Advertisement

Rohit To Ponting; ಹೆಚ್ಚು ಗೆಲುವಿನ ಶೇಕಡವಾರು ಹೊಂದಿರುವ ನಾಯಕ ಯಾರು? ಇಲ್ಲಿದೆ ಮಾಹಿತಿ

12:42 PM Oct 31, 2023 | Team Udayavani |

ಮುಂಬೈ: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಇತ್ತೀಚೆಗಷ್ಟೇ ನೂರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಸಾಧನೆ ಮಾಡಿದ್ದರು. ಈ ಸಾಧನೆ ಮಾಡಿದ ಭಾರತದ ಕೇವಲ ಏಳನೇ ಆಟಗಾರ ಎಂಬ ದಾಖಲೆ ಬರೆದಿದ್ದರು.

Advertisement

ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಉತ್ತಮ ಸಾಧನೆ ಹೊಂದಿದ್ದಾರೆ. ಕನಿಷ್ಠ ನೂರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಾಯಕರ ಪೈಕಿ ಹೆಚ್ಚು ಗೆಲುವಿನ ಶೇಕಡಾವಾರನ್ನು ರೋಹಿತ್ ಶರ್ಮಾ ಹೊಂದಿದ್ದಾರೆ. ನೂರು ಪಂದ್ಯಗಳ ಪೈಕಿ 74 ಪಂದ್ಯಗಳಲ್ಲಿ ರೋಹಿತ್ ನಾಯಕನಾಗಿ ಗೆಲುವು ಕಂಡಿದ್ದಾರೆ. ಅಂದರೆ ಅವರ ಗೆಲುವಿನ ಶೇಕಡಾವಾರು 74 ಇದೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 324 ಪಂದ್ಯಗಳಲ್ಲಿ 220 ಗೆಲುವಿನೊಂದಿಗೆ 70.51 ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ನೇ ಅತ್ಯುತ್ತಮ ದಾಖಲೆ.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ದಿವಂಗತ ಹ್ಯಾನ್ಸಿ ಕ್ರೋನಿಯೆ 191 ಪಂದ್ಯಗಳಲ್ಲಿ 126 ಗೆಲುವುಗಳನ್ನು ದಾಖಲಿಸಿದ್ದರು. ಅವರು 67.02 ಗೆಲುವಿನ ಶೇಕಡಾವಾರು ಹೊಂದಿದ್ದರು.

ಇದನ್ನೂ ಓದಿ:Corruption Case; ಚಂದ್ರಬಾಬು ನಾಯ್ಡುಗೆ ನಾಲ್ಕು ವಾರಗಳ ಕಾಲ ಜಾಮೀನು ನೀಡಿದ ಹೈಕೋರ್ಟ್

Advertisement

ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್ 115 ಪಂದ್ಯಗಳಲ್ಲಿ 78 ಗೆಲುವಿನೊಂದಿಗೆ 69.64 ಗೆಲುವಿನ ಶೇಕಡಾವಾರು ಹೊಂದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರು ನಾಯಕರಾಗಿ ತಮ್ಮ ವೃತ್ತಿಜೀವನದಲ್ಲಿ 163 ಪಂದ್ಯಗಳಲ್ಲಿ 108 ಗೆಲುವುಗಳೊಂದಿಗೆ 66.67 ರ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದರು.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 213 ಪಂದ್ಯಗಳಲ್ಲಿ 135 ಗೆಲುವುಗಳೊಂದಿಗೆ 64.6 ಗೆಲುವಿನ ಶೇಕಡಾವಾರು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next