Advertisement

ಏಕದಿನ ನಾಯಕತ್ವ , ಟೆಸ್ಟ್‌ ಉಪನಾಯಕತ್ವ ರೋಹಿತ್‌ ಪಾಲು

11:39 PM Dec 08, 2021 | Team Udayavani |

ನವದೆಹಲಿ: ವಿರಾಟ್‌ ಕೊಹ್ಲಿ ಅವರ ಏಕದಿನ ನಾಯಕತ್ವಕ್ಕೆ ಕುತ್ತು ಬಂದಿದೆ. ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದ್ದು, ರೋಹಿತ್‌ ಶರ್ಮ ಅವರನ್ನು ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟ್‌ ಕಪ್ತಾನನ ಹುದ್ದೆಯಿಂದ ತಾನಾಗಿ ಕೆಳಗಿಳಿದಿದ್ದ ಕೊಹ್ಲಿಗೆ, ಇಲ್ಲಿ ಆಯ್ಕೆ ಸಮಿತಿಯೇ ದಾರಿ ತೋರಿಸಿದೆ.

Advertisement

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ಸರಣಿಗೆಂದು ಬುಧವಾರ ಸಭೆ ಸೇರಿದ ಚೇತನ್‌ ಶರ್ಮ ನಾಯಕತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಈ ಮಹತ್ವದ ನಿರ್ಧಾರ ಪ್ರಕಟಿಸಿತು.

ಟೆಸ್ಟ್‌ ತಂಡದ ನಾಯಕರಾಗಿ ವಿರಾಟ್‌ ಕೊಹ್ಲಿ ಮುಂದುವರಿದಿದ್ದಾರೆ. ಸದ್ಯ ಅವರು ಟೆಸ್ಟ್‌ ತಂಡಕ್ಕಷ್ಟೇ ಕ್ಯಾಪ್ಟನ್‌ ಆಗಿದ್ದಾರೆ.

ಇನ್ನೊಂದು ನಿರೀಕ್ಷಿತ ಬದಲಾವಣೆಯಂತೆ, ಟೆಸ್ಟ್‌ ತಂಡದ ಉಪನಾಯಕತ್ವದಿಂದ ಅಜಿಂಕ್ಯ ರಹಾನೆ ಅವರನ್ನೂ ಕೆಳಗಿಳಿಸಲಾಗಿದೆ. ಈ ಜವಾಬ್ದಾರಿ ಕೂಡ ರೋಹಿತ್‌ ಶರ್ಮ ಪಾಲಾಗಿದೆ. ಹೀಗಾಗಿ ರೋಹಿತ್‌ಗೆ ಈಗ ಡಬಲ್‌ ಧಮಾಕಾ! ಆದರೆ ರಹಾನೆ ಟೆಸ್ಟ್‌ ತಂಡದಲ್ಲಿ ಮುಂದುವರಿದಿದ್ದಾರೆ.

ಟೆಸ್ಟ್‌: ಅಚ್ಚರಿಯ ಆಯ್ಕೆ
ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ಸರಣಿಗೆಂದು ಪ್ರಕಟಿಸಲಾದ ತಂಡದಲ್ಲೂ ಒಂದಿಷ್ಟು ಅಚ್ಚರಿ ಕಂಡುಬಂದಿದೆ. ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ ಮಿಂಚಿದ ಆರಂಭಕಾರ ಶುಭಮನ್‌ ಗಿಲ್‌, ಆಲ್‌ರೌಂಡರ್‌ ರವೀಂದ್ರ ಜಡೇಜ ಮತ್ತು ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅವರನ್ನು ಕೈಬಿಡಲಾಗಿದೆ. ಇವರೆಲ್ಲ ಗಾಯಾಳುಗಳು’ ಎಂಬ ಕಾರಣ ನೀಡಲಾಗಿದೆ.

Advertisement

ಸ್ಪಿನ್ನರ್‌ಗಳಾದ ಜಡೇಜ, ಅಕ್ಷರ್‌ ಪಟೇಲ್‌ ಸ್ಥಾನಕ್ಕೆ ಬದಲಿ ಸ್ಪಿನ್ನರ್‌ಗಳನ್ನು ಆರಿಸಲಾಗಿಲ್ಲ. ಆರ್‌. ಅಶ್ವಿ‌ನ್‌ ಮತ್ತು ಜಯಂತ್‌ ಯಾದವ್‌ ಅವರಷ್ಟೇ ಸ್ಪೆಷಲಿಸ್ಟ್‌ ಸ್ಪಿನ್ನರ್‌ಗಳಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸ್ಪಿನ್‌ ನಡೆಯದು ಎಂಬುದು ಇದಕ್ಕೆ ಕಾರಣವಾಗಿರಬಹುದು.

ಇದನ್ನೂ ಓದಿ:ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

6 ಮಂದಿ ವೇಗಿಗಳು:
ಹರಿಣಗಳ ನಾಡಿನ ಟ್ರ್ಯಾಕ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ಟೀಮ್‌ ಇಂಡಿಯಾದಲ್ಲಿ 6 ಮಂದಿ ಫಾಸ್ಟ್‌ ಬೌಲರ್ ಇದ್ದಾರೆ. ಫಾರ್ಮ್ನಲ್ಲಿಲ್ಲದ ಇಶಾಂತ್‌ ಶರ್ಮ ಕೂಡ ಇವರಲ್ಲೊಬ್ಬರು. ಉಳಿದವರೆಂದರೆ ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಸಿರಾಜ್‌ 4 ಮಂದಿ ಮೀಸಲು ಆಟಗಾರರೂ ತಂಡಲ್ಲಿದ್ದಾರೆ.

ತಂಡಕ್ಕೆ ವಾಪಸಾದ ಪ್ರಮುಖನೆಂದರೆ ಹನುಮ ವಿಹಾರಿ ಅವರನ್ನು ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ಕಡೆಗಣಿಸಿ ಭಾರತ ಎ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಇಲ್ಲಿ ವಿಹಾರಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಟೆಸ್ಟ್‌ ತಂಡ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್‌ ಪಂತ್‌, ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಸಿರಾಜ್‌.
ಮೀಸಲು ಆಟಗಾರರು: ನವದೀಪ್‌ ಸೈನಿ, ಸೌರಭ್‌ ಕುಮಾರ್‌, ದೀಪಕ್‌ ಚಹರ್‌, ಅರ್ಜಾನ್ ನಾಗ್ವಾಸ್ವಾಲ

Advertisement

Udayavani is now on Telegram. Click here to join our channel and stay updated with the latest news.

Next