Advertisement
ಕಳೆದ ಐಪಿಎಲ್ ಕೂಟದ ಪಂಜಾಬ್ ಎದುರಿನ ಅ. 18ರ ಪಂದ್ಯದ ವೇಳೆ ರೋಹಿತ್ ಶರ್ಮ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಅನಂತರ ಅವರು 4 ಪಂದ್ಯಗಳಿಂದ ಹೊರಗುಳಿದಿದ್ದರು. ಕೊನೆಯ 3 ಪಂದ್ಯಗಳಿಗೆ ಮರಳಿ, ತಂಡದ ನೇತೃತ್ವ ವಹಿಸಿದರು. ಫೈನಲ್‌ನಲ್ಲಿ ಕಪ್ತಾನನ ಆಟವಾಡಿ ಮುಂಬೈ ಇಂಡಿಯನ್ಸ್‌ಗೆ 5ನೇ ಟ್ರೋಫಿ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Related Articles
“ರೋಹಿತ್ ಶರ್ಮ ಕೇವಲ ಶೇ. 70ರಷ್ಟು ಫಿಟ್‌ನೆಸ್ ಹೊಂದಿದ್ದಾರೆ. ಇನ್ನೂ ಶೇ. 30ರಷ್ಟು ಚೇತರಿಕೆ ಕಾಣಬೇಕಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ. ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಗಿರಿಸಲಾಯಿತು. ಟೆಸ್ಟ್ ಸರಣಿ ವೇಳೆ ಅವರು ಸಂಪೂರ್ಣವಾಗಿ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಗಂಗೂಲಿ ಹೇಳಿದರು.
Advertisement
ಆದರೆ ಪೂರ್ತಿ ಫಿಟ್‌ನೆಸ್ ಹೊಂದಿಲ್ಲದ ಕೀಪರ್ ವೃದ್ಧಿಮಾನ್ ಸಾಹಾ ಆಸ್ಟ್ರೇಲಿಯಕ್ಕೆ ತೆರಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಂಗೂಲಿ, “ಅವರ ಸಮಸದ್ಯೆ ಬಗ್ಗೆ ನಿಮಗೆ ಮಾಹಿತಿ ಇದೆಯೇ? ನಮಗೆ ಗೊತ್ತು, ಫಿಸಿಯೋಗೆ ಗೊತ್ತು, ಎನ್‌ಸಿಎಗೆ ತಿಳಿದಿದೆ. ಅವರಿಗೆ ಅವಳಿ ಸ್ವಾಯು ಸೆಳೆತದ ಸಮಸ್ಯೆ ಇದೆ. ಟೆಸ್ಟ್ ವೇಳೆ ಚೇತರಿಸುವ ನಂಬಿಕೆ ಇರುವುದರಿಂದ ಸಾಹಾ ಆಸ್ಟ್ರೇಲಿಯಕ್ಕೆ ತೆರಳಿದ್ದಾರೆ’ ಎಂದರು.