Advertisement

ಶ್ರೀಲಂಕಾ ಸರಣಿ: ರೋಹಿತ್ ಶರ್ಮಾ ಟೆಸ್ಟ್ ನಾಯಕ; ರಹಾನೆ, ಪೂಜಾರ ಔಟ್

04:52 PM Feb 19, 2022 | Team Udayavani |

ಮುಂಬಯಿ: ಮುಂಬರುವ ಶ್ರೀಲಂಕಾ ಸರಣಿಗೆ ರೋಹಿತ್ ಶರ್ಮಾ ಟೆಸ್ಟ್ ನಾಯಕನಾಗಿ ನೇಮಕಗೊಂಡಿದ್ದಾರೆ. ಸರಣಿಯಿಂದ ದೀರ್ಘಕಾಲದವರೆಗೆ ಭಾರತದ ಮಧ್ಯಮ ಕ್ರಮಾಂಕದ ಆಧಾರವಾಗಿದ್ದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ.

Advertisement

ಶನಿವಾರ ಫೆ.19ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಆಯ್ಕೆಗಾರರು, ಟೆಸ್ಟ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂದು ಘೋಷಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಟಿ20 ಮತ್ತು ಟೆಸ್ಟ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ.

ಟೀಂ ಇಂಡಿಯಾ ಲಕ್ನೋ ಮತ್ತು ಧರ್ಮಶಾಲಾದಲ್ಲಿ ಮೂರು ಟಿ 20 ಪಂದ್ಯಗಳನ್ನು ಮತ್ತು ಮೊಹಾಲಿ ಮತ್ತು ಬೆಂಗಳೂರಿನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಸಜ್ಜಾಗಿದೆ.

ಶ್ರೀಲಂಕಾ ಸರಣಿಗೆ ಆಯ್ಕೆಗಾರರು ತಂಡವನ್ನು ಆಯ್ಕೆ ಮಾಡಿದ್ದು, ತಂಡ ಇಂತಿದೆ : ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಬ್ ಪಂತ್, ಕೆ ಎಸ್ ಭರತ್, ಆರ್ ಅಶ್ವಿನ್ (ಫಿಟ್‌ನೆಸ್‌ಗೆ ಒಳಪಟ್ಟು), ಆರ್ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜೆ ಬುಮ್ರಾ ( ವಿ.ಕೀ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್.

ಪಂದ್ಯಗಳ ವೇಳಾಪಟ್ಟಿ

Advertisement

ಮೊದಲ ಟಿ 20- ಫೆಬ್ರವರಿ 24 ರಂದು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋದಲ್ಲಿ ನಡೆಯಲಿದೆ.

ಎರಡನೇ ಟಿ 20 ಫೆ. 26 ರಂದು,ಮೂರನೇ ಟಿ 20 ಫೆ. 27 ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾದಲ್ಲಿ ನಡೆಯಲಿವೆ.

ಮೊದಲ ಟೆಸ್ಟ್ – ಮಾರ್ಚ್ 4 ರಿಂದ 8 ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ, ಚಂಡೀಗಢದಲ್ಲಿ , ಎರಡನೇ ಟೆಸ್ಟ್ – ಮಾರ್ಚ್ 12 ರಿಂದ 16 ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next