ಮುಂಬೈ: ದೇಶಾದ್ಯಂತ ಚಿತ್ರಮಂದಿರಗಳು ಈಗಾಗಲೇ ತೆರೆದು, ಒಂದೊಂದೇ ಚಿತ್ರಗಳು ತೆರೆಕಾಣುತ್ತಿವೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಜಯ್ ದೇವಗನ್, ಮತ್ತು ರಣವೀರ್ ಸಿಂಗ್ ನಟಿಸಿರುವ ಚಿತ್ರ ಸೂರ್ಯವಂಶಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಬಹುನೀರಿಕ್ಷಿತ ಸೂರ್ಯವಂಶಿ ಮುಂಬರುವ ನವೆಂಬರ್ 5ರಂದು ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ಅಕ್ಷಯ್ ಕುಮಾರ್ ಟ್ವಿಟ್ಟರ್ ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಶೇರ್ ಮಾಡಿರುವ ವಿಡಿಯೋದಲ್ಲಿ ಮೂವರು ನಟರು ತಮ್ಮ ಅನುಭವಗಳ ಕುರಿತು ಹೇಳಿಕೊಂಡಿದ್ದಾರೆ.
Interval hua khatam, now it’s showtime! #Sooryavanshi releasing this Diwali, 5th November at a cinema near you. Come celebrate with us. #BackToCinemas pic.twitter.com/JF2QE80Efp
— Akshay Kumar (@akshaykumar)
Related Articles
ಇನ್ನು ಈ ಮೊದಲು ದೀಪಾವಳಿಯಂದು (ನವೆಂಬರ್ 4) ಸೂರ್ಯವಂಶಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದರು. ಆದರೆ ಆ ಸಮಯದಲ್ಲಿ ನಿಖರವಾದ ದಿನಾಂಕ ಖಚಿತ ಪಡಿಸಿರಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಅಕ್ಕೋಬರ್ 22ರಿಂದ ಚಿತ್ರಮಂದಿರಗಳು ಮತ್ತೆ ತೆರೆಯಬಹುದು ಎಂದು ಘೋಷಿಸಿದ ಬಳಿಕ ಈ ಸುದ್ದಿ ಹೊರ ಬಂದಿದೆ.
ಸೂರ್ಯವಂಶಿ ಚಿತ್ರ ಕಾಪ್ ಆಕ್ಷನ್, ಸಿಂಗಂ ಬ್ರಹ್ಮಾಂಡದ ಮುಂದುವರೆದ ಭಾಗವಾಗಿದೆ. ಇದು ಅಜಯ್ ದೇವಗನ್ ನಟನೆಯ ಸಿಂಗಂ ಮತ್ತು ಸಿಂಗಮ್ ರಿಟರ್ನ್ಸ್ ನಂತರ ರಣವೀರ್ ಸಿಂಗ್ ಮತ್ತು ದೇವಗನ್ ನಟನೆಯ ಸಿಂಬಾ ಮೂಲಕ ವಿಸ್ತರಿಸಿತ್ತು. ಈಗ ಮುಂದುವರೆಯುತ್ತಿದೆ ಅಕ್ಷಯ್ ಪಾತ್ರ.
ಈ ಚಿತ್ರದಲ್ಲಿ ಅಕ್ಷಯ್ ಅಪರಾಧದ ವಿರುದ್ಧ ಹೋರಾಡುವ ಡಿಸಿಪಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಕತ್ರಿನಾ ನಾಯಕಿಯಾಗಿ ನಟಿಸಿದ್ದಾರೆ. ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ವೀಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.