Advertisement

INDvsSL; ನಮ್ಮ ಬ್ಯಾಟಿಂಗ್‌ …. : ಪಂದ್ಯ ಸೋತ ಬಳಿಕ ರೋಹಿತ್‌ ಶರ್ಮಾ ಕಿಡಿ ನುಡಿ

11:39 AM Aug 05, 2024 | Team Udayavani |

ಕೊಲೊಂಬೊ: ಶ್ರೀಲಂಕಾ ವಿರುದ್ದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು (Team India) ನೀರಸ ಸೋಲುಕಂಡಿದೆ. ಲೆಗ್‌ ಸ್ಪಿನ್ನರ್‌ ಜೆಫ್ರಿ ವಾಂಡೆರ್ಸೆ (Jeffrey Vandersay) ಜಾಲಕ್ಕೆ ನಲುಗಿದ ಟೀಂ ಇಂಡಿಯಾ ಬ್ಯಾಟರ್‌ ಗಳು ಕೇವಲ 208 ರನ್‌ ಗಳಿಗೆ ಆಲೌಟಾಯಿತು. ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಪಂದ್ಯದಲ್ಲಿ ಲಂಕಾ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 240 ರನ್‌ ಗಳಿಸಿದರೆ, ಭಾರತ 208 ರನ್‌ ಮಾತ್ರ ಗಳಿಸಲು ಶಕ್ತವಾಯಿತು. ಮೊದಲ ವಿಕೆಟ್‌ ಗೆ 97 ರನ್‌ ಗಳಿಸಿದ್ದ ಭಾರತ ನಂತರ ಸತತ ವಿಕೆಟ್‌ ಕಳೆದುಕೊಂಡಿತು. ಅದರಲ್ಲೂ 10 ಓವರ್‌ ಗಳ ಅಂತರದಲ್ಲಿ ಭಾರತ ಆರು ವಿಕೆಟ್‌ ಕಳೆದುಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್‌ ಶರ್ಮಾ (Rohit Sharma), “ನೀವು ಪಂದ್ಯ ಸೋತಾಗ ಎಲ್ಲವೂ ನಿಮಗೆ ಬೇಸರ ತರಿಸುತ್ತದೆ. ಇದು ಕೇವಲ ಆ ಹತ್ತು ಓವರ ವಿಷಯವಲ್ಲ. ನೀವು ಸ್ಥಿರ ಕ್ರಿಕೆಟ್‌ ಆಡಬೇಕಾಗುತ್ತದೆ, ಆದರೆ ನಾವು ಅದರಲ್ಲಿ ಸೋತೆವು. ಸ್ವಲ್ಪ ಬೇಜಾರಾಗಿದೆ, ಆದರೆ ಇಂತಹ ವಿಷಯಗಳು ನಡೆಯುತ್ತದೆ” ಎಂದರು.

“ನಾವು ಸಾಕಷ್ಟು ಒಳ್ಳೆಯ ಪಂದ್ಯ ಆಡಲಿಲ್ಲ. ನಾವು ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ಹೆಚ್ಚು ನೋಡಲು ಬಯಸುವುದಿಲ್ಲ. ಆದರೆ ಮಧ್ಯಮ ಓವರ್‌ ಗಳ ನಮ್ಮ ಬ್ಯಾಟಿಂಗ್ ಬಗ್ಗೆ ಮಾತುಕತೆ ನಡೆಯಲಿದೆ” ಎಂದು ರೋಹಿತ್ ಹೇಳಿದರು.‌

ಇಲ್ಲಿನ ಪಿಚ್‌ ಪರಿಸ್ಥಿತಿಗೆ ಬ್ಯಾಟರ್‌ ಗಳು ಶೀಘ್ರ ಹೊಂದಿಕೊಳ್ಳಬೇಕು ಎಂದು ರೋಹಿತ್‌ ಹೇಳಿದರು.

Advertisement

“ನಿಮ್ಮೆದುರಲ್ಲಿ ಏನಿದೆಯೋ ಅದಕ್ಕೆ ನೀವು ಹೊಂದಿಕೊಳ್ಳಬೇಕು. ಬಲಗೈ-ಎಡಗೈ ಬ್ಯಾಟರ್‌ ಹೊಂದಾಣಿಕೆಯಲ್ಲಿ ಸ್ಟ್ರೈಕ್‌ ರೊಟೇಟ್‌ ಮಾಡುವುದು ಸುಲಭ ಎಂದು ನಾನು ಭಾವಿಸಿದ್ದೆ. ಆದರೆ ಆರು ವಿಕೆಟ್‌ ಪಡೆದ ವಾಂಡರ್ಸೆಗೆ ಕ್ರೆಡಿಟ್‌ ಸಲ್ಲಬೇಕು” ಎಂದು ಟೀಂ ಇಂಡಿಯಾ ನಾಯಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next