ಪ್ರತಿಷ್ಠಿತ ವಿಸ್ಡನ್ ಸಂಸ್ಥೆ ಪ್ರತಿವರ್ಷ ನೀಡುವ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಐವರ ಹೆಸರನ್ನು ಘೋಷಿಸಿದ್ದು, ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈ ಯಾದಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ, ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ನಾಯಕಿ ಡೇನ್ ವ್ಯಾನ್ ನೀಕರ್ಕ್ ಇದರಲ್ಲಿ ಸ್ಥಾನ ಪಡೆದ ಉಳಿದ ಮೂವರು ಆಟಗಾರರು. ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್‌ನ 2022 ರ ಆವೃತ್ತಿಯಲ್ಲಿ ಇಂಗ್ಲೆಂಡ್ ನ ಜೋ ರೂಟ್ ಅವರನ್ನು ವಿಶ್ವದ ಪ್ರಮುಖ ಕ್ರಿಕೆಟಿಗ ಎಂದು ಹೆಸರಿಸಲಾಯಿತು. 2021ರಲ್ಲಿ ರೂಟ್ ಆರು ಶತಕಗಳನ್ನು ಗಳಿಸಿದರು.
ಇದನ್ನೂ ಓದಿ:ವಿಜಯ್ ಡ್ರೀಮ್ ಪ್ರಾಜೆಕ್ಟ್ ‘ಭೀಮ’ನಿಗೆ ಮುಹೂರ್ತ
“ಜಸ್ಪ್ರೀತ್ ಬುಮ್ರಾ ಕಳೆದ ಸಮ್ಮರ್ ನಲ್ಲಿ ಭಾರತದ ಎರಡು ಟೆಸ್ಟ್ ಗೆಲುವುಗಳಲ್ಲಿ ಪ್ರಮುಖರಾಗಿದ್ದರು, ಲಾರ್ಡ್ಸ್ ಪಂದ್ಯದಲ್ಲಿ 33 ರನ್‌ಗಳಿಗೆ ಮೂರು ವಿಕೆಟ್ ಪಡೆದರು ಮತ್ತು ರೋಮಾಂಚಕ ಘಟ್ಟದಲ್ಲಿ ಓಲಿ ಪೋಪ್ ಮತ್ತು ಜಾನಿ ಬೈರಿಸ್ಟೋ ಅವರನ್ನು ಸತತ ಓವರ್ ಗಳಲ್ಲಿ ಔಟ್ ಮಾಡಿ ಓವಲ್ ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು” ಎಂದು ವಿಸ್ಡನ್ ಸಂಪಾದಕ ಲಾರೆನ್ಸ್ ಬೂತ್ ಬರೆದಿದ್ದಾರೆ.