Advertisement

ಸೆಮಿ ಫೈನಲ್ ಗೂ ಮೊದಲೇ ಆಘಾತ: ನೆಟ್ಸ್ ನಲ್ಲಿ ಗಾಯಗೊಂಡ ಕ್ಯಾಪ್ಟನ್ ರೋಹಿತ್

11:03 AM Nov 08, 2022 | |

ಅಡಿಲೇಡ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ಬಲಗೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ.

Advertisement

ಅವರು ಭಾರತದ ಥ್ರೋ ಡೌನ್ ಸ್ಪೆಷಲಿಸ್ಟ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಸುಮಾರು 150 ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಬಂದ ಚೆಂಡು ರೋಹಿತ್ ಮುಂಗೈಗೆ ಬಡಿಯಿತು. ತಕ್ಷಣ ರೋಹಿತ್ ವೈದ್ಯಕೀಯ ಆರೈಕೆ ಪಡೆದರು. ಸ್ವಲ್ಪ ಚಿಕಿತ್ಸೆಯ ನಂತರ, ಅವರು ಮತ್ತೆ ನೆಟ್ಸ್ ನಲ್ಲಿ ಒಂದು ಚೆಂಡನ್ನು ಎದುರಿಸಲು ಪ್ರಯತ್ನಿಸಿದರು, ಆದರೆ ಬಳಿಕ ನೆಟ್‌ ನಿಂದ ಹೊರನಡೆದರು.

ನೆಟ್ಸ್ ಪಕ್ಕದಲ್ಲಿ ರೋಹಿತ್ ಐಸ್ ಬಾಕ್ಸ್ ಮೇಲೆ ಕುಳಿತು ಹೆಚ್ಚಿನ ಚಿಕಿತ್ಸೆ ಪಡೆದರು. ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಜತೆ ರೋಹಿತ್ ಸುದೀರ್ಘವಾಗಿ ಚರ್ಚೆ ನಡೆಸಿದರು.

ನವೆಂಬರ್ 10 ರಂದು ಅಡಿಲೇಡ್‌ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next