Advertisement

ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮ 9 ಸಾವಿರ ರನ್‌

08:08 AM Mar 19, 2021 | Team Udayavani |

ಅಹಮದಾಬಾದ್:  ಉಪನಾಯಕ ರೋಹಿತ್‌ ಶರ್ಮ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಪೂರ್ತಿಗೊಳಿಸಿದ ವಿಶ್ವದ 9ನೇ ಹಾಗೂ ಭಾರತದ ಕೇವಲ 2ನೇ ಬ್ಯಾಟ್ಸ್ ಮನ್‌ ಎಂಬ ದಾಖಲೆ ಬರೆದರು.

Advertisement

ಈ ಯಾದಿಯ ಮೊದಲಿಗ ವಿರಾಟ್‌ ಕೊಹ್ಲಿ. 4ನೇ ಪಂದ್ಯದಲ್ಲಿ 11 ರನ್‌ ಮಾಡಿದ ವೇಳೆ ರೋಹಿತ್‌ ಈ ಮೈಲುಗಲ್ಲು ನೆಟ್ಟರು. 13,296 ರನ್‌ ಪೇರಿಸಿರುವ ಕ್ರಿಸ್‌ ಗೇಲ್‌ ಈ ಯಾದಿಯ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:4ನೇ ಟಿ20 ಪಂದ್ಯ : ಪ್ರಜ್ವಲಿಸಿದ ಸೂರ್ಯ; ಸರಣಿ ಸಮಬಲಗೊಳಿಸಿದ ಭಾರತ

ಕೈರನ್‌ ಪೊಲಾರ್ಡ್‌ಗೆ ದ್ವಿತೀಯ ಸ್ಥಾನ (10,370). ಇವರಿಬ್ಬರೂ 10 ಸಾವಿರ ರನ್‌ ಗಡಿ ದಾಟಿದ್ದಾರೆ. ಉಳಿದವರೆಂದರೆ ಶೋಯಿಬ್‌ ಮಲಿಕ್‌, ಬ್ರೆಂಡನ್‌ ಮೆಕಲಮ್‌, ಡೇವಿಡ್‌ ವಾರ್ನರ್‌, ಆರನ್‌ ಫಿಂಚ್‌ ಮತ್ತು ಎಬಿ ಡಿ ವಿಲಿಯರ್ಸ್.

ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸರ್‌!

Advertisement

ರೋಹಿತ್‌ ಶರ್ಮ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ 7ನೇ ಬ್ಯಾಟ್ಸ್‌ಮನ್‌ ಎನಿಸಿದರು. ಉಳಿದವರೆಂದರೆ ಕಮ್ರಾನ್‌ ಅಕ್ಮಲ್‌, ಕರೀಂ ಸಾದಿಕ್‌, ಡ್ವೇನ್‌ ಸ್ಮಿತ್‌ (2 ಸಲ), ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ ಮತ್ತು ಹಜ್ರತುಲ್ಲ ಜಜಾಯ್‌.

Advertisement

Udayavani is now on Telegram. Click here to join our channel and stay updated with the latest news.

Next