ್ಯಕ್ಕೆ ತುತ್ತಾಗಿ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಹೀಗಾಗಿ ಈ ಪ್ರಕರಣ ದೇಶಾದ್ಯಂತ ಕಾವು ಪಡೆದುಕೊಂಡಿತ್ತು.