ಮುಂಬೈ: ಐಪಿಎಲ್ ನ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಇಂದು ಮಧ್ಯಾಹ್ನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಮತ್ತು ಸಂಜು ಸ್ಯಾಮ್ಸನ್ ಎದುರಾಗಲಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಏಳನೇ ಬ್ಯಾಟರ್ ಆಗಲು ಸಜ್ಜಾಗಿದ್ದಾರೆ. ಶನಿವಾರದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ 64 ರನ್ ಗಳಿಸಿದರೆ ರೋಹಿತ್ ಈ ಮೈಲಿಗಲ್ಲು ನೆಡಲಿದ್ದಾರೆ.
ಇದನ್ನೂ ಓದಿ:ಒಂದು ಲೋಟ ಚಹಾಗೆ 100 ರೂ.!; ಸ್ವರ್ಣ ಲಂಕೆಯ ಈಗಿನ ಪರಿಸ್ಥಿತಿಗೆ ಕಾರಣವೇನು?
ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ 10,000 ರನ್ ಗಳಿಸಿದ ಭಾರತದ 2ನೇ ಬ್ಯಾಟರ್ ಆಗಲಿದ್ದಾರೆ. ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3313 ರನ್ ಗಳಿಸಿದ್ದಾರೆ. ಅವರು ಐಪಿಎಲ್ ನಲ್ಲಿ 5652 ರನ್ ಗಳಿಸಿರುವ ರೋಹಿತ್, ಟೂರ್ನಿಯಲ್ಲಿ ಸಾರ್ವಕಾಲಿಕ ಸ್ಕೋರರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದ ಮುಂಬೈ ಇಂಡಿಯನ್ಸ್ ಈ ಬಾರಿಯ ಮೊದಲ ಜಯ ಸಾಧಿಸುವ ತವಕದಲ್ಲಿದೆ. ಮುಂಬೈ ಇಂಡಿಯನ್ಸ್ ಗೆ ಸೂರ್ಯ ಕುಮಾರ್ ಯಾದವ್ ಆಗಮನ ಬಲ ಹೆಚ್ಚಿಸಿದೆ.